ಮಂಗಳೂರು :ನಗರದಲ್ಲಿ ಎರಡು ಮನೆಗಳಿಂದ 10 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ (Theft)ವಾಗಿರುವ ಘಟನೆ ನಡೆದಿದೆ.
ಮಣ್ಣಗುಡ್ಡೆ ಗಾಂಧಿನಗರ 5ನೇ ಕ್ರಾಸ್ನಲ್ಲಿರುವ ಎರಡು ಮನೆಗಳಿಗೆ ನುಗ್ಗಿದ ಕಳ್ಳರು ಚಿನ್ನಾಭರಣಗಳನ್ನು ದೋಚಿದ್ದಾರೆ. ಇದರ ಸನಿಹದಲ್ಲಿರುವ ಮತ್ತೊಂದು ಮನೆಯಲ್ಲಿಯೂ ಕಳವಿಗೆ ವಿಫಲ ಯತ್ನ ನಡೆದಿದೆ ಎನ್ನಲಾಗ್ತಿದೆ.
ಮನೆಗೆ ನುಗ್ಗಿ 10 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು : ಸಿಸಿಟವಿ ದೃಶ್ಯ ಮಣ್ಣಗುಡ್ಡೆಯ ನಿವಾಸಿ ಲಕ್ಷ್ಮಣ್ ಕಾಮತ್ ಮತ್ತು ರಾಮಚಂದ್ರ ಭಂಡಾರಿ ಎಂಬುವರ ಮನೆಯಲ್ಲಿ ಕಳವು ನಡೆದಿದೆ. ಲಕ್ಷ್ಮಣ್ ಕಾಮತ್ ಅವರ ಒಂದನೇ ಮಹಡಿಗೆ ನುಗ್ಗಿದ ಕಳ್ಳರು 6.74ಲಕ್ಷ ರೂ. ಮೌಲ್ಯದ ಚಿನ್ನಾಭರಣ, ರಾಮಚಂದ್ರ ಭಂಡಾರಿ ಎಂಬುವರ ಮನೆಯಿಂದ 3.86 ಲಕ್ಷ ರೂ. ಮೌಲ್ಯದ ನಗದು, ಚಿನ್ನಾಭರಣವನ್ನು ಕದ್ದು ಪರಾರಿಯಾಗಿದ್ದಾರೆ. ಮನೆಯವರು ನಿದ್ದೆಯಲ್ಲಿದ್ದ ವೇಳೆ ಕಳ್ಳತನ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ:ಜಿಂಕೆ ಮಾಂಸ ಕತ್ತರಿಸುತ್ತಿದ್ದ ಮೂವರು ಖದೀಮರು ಅರೆಸ್ಟ್