ಕರ್ನಾಟಕ

karnataka

ETV Bharat / city

11 ವರ್ಷದ ಬಾಲಕಿ ಸೇರಿ ಮೂವರಿಗೆ ಕೊರೊನಾ ಸೋಂಕು.. - dakshinakannada corona cases

ಬೋಳೂರಿನ ಕೊರೊನಾ ಸೋಂಕಿತರ ಸಂಪರ್ಕದಲ್ಲಿದ್ದ 38 ವರ್ಷದ ಮಹಿಳೆ ಮತ್ತು 11 ವರ್ಷದ ಬಾಲಕಿಗೆ ಕೊರೊನಾ ದೃಢಪಟ್ಟಿದೆ. ಅದೇ ರೀತಿ ಬಂಟ್ವಾಳದ ಮೃತ ಮಹಿಳೆಯ ಸಂಪರ್ಕದಲ್ಲಿದ್ದ 16 ವರ್ಷದ ಬಾಲಕಿಗೂ ಕೊರೊನಾ ದೃಢಪಟ್ಟಿದೆ.

three corona positive case found in dakshinakannada
ದ.ಕ.ಜಿಲ್ಲೆಯಲ್ಲಿ 11 ವರ್ಷದ ಬಾಲಕಿ ಸೇರಿದಂತೆ ಮೂವರಿಗೆ ಕೊರೊನಾ ಸೋಂಕು ದೃಢ..!

By

Published : May 6, 2020, 1:17 PM IST

ದಕ್ಷಿಣಕನ್ನಡ :ಜಿಲ್ಲೆಯಲ್ಲಿ ಇಂದು 11 ವರ್ಷದ ಬಾಲಕಿ ಸೇರಿ ಮೂವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 28ಕ್ಕೆ ಏರಿಕೆಯಾಗಿದೆ.

ಮಂಗಳೂರು ಸಮೀಪದ ಬೋಳೂರಿನ ಕೊರೊನಾ ಸೋಂಕಿತರ ಸಂಪರ್ಕದಲ್ಲಿದ್ದ 38 ವರ್ಷದ ಮಹಿಳೆ ಮತ್ತು 11 ವರ್ಷದ ಬಾಲಕಿಗೆ ಕೊರೊನಾ ದೃಢಪಟ್ಟಿದೆ. ಅದೇ ರೀತಿ ಬಂಟ್ವಾಳದ ಮೃತ ಮಹಿಳೆಯ ಸಂಪರ್ಕದಲ್ಲಿದ್ದ 16 ವರ್ಷದ ಬಾಲಕಿಗೆ ಕೊರೊನಾ ದೃಢಪಟ್ಟಿದೆ.

28 ಪಾಸಿಟಿವ್‌ ಕೇಸ್‌ಗಳಲ್ಲಿ 12 ಮಂದಿ ಈಗಾಗಲೇ ಗುಣಮುಖರಾಗಿ ಮನೆಗೆ ವಾಪಸಾಗಿದ್ದಾರೆ. ಮೂವರು ಸಾವನ್ನಪ್ಪಿದ್ದು,13 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ABOUT THE AUTHOR

...view details