ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು 17 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ನಾಲ್ವರು ಗುಣಮುಖರಾಗಿದ್ದಾರೆ.
ಇಂದು ಕೊರೊನಾ ದೃಢಪಟ್ಟ 17 ಮಂದಿಯಲ್ಲಿ 14 ಮಂದಿ ಸೌದಿ ಅರೇಬಿಯಾದಿಂದ ಬಂದವರು. ಇಬ್ಬರು ಮಹಾರಾಷ್ಟ್ರದಿಂದ ಬಂದಿದ್ದು, ಒಬ್ಬರು ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಸೌದಿ ಅರೇಬಿಯಾದಿಂದ ಜೂ. 5ರಂದು 12 ಮಂದಿ ಪುರುಷರು, ಜೂನ್ 8ರಂದು ಓರ್ವ ಪುರುಷ ಮತ್ತು ಜೂನ್ 10ರಂದು ಓರ್ವ ಪುರುಷ ಬಂದಿದ್ದರು. ಮುಂಬೈನಿಂದ ಜೂ. 9ರಂದು ಓರ್ವ ಪುರುಷ, ಜೂನ್ 8ರಂದು ಓರ್ವ ಮಹಿಳೆ ಆಗಮಿಸಿದ್ದರು.