ಕರ್ನಾಟಕ

karnataka

ETV Bharat / city

ತ್ರಿಕೋನ ಪ್ರೇಮ ಪ್ರಕರಣ ದುರಂತ ಅಂತ್ಯ.. ಅತಿಯಾದ ವಾಂಛೆಗೆ ಬಿದ್ದು ಪ್ರಾಣ ಕಳ್ಕೊಂಡ ಯುವಕ..

ಮಾತುಕತೆಗೆಂದು ಸೋಮೇಶ್ವರ ಬೀಚ್​ಗೆ ಬಂದ ಪ್ರೇಯಸಿಯರಿಬ್ಬರನ್ನು ಪ್ರಿಯಕರ ಲಾಯ್ಡ್ ಡಿಸೋಜ ಅಲ್ಲಿಯೇ ಇದ್ದ ರುದ್ರಪಾದೆಗೆ ಕರೆದೊಯ್ದಿದ್ದಾನೆ. ಅಲ್ಲಿ ಮಾತುಕತೆ ನಡೆಸುತ್ತಿದ್ದ ಸಂದರ್ಭ ಘಟನೆಯಿಂದ ಮನನೊಂದ ಪ್ರೇಯಸಿ ಅಶ್ವಿತಾ ಫೆರಾವೊ ಏಕಾಏಕಿ ರುದ್ರಪಾದೆಯಿಂದ ಸಮುದ್ರಕ್ಕೆ ಹಾರಿದ್ದಾಳೆ. ಆಕೆಯ ರಕ್ಷಣೆ ಮಾಡಲೆಂದು ಲಾಯ್ಡ್ ಡಿಸೋಜ ಕೂಡ ಸಮುದ್ರಕ್ಕೆ ಹಾರಿದ್ದಾನೆ..

triangle love case
ಪ್ರಾಣ ಕಳೆದುಕೊಂಡ ಯುವಕ

By

Published : Jan 29, 2022, 7:34 PM IST

ಮಂಗಳೂರು :ಇಬ್ಬರು ಯುತಿಯರೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದ ಯುವಕ. ಈ ವಿಚಾರ ಪ್ರೇಯಸಿಯರಿಗೆ ತಿಳಿದಾಗ ಪೀಕಲಾಟಕ್ಕೆ ಬಿದ್ದು, ಅದನ್ನು ಸರಿಪಡಿಸಲೆಂದು ಹೋಗಿ ತಾನೇ ಬಲಿಯಾಗಿದ್ದಾನೆ. ಅಲ್ಲದೇ ಓರ್ವ ಯುವತಿಯ ಸ್ಥಿತಿಯೂ ಗಂಭೀರವಾಗಿದೆ.

ಮಂಗಳೂರಿನ ಹೊರವಲಯದಲ್ಲಿರುವ ಮುನ್ನೂರು ಗ್ರಾಮದ ಸೋಮನಾಥ ಉಳಿಯ ನಿವಾಸಿ ಲಾಯ್ಡ್ ಡಿಸೋಜ(28) ಪ್ರಾಣ ಕಳೆದುಕೊಂಡ ಯುವಕ. ಈತ ಕಳೆದ 8 ವರ್ಷಗಳಿಂದ ಕೋಟೆಕಾರು ಪಾನೀರು ನಿವಾಸಿ ಅಶ್ವಿತಾ ಫೆರಾವೊ(22) ಎಂಬಾಕೆಯನ್ನು ಪ್ರೀತಿಸುತ್ತಿದ್ದ. ಆಕೆಯೂ ಈತನನ್ನು ಪ್ರೀತಿಸುತ್ತಿದ್ದಳು.

