ಮಂಗಳೂರು: ಕಾಂಗ್ರೆಸ್ ನಾಯಕನ ಪರ ಪೋಸ್ಟ್ ಹಾಕಿದ ವಿಚಾರದಲ್ಲಿ ಎರಡು ತಂಡಗಳ ನಡುವೆ ಗಲಾಟೆ ನಡೆದಿದೆ. ಈ ಘಟನೆ ಸಂಬಂಧ 5 ಮಂದಿಯನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ.
ಮಂಗಳೂರಿನ ಮೂಡುಶೆಡ್ಡೆಯಲ್ಲಿ ಅಷ್ಪಕ್ ಎಂಬಾತ ಕಾಂಗ್ರೆಸ್ ನಾಯಕರೊಬ್ಬರ ಪರ ಪೋಸ್ಟ್ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಿದ್ದ. ಇದಕ್ಕೆ ಆಕ್ಷೇಪಿಸಿ ವಿವೇಕಾನಂದ ಮತ್ತು ವೀರ್ಷ್ ಎಂಬುವರು ಬೆದರಿಸಿ ಹಲ್ಲೆ ನಡೆಸಿದ್ದರು. ಇದರಿಂದ ಆಕ್ರೋಶಗೊಂಡ ಅಷ್ಪಕ್‌ನು ತನ್ನ ತಂಡದೊಂದಿಗೆ ಬಂದು ತಲ್ವಾರ್ ತೋರಿಸಿ ಬೆದರಿಸಿದ್ದರು.
ಪ್ರಕರಣದ ಕುರಿತಂತೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಮಾಹಿತಿ ನೀಡಿರುವುದು.. ಈ ವೇಳೆ ವಿವೇಕಾನಂದ ಅಂಗಡಿಯೊಂದರ ಒಳಗೆ ಹೋಗಿ ಪಾರಾಗಿದ್ದ. ಈ ಗಲಾಟೆಯ ದೃಶ್ಯವನ್ನು ಯುವತಿಯೊಬ್ಬಳು ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದರು. ಅದೇ ವಿಡಿಯೋ ವೈರಲ್ ಆಗಿತ್ತು.
ಇದನ್ನೂ ಓದಿ:ಸಹೋದರ ಸಂಬಂಧಿಯಿಂದಲೇ ವಿವಾಹಿತೆಯ ಮೇಲೆ ಅತ್ಯಾಚಾರ; ಯಾದಗಿರಿಯಲ್ಲಿ ಆರೋಪಿ ಅರೆಸ್ಟ್
ವಿವೇಕಾನಂದಗೆ ತಲ್ವಾರ್ ತೋರಿಸಿ ಬೆದರಿಕೆ ಹಾಕಿದ ಐದು ಮಂದಿಯನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.