ಕರ್ನಾಟಕ

karnataka

ETV Bharat / city

ಮಹಾನಗರ ಪಾಲಿಕೆಯ ನೀರಿನ ದರ ಏರಿಕೆಗೆ ಕಾಂಗ್ರೆಸ್ ಪಕ್ಷವೇ ಕಾರಣ: ವೇದವ್ಯಾಸ ಕಾಮತ್ - Congress party increase in water prices

ಮಹಾನಗರ ಪಾಲಿಕೆಯ ನೀರಿನ ದರ ಏರಿಕೆಗೆ ಸಂಪೂರ್ಣವಾಗಿ ಕಾಂಗ್ರೆಸ್ ಪಕ್ಷವೇ ಕಾರಣ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಆಡಳಿತ ಮಾಡುತ್ತಿರುವ ಸಂದರ್ಭ ನೀರಿನ ದರ ಏರಿಕೆಯಾಗಿದ್ದು ನೂರಕ್ಕೆ ನೂರು ಸತ್ಯ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು.

Vedavyasa Kamath

By

Published : Nov 4, 2019, 10:16 PM IST

ಮಂಗಳೂರು: ಮಹಾನಗರ ಪಾಲಿಕೆಯ ನೀರಿನ ದರ ಏರಿಕೆಗೆ ಸಂಪೂರ್ಣವಾಗಿ ಕಾಂಗ್ರೆಸ್ ಪಕ್ಷವೇ ಕಾರಣ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಆಡಳಿತ ಮಾಡುತ್ತಿರುವ ಸಂದರ್ಭ ನೀರಿನ ದರ ಏರಿಕೆಯಾಗಿದ್ದು ನೂರಕ್ಕೆ ನೂರು ಸತ್ಯ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು.

ವೇದವ್ಯಾಸ ಕಾಮತ್ ಸುದ್ದಿಗೋಷ್ಟಿ

ನಗರದ ಕೊಡಿಯಾಲ್ ಬೈಲ್​ನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಬಿಜೆಪಿ ಸರ್ಕಾರ ನೀರಿನ ದರ ಏರಿಕೆ ಮಾಡಿದೆ ಎಂದು ಗೂಬೆ ಕೂರಿಸುತ್ತಿದ್ದಾರೆ ಎಂದರು.

ಕಳೆದ ಜೂನ್ 15 ರಂದು ನೀರಿನ ದರ ಪರಿಷ್ಕರಣೆ ಮಾಡಲು ಅನುಮೋದನೆ ನೀಡಲಾಗಿತ್ತು. ಆ ಸಂದರ್ಭದಲ್ಲಿ ರಾಜ್ಯದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿತ್ತು. ಅಂದು ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಕಾಂಗ್ರೆಸ್​ನ ಯು.ಟಿ ಖಾದರ್ ಅವರಿದ್ದರು. ಇಂದು ನೀರಿನ ದರ ಏರಿಕೆಯನ್ನು ಎಪ್ರಿಲ್ 1ರಿಂದಲೇ ಜಾರಿ ಮಾಡಿದ್ದು, ಇವರ ಆದೇಶದಲ್ಲಿ ನೀರಿನ ಬಿಲ್ ಅನ್ನು ಏಕಾಏಕಿ ಏರಿಕೆ ಮಾಡಿದ್ದಾರೆ. ಇದಕ್ಕೆ ನೇರವಾಗಿ ಕಾಂಗ್ರೆಸ್ ಪಕ್ಷವೇ ಕಾರಣ. ಅಲ್ಲದೆ 24 ಸಾವಿರ ಲೀಟರ್ ಗೃಹ ಬಳಕೆಯ ನೀರನ್ನು 8 ಸಾವಿರ ಲೀಟರ್​ಗೆ ಇಳಿಸಿದ್ದು ಖಂಡನೀಯ. ಇನ್ನು ಮಾಜಿ ಶಾಸಕರ ಮೇಲೆ ನಡೆದ ಹಲ್ಲೆಯನ್ನು ನೂರಕ್ಕೆ ನೂರು ಪ್ರತಿ ಶತ ನಾನು ಖಂಡಿಸುತ್ತೇನೆ ಎಂದು ವೇದವ್ಯಾಸ ಕಾಮತ್ ಹೇಳಿದರು‌.

ABOUT THE AUTHOR

...view details