ಕರ್ನಾಟಕ

karnataka

ETV Bharat / city

ಬಿಜೆಪಿಯ ರಾಷ್ಟ್ರೀಯ ನಾಯಕರೇ ಆಪರೇಷನ್​​ ಕಮಲದ ರೂವಾರಿಗಳು: ಐವನ್​​ ಡಿಸೋಜ - undefined

ಪ್ರಸ್ತುತ ರಾಜ್ಯದಲ್ಲಿ ಉದ್ಭವವಾಗಿರುವ ರಾಜಕೀಯ ವಿದ್ಯಮಾನಗಳಿಗೆ ಬಿಜೆಪಿ ನೇರ ಹೊಣೆ. ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನಕ್ಕೆ ಬಿಜೆಪಿ ಹಲವು ಬಾರಿ ಕೈ ಹಾಕಿದೆ-ಐವನ್ ಡಿಸೋಜ

By

Published : Jul 13, 2019, 1:49 PM IST

ಮಂಗಳೂರು: ಪ್ರಸ್ತುತ ರಾಜ್ಯದಲ್ಲಿ ಉದ್ಭವವಾಗಿರುವ ರಾಜಕೀಯ ವಿದ್ಯಮಾನಗಳಿಗೆ ಬಿಜೆಪಿ ನೇರ ಹೊಣೆ. ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನಕ್ಕೆ ಬಿಜೆಪಿ ಹಲವು ಬಾರಿ ಕೈ ಹಾಕಿದೆ ಎಂದು ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ ಆರೋಪಿಸಿದರು.

ನಗರದ ಲಾಲ್​ಬಾಗ್​ನಲ್ಲಿ ಮಾತನಾಡಿದ ಅವರು, ಬಿಜೆಪಿಯ ರಾಷ್ಟ್ರೀಯ ನಾಯಕರೇ ಆಪರೇಷನ್ ಕಮಲದ ರೂವಾರಿಗಳಾಗಿದ್ದಾರೆ. ಚುನಾಯಿತ ಪ್ರತಿನಿಧಿಗಳು ಪಕ್ಷಾಂತರ ಆಗುವುದಿಲ್ಲ ಎಂದು ಹೇಳಲಾಗದು. ಆದರೆ, ಕಾನೂನಿನ ನಿಯಮಗಳನ್ನೇ ಉಲ್ಲಂಘನೆ ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಸಕರ ರಾಜೀನಾಮೆ ಕೊಡಿಸಿ, ಸದನದ ಬಲವನ್ನೇ ಕಡಿತಗೊಳಿಸಿ ನಮ್ಮದೇ ಬಹುಮತ ಹೆಚ್ಚಿದೆ ಎಂದು ಹೇಳುವ ಮಟ್ಟಕ್ಕೆ ರಾಜಕೀಯ ಕುತಂತ್ರ ನಡೆಯುತ್ತಿದೆ. ಶಾಸಕರಿಗೆ ಆಮಿಷವೊಡ್ಡಿ ಕಾಂಗ್ರೆಸ್​​ಅನ್ನು ಮುಗಿಸುವ ಹುನ್ನಾರ ನಡೆಸಲು ಮುಂದಾಗಿರುವ ಬಿಜೆಪಿಯ ಆಪರೇಷನ್​ ಕಮಲ ಯಶಸ್ವಿಯಾಗುವುದಿಲ್ಲ. ಇದೆಲ್ಲದಕ್ಕೂ ಅಮಿತ್ ಶಾ ಹಾಗೂ ನರೇಂದ್ರ ಮೋದಿ ನೇರ ಹೊಣೆ ಎಂದು ದೂರಿದರು.

ಇಂದು ಬಿಜೆಪಿಯ ಬಣ್ಣ ಬಯಲಾಗಿದ್ದು, ಬಿಜೆಪಿಯವರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿಲ್ಲ ಎಂಬುದು ಸ್ಪಷ್ಟವಾಗಿ ಈ ರಾಜ್ಯದ ಜನತೆಗೆ ಮನದಟ್ಟಾಗಿದೆ. ಪಕ್ಷಾಂತರ ನಿಷೇಧ ಕಾನೂನು ಏನಿದೆ ಅದೆಲ್ಲವನ್ನೂ ಗಾಳಿಗೆ ತೂರಾಟ ಮಾಡಿರುವ ಬಿಜೆಪಿಯ ಈ ವರ್ತನೆ ತೀರಾ ಖಂಡನೀಯ.

ಶಾಸಕರು ರಾಜೀನಾಮೆ ಕೊಡಲು ಕಾರಣ ಏನು ಎಂಬುದರ ಬಗ್ಗೆ ವಿಚಾರಣೆ ಮಾಡಬೇಕು ಎಂದು ಸ್ಪೀಕರ್ ತಿಳಿಸಿದ್ದಾರೆ. ಸ್ಪೀಕರ್ ಅದನ್ನು ಸರಿಯಾಗಿ ಪಾಲಿಸುತ್ತಿದ್ದಾರೆ. ಸಂವಿಧಾನ ವಿರೋಧಿಯಾಗಿ ರಾಜೀನಾಮೆ ನೀಡಿ ಯಾರು ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದಾರೋ ಅವರನ್ನು ಅನರ್ಹಗೊಳಿಸಬೇಕು ಎಂಬುದು ನಮ್ಮ ಉದ್ದೇಶ. ಅಲ್ಲದೆ ಇಂತಹ ಘಟನೆಗಳು ಪುನರಾವರ್ತನೆ ಆಗದಂತೆ ಐತಿಹಾಸಿಕ ನಿರ್ಧಾರವನ್ನು ಸ್ಪೀಕರ್ ತೆಗೆದುಕೊಳ್ಳಬೇಕು. ಅದು ಮಾದರಿಯಾಗಬೇಕು ಎಂದು ಅಭಿಪ್ರಾಯಪಟ್ಟರು.

For All Latest Updates

TAGGED:

ABOUT THE AUTHOR

...view details