ಮಂಗಳೂರು:ಕಳ್ಳನೋರ್ವ ಪೊಲೀಸ್ ಇನ್‌ಸ್ಪೆಕ್ಟರ್ ಪುತ್ರನ 25 ಸಾವಿರ ರೂ. ಮೌಲ್ಯದ ಸೈಕಲ್ ಅನ್ನು ಕಳವು ಮಾಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಕೃತ್ಯದ ದೃಶ್ಯ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ.
ಮಂಗಳೂರು: ಇನ್‌ಸ್ಪೆಕ್ಟರ್ ಪುತ್ರನ ಸೈಕಲ್ ಕದ್ದೊಯ್ದ ಖದೀಮ - Mangalore Crime news
ಸುರತ್ಕಲ್ ವೃತ್ತ ನಿರೀಕ್ಷಕರಾಗಿರುವ ಶರೀಫ್ ಅವರು ನಗರದ ಉರ್ವ ಮಾರುಕಟ್ಟೆ ಬಳಿಯ ಚೈತನ್ಯ ಅಪಾರ್ಟ್‌ಮೆಂಟ್‌ನಲ್ಲಿ ಕುಟುಂಬದೊಂದಿಗೆ ವಾಸಿಸುತ್ತಿದ್ದಾರೆ. ಇದೇ ಕಟ್ಟಡದ ಪಾರ್ಕಿಂಗ್ ಸ್ಥಳದಲ್ಲಿ ಇರಿಸಲಾಗಿದ್ದ ಅವರ ಪುತ್ರನ ಸೈಕಲ್‌ನ್ನು ಕಳವುಗೈಯ್ಯಲಾಗಿದೆ. ಆರೋಪಿಯ ಚಹರೆ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಇನ್ನು ಇದೇ ಶಂಕಿತ ಆರೋಪಿ ಅದೇ ದಿನ ಪಕ್ಕದ ಇನ್ನೊಂದು ಅಪಾರ್ಟ್ಮೆಂಟ್ಗೂ ನುಗ್ಗಿದ್ದು, ಅಲ್ಲಿ ಕಳವಿಗಾಗಿ ಹುಟುಕಾಟ ನಡೆಸಿದ್ದಾನೆ. ಈ ದೃಶ್ಯ ಕೂಡಾ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪೊಲೀಸರು ಸೈಕಲ್ ಕದ್ದ ಕಳ್ಳನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.