ಕರ್ನಾಟಕ

karnataka

ಅದೃಷ್ಟ ಅಂದ್ರೆ ಇದು... ಬೈಕ್​ಗೆ ಟೆಂಪೊ ಡಿಕ್ಕಿ ಬದುಕಿದ್ವು ಬಡಜೀವ

ಮಂಗಳೂರು ಹೊರವಲಯದ ತಲಪಾಡಿ ಚೆಕ್​ಪೋಸ್ಟ್ ಬಳಿ ಬೈಕ್​ ಸಾಗುತ್ತಿದ್ದ ವೇಳೆ ವೇಗವಾಗಿ ಬಂದ ಟೆಂಪೊ ಹಿಂದಿನಿಂದ ಡಿಕ್ಕಿ ಹೊಡೆದಿದ್ದು, ಬೈಕ್ ಸವಾರರಿಬ್ಬರೂ ಗಂಭೀರವಾಗಿ ಗಾಯಗೊಂಡಿದ್ದಾರೆ

By

Published : Apr 25, 2019, 4:30 PM IST

Published : Apr 25, 2019, 4:30 PM IST

Updated : Apr 25, 2019, 5:13 PM IST

ಅಪಘಾತ

ಮಂಗಳೂರು:ಟೆಂಪೋವೊಂದು ಬೈಕ್​​ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರೂ ಗಂಭೀರವಾಗಿ ಗಾಯಗೊಂಡ ಘಟನೆ ಮಂಗಳೂರು ಹೊರವಲಯದ ತಲಪಾಡಿ ಚೆಕ್​ಪೋಸ್ಟ್ ಬಳಿ ನಡೆದಿದೆ.

ಅಪಘಾತ

ಬೈಕ್​ ಸಾಗುತ್ತಿದ್ದ ವೇಳೆ ವೇಗವಾಗಿ ಬಂದ ಟೆಂಪೊ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸವಾರರಿಬ್ಬರು ದೂರಕ್ಕೆ ಎಗರಿ ಬಿದ್ದಿದ್ದಾರೆ. ಕೂದಲೆಳೆ ಅಂತರದಲ್ಲಿ ದುರಂತವೊಂದು ತಪ್ಪಿದ್ದು, ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಬೈಕ್​ನಲ್ಲಿದ್ದ ಓರ್ವ ಪುರುಷ ಮತ್ತು ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಸಂಬಂಧ ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated : Apr 25, 2019, 5:13 PM IST

For All Latest Updates

TAGGED:

ABOUT THE AUTHOR

...view details