ಕರ್ನಾಟಕ

karnataka

ETV Bharat / city

₹ 67,685 ಹಣವಿದ್ದ ಪರ್ಸ್​ ಮರಳಿಸಿ ಪ್ರಾಮಾಣಿಕತೆ ಮೆರೆದ ಕೇರಳಿಗ - ಅಭಿನಂದನೆ

ಇಲ್ಲಿನ ಸೆಂಟ್ರಲ್ ರೈಲು ನಿಲ್ದಾಣದ ರಸ್ತೆಯಲ್ಲಿ ಸಿಕ್ಕ ಪರ್ಸನ್ನು ಕಳೆದುಕೊಂಡಿದ್ದ ವ್ಯಕ್ತಿಗೆ ಮರಳಿಸಿ ಕೇರಳ ಮೂಲದ ನಾಗರಿಕ ಮತ್ತು ರೈಲ್ವೆ ಪೊಲೀಸರು ಪ್ರಾಮಾಣಿಕತೆ ಮರೆದಿದ್ದಾರೆ.

the-police-who-returned-the-purse

By

Published : Oct 5, 2019, 11:23 PM IST

ಮಂಗಳೂರು:ಇಲ್ಲಿನ ಸೆಂಟ್ರಲ್ ರೈಲು ನಿಲ್ದಾಣದ ರಸ್ತೆಯಲ್ಲಿ ಸಿಕ್ಕ ಪರ್ಸ್​ ಅನ್ನು ಕಳೆದುಕೊಂಡಿದ್ದ ವ್ಯಕ್ತಿಗೆ ಮರಳಿಸಿ ಕೇರಳ ಮೂಲದ ನಾಗರಿಕ ಮತ್ತು ರೈಲ್ವೆ ಪೊಲೀಸರು ಪ್ರಾಮಾಣಿಕತೆ ಮರೆದಿದ್ದಾರೆ.

ಮಂಗಳೂರಿನ ಮುಹಮ್ಮದ್ ಸಕೀರ್ (28) ಕಳೆದುಕೊಂಡವರು. ಕಾಸರಗೋಡಿನ ಹಿರಿಯ ನಾಗರಿಕ ಜಯಪ್ರಕಾಶ್ ಶೆಣೈ (64) ಪರ್ಸ್ ಮರಳಿಸಿದವರು.

ಅಕ್ಟೋಬರ್​ 4ರಂದು ಬೆಳಿಗ್ಗೆ 8.45ರ ಸುಮಾರಿಗೆ ಶೆಣೈ ಅವರಿಗೆ ರೈಲು ನಿಲ್ದಾಣ ಸಂಪರ್ಕ ರಸ್ತೆಯಲ್ಲಿ ಪರ್ಸ್ ಸಿಕ್ಕಿತ್ತು. ಅದರಲ್ಲಿ ₹ 67,685 ನಗದು, ನಾಲ್ಕು ಎಟಿಎಂ ಕಾರ್ಡ್‌, ಎರಡು ಡ್ರೈವಿಂಗ್ ಲೈಸನ್ಸ್‌ಗಳಿದ್ದವು. ಆ ಪರ್ಸ್​ ಅನ್ನು ರೈಲ್ವೆ ಸುರಕ್ಷತಾ ಪಡೆಯ (ಆರ್​ಪಿಎಫ್) ಇನ್‌ಸ್ಪೆಕ್ಟರ್ ಮನೋಜ್ ಕುಮಾರ್ ಅವರಿಗೆ ಹಸ್ತಾಂತರಿಸಿದರು.

ಇನ್‌ಸ್ಪೆಕ್ಟರ್ ಅವರು ಪರ್ಸ್‌ನಲ್ಲಿದ್ದ ವಿಳಾಸದ ಮೂಲಕ ಅದರ ವಾರಸುದಾರ ಮುಹಮ್ಮದ್ ಸಕೀರ್ ಅವರನ್ನು ಸಂಪರ್ಕಿಸಿ ಪರ್ಸ್​ ಮರಳಿಸಿದರು. ಈ ಕಾರ್ಯಕ್ಕೆ ಸಕೀರ್ ಪೊಲೀಸರಿಗೆ ಧನ್ಯವಾದ ಹೇಳಿದರು.

ಇದೇ ವೇಳೆ ಡೆಪ್ಯುಟಿ ಸ್ಟೇಷನ್ ಮ್ಯಾನೇಜರ್ ಕಿಶನ್ ಅವರು ಮನೋಜ್‌ಕುಮಾರ್ ಹಾಗೂ ನಾಗರಿಕ ಜಯಪ್ರಕಾಶ್ ಶೆಣೈ ಅವರನ್ನು ಅಭಿನಂದಿಸಿ ಸನ್ಮಾನಿಸಿದರು.

ABOUT THE AUTHOR

...view details