ಮಂಗಳೂರು:ಕೋವಿಡ್ -19 ಸೋಂಕಿನ ಶಂಕೆಯಿರುವ ಹಿನ್ನೆಲೆಯಲ್ಲಿ,ಮಂಗಳೂರಿನ 32 ಮಂದಿಯ ಗಂಟಲು ದ್ರವದ ಸ್ಯಾಂಪಲ್ ಪರೀಕ್ಷೆಗೆ ರವಾನೆ ಮಾಡಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ 32 ಮಂದಿಯ ಗಂಟಲು ದ್ರವ ಪರೀಕ್ಷೆಗೆ ರವಾನೆ - Coronavirus virus
ಕೊರೊನಾ ವೈರಸ್ ಶಂಕೆ ಹಿನ್ನೆಲೆ, ಮಂಗಳೂರಿನಿಂದ ಮತ್ತೆ 32 ಮಂದಿಯ ಗಂಟಲು ದ್ರವದ ಸ್ಯಾಂಪಲ್ ಪರೀಕ್ಷೆಗೆ ರವಾನೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಈ ಹಿಂದೆ ಪರೀಕ್ಷೆಗೆಂದು ಕಳುಹಿಸಿರುವ 90 ಮಂದಿಯ ಗಂಟಲು ದ್ರವದ ವರದಿ ಬಂದಿದೆ. ಅದರಲ್ಲಿ 89 ಜನರ ವದರಿ ನೆಗೆಟಿವ್ ಬಂದಿದ್ದು, ಓರ್ವನಿಗೆ ಪಾಸಿಟಿವ್ ಬಂದಿದೆ. 28 ಮಂದಿ ಅಬ್ಸರ್ವೇಷನ್ನಲ್ಲಿದ್ದು, 588 ಮಂದಿಯನ್ನ ಹೋಂ ಕ್ವಾರಂಟೈನ್ನಲ್ಲಿ ಇರಿಸಲಾಗಿದೆ. 10 ಮಂದಿಯನ್ನ ಮಂಗಳೂರಿನ ಇಎಸ್ಐ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ, ವೆನ್ಲಾಕ್ ಆಸ್ಪತ್ರೆಯ ಕ್ವಾರೆಂಟೈನ್ನಲ್ಲಿ ಯಾರಿಲ್ಲ.
5,485 ಮಂದಿ 28 ದಿನಗಳ ಹೋಂ ಕ್ವಾರಂಟೈನ್ ಮುಗಿಸಿದ್ದಾರೆ. ಮಂಗಳೂರಲ್ಲಿ ಈವರೆಗೆ 39,080 ಮಂದಿಯನ್ನ ಸ್ಕ್ರೀನಿಂಗ್ ಮಾಡಲಾಗಿದೆ. ಈವರೆಗೆ 714 ಮಂದಿಯ ಗಂಟಲು ದ್ರವದ ಪರೀಕ್ಷೆ ಮಾಡಲಾಗಿದ್ದು,713 ಜನರ ವರದಿ ಬಂದಿದೆ. ಅದರಲ್ಲಿ 700 ಮಂದಿಯ ನೆಗೆಟಿವ್ ವರದಿ ಬಂದಿದ್ದು,13 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಒಬ್ಬನ ವರದಿ ಬರಲು ಬಾಕಿಯಿದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.