ಮಂಗಳೂರು: ಬಾಲಕ ಆಟವಾಡುತ್ತಿದ್ದಾಗ ಹಗ್ಗ ಕುತ್ತಿಗೆಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ಮಂಗಳೂರಿನ ಕೃಷ್ಣಾಪುರದಲ್ಲಿ ಗುರುವಾರ ನಡೆದಿದೆ.
ಆಟವಾಡುತ್ತಿದ್ದಾಗ ಹಗ್ಗ ಕುತ್ತಿಗೆಗೆ ಸಿಲುಕಿ ಬಾಲಕ ಸಾವು - The death 14 years old boy in manglure
ಶಾಲೆಯಿಂದ ಬಂದು ಮನೆಯ ಕಿಟಿಕಿ ಬಳಿ ಹಗ್ಗದೊಂದಿಗೆ ಆಟವಾಡುತ್ತಿದ್ದಾಗ ಹಗ್ಗ ಕುತ್ತಿಗೆಗೆ ಸಿಲುಕಿ ಬಾಲಕ ಸಾವನ್ನಪ್ಪಿರುವ ಘಟನೆ ಮಂಗಳೂರಿನ ಕೃಷ್ಣಾಪುರದಲ್ಲಿ ನಡೆದಿದೆ.
ಬಾಲಕ ಸಾವು
ಸುರತ್ಕಲ್ ಕೃಷ್ಣಾಪುರದ ದರ್ಶನ್ (14) ಮೃತ ಬಾಲಕ. ಕಾಟಿಪಳ್ಳದ ಖಾಸಗಿ ಶಾಲೆಯಲ್ಲಿ 9 ನೇ ತರಗತಿ ಓದುತ್ತಿದ್ದ. ಸಂಜೆಯ ವೇಳೆ ಶಾಲೆಯಿಂದ ಬಂದು ಮನೆಯಲ್ಲಿಯೇ ಕಿಟಿಕಿ ಬಳಿ ಹಗ್ಗದೊಂದಿಗೆ ಆಟವಾಡುತ್ತಿದ್ದ. ಈ ವೇಳೆ ಹಗ್ಗ ಕುತ್ತಿಗೆಗೆ ಬಿಗಿದು ಉಸಿರುಗಟ್ಟಿ ಬಾಲಕ ಸಾವನ್ನಪ್ಪಿದ್ದಾನೆ.
ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.