ಕರ್ನಾಟಕ

karnataka

ETV Bharat / city

ಭಟ್ಕಳದಲ್ಲಿ ಮನೆ ಬಾಗಿಲು ಮುರಿದು ಚಿನ್ನಾಭರಣ ಕಳ್ಳತನ: ಆರೋಪಿ ಅರೆಸ್ಟ್​ - theft arrest news

ಮನೆ ಬಾಗಿಲು ಮುರಿದು ಲಕ್ಷಾಂತರ ರೂ. ಮೌಲ್ಯದ ಆಭರಣ ಕಳ್ಳತನ ಮಾಡಿದ್ದ ಆರೋಪಿಯನ್ನು ಭಟ್ಕಳ ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಅರೆಸ್ಟ್​
ಆರೋಪಿ ಅರೆಸ್ಟ್​

By

Published : Oct 7, 2021, 12:00 PM IST

ಭಟ್ಕಳ: ತಾಲೂಕಿನ ತಗ್ಗರಗೋಡದಲ್ಲಿ ಮನೆ ಬಾಗಿಲು ಮುರಿದು ಲಕ್ಷಾಂತರ ರೂ. ಮೌಲ್ಯದ ಆಭರಣ ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಟ್ಕಳ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಶೇಡುಕುಳಿ ಹೊಂಡ ನಿವಾಸಿ ಖಾಜಾ ಅಬ್ದುಲ್ ಸತ್ತಾರ್ ಬಂಧಿತ ಆರೋಪಿ. ಈತ ಕಳೆದ ಆಗಸ್ಟ 28 ರಂದು ತಾಲೂಕಿನ ತಗ್ಗರಗೋಡದ ಬಿಬಿ ಫಾತಿಮಾ ಅಬ್ದುಲ್ ರಜಾಕ್ ಶೇಖ್ ಎನ್ನುವರ ಮನೆ ಬಾಗಿಲು ಒಡೆದು 3 ಕಿವಿ ಓಲೆ, 2 ಉಂಗುರ, 1 ನೆಕ್ಲೆಸ್, ಬಂಗಾರದ ಬಳೆ, ಮೊಬೈಲ್ ಸೇರಿದಂತೆ ಒಟ್ಟು 5 ಲಕ್ಷ 20 ಸಾವಿರ ರೂ. ಮೌಲ್ಯದ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದ.

ಈ ಕುರಿತು ಪ್ರಕರಣ ದಾಖಲಿಸಿಕೊಂಡ ಭಟ್ಕಳ ನಗರ ಠಾಣೆ ಪೊಲೀಸರು, ತನಿಖೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆಭರಣ ಕಳ್ಳತನ ಮಾಡಿದ್ದ ಆರೋಪಿ ಬಂಧನ

ABOUT THE AUTHOR

...view details