ಮೃತ ಯುವಕನ ಪ್ರೇಯಸಿ ಡಾಕ್ಲಿನ್​

ಈ ನಡುವೆ ಲಾಯ್ಡ್ ಡಿಸೋಜನಿಗೆ ತೊಕ್ಕೊಟ್ಟು ಚೆಂಬುಗುಡ್ಡೆ ನಿವಾಸಿ ಡಾಕ್ಲಿನ್ ಎಂಬ ಯುವತಿಯ ಪರಿಚಯವಾಗಿದೆ. ಬಳಿಕ ಇಬ್ಬರ ಮಧ್ಯೆ ಪ್ರೇಮಾಂಕುರವಾಗಿದೆ. ಇದು ಮೊದಲ ಪ್ರೇಯಸಿ ಅಶ್ವಿತಾಗೆ ಗೊತ್ತಾಗಿದೆ. ಆಕೆ ಈ ಬಗ್ಗೆ ತಗಾದೆ ತೆಗೆದಿದ್ದಾಳೆ. ಇದನ್ನು ಸರಿಪಡಿಸಲೆಂದು ಲಾಯ್ಡ್ ಡಿಸೋಜ ಇಬ್ಬರು ಪ್ರೇಯಸಿಯರನ್ನು ಸೋಮೇಶ್ವರ ಕಡಲ ಕಿನಾರೆಗೆ ಕರೆಸಿದ್ದಾನೆ.

ಮೃತ ಯುವಕನ ಪ್ರೇಯಸಿ ಅಶ್ವಿತಾ

ಮಾತುಕತೆಗೆಂದು ಸೋಮೇಶ್ವರ ಬೀಚ್​ಗೆ ಬಂದ ಪ್ರೇಯಸಿಯರಿಬ್ಬರನ್ನು ಪ್ರಿಯಕರ ಲಾಯ್ಡ್ ಡಿಸೋಜ ಅಲ್ಲಿಯೇ ಇದ್ದ ರುದ್ರಪಾದೆಗೆ ಕರೆದೊಯ್ದಿದ್ದಾನೆ. ಅಲ್ಲಿ ಮಾತುಕತೆ ನಡೆಸುತ್ತಿದ್ದ ಸಂದರ್ಭ ಘಟನೆಯಿಂದ ಮನನೊಂದ ಪ್ರೇಯಸಿ ಅಶ್ವಿತಾ ಫೆರಾವೊ ಏಕಾಏಕಿ ರುದ್ರಪಾದೆಯಿಂದ ಸಮುದ್ರಕ್ಕೆ ಹಾರಿದ್ದಾಳೆ. ಆಕೆಯ ರಕ್ಷಣೆ ಮಾಡಲೆಂದು ಲಾಯ್ಡ್ ಡಿಸೋಜ ಕೂಡ ಸಮುದ್ರಕ್ಕೆ ಹಾರಿದ್ದಾನೆ.

ಇದನ್ನು ಗಮನಿಸಿದ ಕಾವಲು ಪಡೆಯ ಸಿಬ್ಬಂದಿ ತಕ್ಷಣ ರಕ್ಷಣಾ ಕಾರ್ಯಾಚರಣೆ ನಡೆಸಿ, ಅಶ್ವಿತಾ, ಲಾಯ್ಡ್ ಡಿಸೋಜರನ್ನು ರಕ್ಷಿಸಿ ದಡಕ್ಕೆ ತಂದರೂ ಯುವಕ ಡಿಸೋಜ ಮೃತಪಟ್ಟಿದ್ದಾನೆ. ಯುವತಿ ಅಶ್ವಿತಾ ಫೆರಾವೊನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆ ಗಂಭೀರ ಸ್ಥಿತಿಯಲ್ಲಿದ್ದಾಳೆ ಎಂದು ತಿಳಿದು ಬಂದಿದೆ.

ಇಬ್ಬರು ಪ್ರಿಯತಮೆಯರನ್ನು ಸಂಭಾಳಿಸಲು ಹೋಗಿರುವ ಪ್ರಿಯಕರ ಲಾಯ್ಡ್ ಡಿಸೋಜನಿಗೆ ಆತನ ಪ್ರೀತಿಯೇ ಮುಳುವಾಗಿದೆ. ಇದೀಗ ಈ ತ್ರಿಕೋನ ಪ್ರೇಮ ಪ್ರಕರಣ ದುರಂತ ಅಂತ್ಯ ಕಂಡಿದೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ABOUT THE AUTHOR

...view details