ಕರ್ನಾಟಕ

karnataka

ಕಂದಾಯ ದಾಖಲೆಗಳನ್ನು ಜನಸಾಮಾನ್ಯರ ಮನೆಗೆ ತಲುಪಿಸುವ ಯೋಜನೆಗೆ ಚಾಲನೆ: ಸಂಸದ ನಳಿನ್ ಕುಮಾರ್

ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕ ರಾಜ್ಯ ಸರ್ಕಾರ ಕಂದಾಯ ದಾಖಲೆಗಳನ್ನು ಜನಸಾಮಾನ್ಯರ ಮನೆಗೆ ತಲುಪಿಸುವ ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಗೆ ದ.ಕ ಜಿಲ್ಲೆಯ ಬಂಟ್ವಾಳದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಚಾಲನೆ ನೀಡಿದರು.

By

Published : Mar 12, 2022, 4:38 PM IST

Published : Mar 12, 2022, 4:38 PM IST

Updated : Mar 12, 2022, 6:31 PM IST

to-provide-govt-documents-to-poor-govt-started-new-scheme
ಕಂದಾಯ ದಾಖಲೆಗಳನ್ನು ಜನಸಾಮಾನ್ಯರ ಮನೆಗೆ ತಲುಪಿಸುವ ಯೋಜನೆಗೆ ಚಾಲನೆ: ಬಂಟ್ವಾಳದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್

ಬಂಟ್ವಾಳ (ದಕ್ಷಿಣ ಕನ್ನಡ ) : ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕ ಸರ್ಕಾರ ಜನಸಾಮಾನ್ಯರ ದಾಖಲೆಗಳನ್ನು ಮನೆಗೆ ತಲುಪಿಸುವ ಯೋಜನೆ ಜಾರಿಗೊಳಿಸುವ ಮೂಲಕ ಇತಿಹಾಸ ಸೃಷ್ಟಿಸಿದೆ. ಇದರಿಂದ ರಾಜ್ಯದ ಲಕ್ಷಾಂತರ ರೈತರಿಗೆ ಪ್ರಯೋಜನವಾಗಲಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್​ ಹೇಳಿದರು.

ಮನೆಬಾಗಿಲಿಗೆ ಕಂದಾಯ ದಾಖಲೆಗಳನ್ನು ಒದಗಿಸುವ ಕಂದಾಯ ಸಚಿವ ಆರ್. ಅಶೋಕ್ ಅವರ ಮಹತ್ವಾಕಾಂಕ್ಷೆಯ ಯೋಜನೆಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಪಸ್ಥಿತಿಯಲ್ಲಿ ಅಮ್ಮುಂಜೆಯ ನೋಣಯ್ಯ ಮೂಲ್ಯ ಅವರ ಮನೆಗೆ ಆರ್.ಟಿ.ಸಿ, ಜಾತಿ, ಆದಾಯ ಸರ್ಟಿಫಿಕೇಟ್ ಮತ್ತು ನಕ್ಷೆಯನ್ನು ವಿತರಿಸುವ ಮೂಲಕ ಈ ಯೋಜನೆಗೆ ಚಾಲನೆ ನೀಡಲಾಯಿತು.

ಕಂದಾಯ ದಾಖಲೆಗಳನ್ನು ಜನಸಾಮಾನ್ಯರ ಮನೆಗೆ ತಲುಪಿಸುವ ಯೋಜನೆಗೆ ಚಾಲನೆ ನೀಡಿ ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿದರು..

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ರೈತರ ಕಣ್ಣೀರು ‌ಹಾಗೂ ಬೆವರನ್ನು ಒರೆಸುವ ಕಾರ್ಯಕ್ರಮವಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕಂದಾಯ ಸಚಿವ ಆರ್.ಅಶೋಕ್ ಅವರ ಪರಿಕಲ್ಪನೆಯಲ್ಲಿ ಮೂಡಿಬಂದಿದೆ. ಮುಂದಿನ ಮೂರ್ನಾಲ್ಕು ತಿಂಗಳಿನ ಒಳಗಾಗಿ ಈ ಯೋಜನೆ ಪೂರ್ಣಗೊಳ್ಳಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಂಟ್ವಾಳದ ಶಾಸಕ ರಾಜೇಶ್ ನಾಯ್ಕ್, ತಹಶೀಲ್ದಾರ್ ರಶ್ಮಿ ಎಸ್.ಆರ್, ಗ್ರಾಪಂ ಅಧ್ಯಕ್ಷ ವಾಮನ್ ಆಚಾರ್ಯ, ಉಪಾಧ್ಯಕ್ಷೆ ಪ್ರಮೀಳಾ, ಪಂಚಾಯಿತಿ ಸದಸ್ಯರಾದ ರವಿ ಸುವರ್ಣ, ಕಾರ್ತಿಕ್ ಬಲ್ಲಾಳ್, ಲೀಲಾವತಿ, ಲಕ್ಷ್ಮಿ, ರೊನಾಲ್ಡ್ ಡಿಸೋಜ, ಭಾಗೀರಥಿ, ರಾಧಾಕೃಷ್ಣ ತಂತ್ರಿ, ಶಿರಸ್ತೇದಾರ್ ನರೇಂದ್ರನಾಥ ಮಿತ್ತೂರು, ಕಂದಾಯ ನಿರೀಕ್ಷಕ ವಿಜಯ್, ಗ್ರಾಮಕರಣಿಕ ಪ್ರಶಾಂತ್, ಗ್ರಾಮಸಹಾಯಕ ರೂಪೇಶ್, ಪ್ರಮುಖರಾದ ವೆಂಕಟೇಶ ನಾವಡ, ನಂದರಾಮ ರೈ, ಗಣೇಶ ರೈ ಮಾಣಿ, ರಮಾನಾಥ ರಾಯಿ, ಯಶೋಧರ ಕರ್ಬೆಟ್ಟು, ಯಶವಂತ ಪೊಳಲಿ, ಸುಕೇಶ್ ಚೌಟ,ಪುರುಷೋತ್ತಮ ಶೆಟ್ಟಿ ವಾಮದಪದವು ಮತ್ತಿತರರು ಉಪಸ್ಥಿತರಿದ್ದರು.

ಓದಿ :ಕಾಂಗ್ರೆಸ್ ಮುಳುಗುತ್ತಿರುವ ಹಡಗು.. ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಗ್ಗೆ ಸಿ.ಎಂ. ಇಬ್ರಾಹಿಂ ಅಧಿಕೃತ ಮಾಹಿತಿ

Last Updated : Mar 12, 2022, 6:31 PM IST

ABOUT THE AUTHOR

...view details