ಮಂಗಳೂರು: ಕಳೆದ ಸಮ್ಮಿಶ್ರ ಸರ್ಕಾರದ ಬಗ್ಗೆ ಬಹಳಷ್ಟು ಆರೋಪಗಳು ಕೇಳಿಬರುತ್ತಿದೆ. ಹದಿನಾಲ್ಕು ತಿಂಗಳ ಅತಿ ದೊಡ್ಡ ಸಾಧನೆ ಎಂದ್ರೆ ಫೋನ್ ಕದ್ದಾಲಿಕೆ ಮಾಡಿರುವುದು ಅಷ್ಟೇ ಹೊರತು ಯಾವುದೇ ಅಭಿವೃದ್ಧಿ ಕಾರ್ಯ ಆಗಿಲ್ಲ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಹೇಳಿದರು.
ಫೋನ್ ಕದ್ದಾಲಿಕೆ ಮಾಡಿದ್ದೇ ಮೈತ್ರಿ ಸರ್ಕಾರದ ಸಾಧನೆ: ವೇದ ವ್ಯಾಸ ಕಾಮತ್ - ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್
ಕಳೆದ ಸಮ್ಮಿಶ್ರ ಸರ್ಕಾರದ ಬಗ್ಗೆ ಬಹಳಷ್ಟು ಆರೋಪಗಳು ಕೇಳಿಬರುತ್ತಿದೆ. ಹದಿನಾಲ್ಕು ತಿಂಗಳ ಅತಿ ದೊಡ್ಡ ಸಾಧನೆ ಎಂದ್ರೆ ಫೋನ್ ಕದ್ದಾಲಿಕೆ ಮಾಡಿರುವುದು ಅಷ್ಟೇ ಹೊರತು ಯಾವುದೇ ಅಭಿವೃದ್ಧಿ ಕಾರ್ಯ ಆಗಿಲ್ಲ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಹೇಳಿದರು.
ವೇದವ್ಯಾಸ ಕಾಮತ್
ಕಾಂಗ್ರೆಸ್, ಜೆಡಿಎಸ್ ಸರ್ಕಾರಗಳು ತಮ್ಮ ಅವಧಿಯಲ್ಲಿ ಅಧಿಕಾರವನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಆದರೆ ಕೆಲ ಬಿಜೆಪಿ ಶಾಸಕರು ಫೋನ್ ಕದ್ದಾಲಿಕೆ ಮಾಡಿದ್ದಾರೆ ಎಂದು ಮಾಧ್ಯಮದಲ್ಲಿ ವರದಿಯಾಗುತ್ತಿದೆ. ಅಪರಾಧಿಗಳು ಅಥವಾ ದೇಶವಿರೋಧಿ ಚಟುವಟಿಕೆಯಲ್ಲಿ ತೊಡಗಿಕೊಂಡವರ ಮೊಬೈಲ್ ಕದ್ದಾಲಿಕೆ ಮಾಡುವುದು ಸರಿ ಇದೆ. ಆದರೆ ಜನಪ್ರತಿನಿಧಿಗಳ ಫೋನ್ ಕದ್ದಾಲಿಕೆ ಮಾಡಿರುವುದು ಅಧಿಕಾರದ ದುರುಪಯೋಗ ಮಾಡಿದಂತೆ. ಇದು ನೂರಕ್ಕೆ ನೂರು ಸರಿಯಿಲ್ಲ ಎಂದು ವೇದವ್ಯಾಸ ಕಾಮತ್ ಹೇಳಿದರು.