ಸುಳ್ಯ :ನಿಮಗೆ ಕಸ ಸಾಗಾಟಕ್ಕೆ 10 ಲಾರಿಗಳು ಯಾವಾಗ ಬೇಕು ಅಂತಾ ಹೇಳಿ. ನಿಮಗೆ 10 ಲಾರಿ ನಾನೇ ಕಳಿಸಿಕೊಡುತ್ತೇನೆ. ನನ್ನಿಂದ ಆಯ್ತು ಅನ್ನುವುದು ನನಗೆ ಬೇಕಾಗಿಲ್ಲ. ನಮ್ಮಿಂದ ಆಯ್ತು ಎನ್ನುವುದು ನನಗೆ ಬೇಕು. ಇವತ್ತು ಈ ಸ್ವಚ್ಛತೆ ವಿಷಯದಲ್ಲಿ ಮಾಧ್ಯಮದವರು ಸೇರಿರೋದರಿಂದ ಇದಕ್ಕೆ ಪರಿಹಾರ ಸಿಕ್ಕಬಹುದು ಎಂಬ ಭರವಸೆ ಇದೆ. ಎಲ್ಲಾ ಮಾಧ್ಯಮದವರಿಗೆ ಧನ್ಯವಾದಗಳು ಎಂದು ಫೇಸ್ಬುಕ್ನಲ್ಲಿ ನಟ, ನಿರ್ದೇಶಕ, ಗಾಯಕ ಅನಿರುದ್ದ್ ವಿಡಿಯೋ ಹಂಚಿಕೊಂಡಿದ್ದಾರೆ.
ಸುಳ್ಯ ನಗರ ಪಂಚಾಯತ್ ಎದುರು ಶೆಡ್ನಲ್ಲಿ ತುಂಬಿಸಲಾಗಿರುವ ಕಸದ ಫೋಟೋವನ್ನ ಚಿತ್ರನಟ ಅನಿರುದ್ದ್ ಅವರಿಗೆ ತಲುಪಿ, ಅವರು ಕಸ ತೆರವಿಗೆ ಮನವಿ ಮಾಡಿಕೊಂಡಿರುವ ವಿಡಿಯೋ ವೈರಲ್ ಆಗಿ, ಈ ವಿಡಿಯೋ ಶೇರ್ ಮಾಡಿದ ಸುಪ್ರೀತ್ ಎಂಬುವರನ್ನು ಬಿಜೆಪಿ ಮೀಡಿಯಾ ವಾಟ್ಸ್ಆ್ಯಪ್ ಗ್ರೂಪ್ನಿಂದ ರಿಮೂವ್ ಮಾಡಿದ ವಿಚಾರವು ಮಾಧ್ಯಮದಲ್ಲಿ ಪ್ರಚಾರ ಪಡೆದಿತ್ತು.
ನಂತರದಲ್ಲಿ ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ ಅವರು ನಗರ ಪಂಚಾಯತ್ನ ಕಸ ತೆರವಿಗೆ ಮುಂದಾಗದೆ ನಟ ಅನಿರುದ್ಧ ಹೇಳಿಕೆಗೆ ವಾಟ್ಸ್ಆ್ಯಪ್ನಲ್ಲಿ ನಟ ಅನಿರುದ್ದ್ಗೆ 10 ಲಾರಿ ಕಳಿಸಿ ಕೊಡಲು ಹೇಳಿ. ಲೋಡಿಂಗ್ ನಮ್ಮ ಕಾರ್ಮಿಕರಿಂದ ಮಾಡಿಸುತ್ತೇವೆ ಎಂದು ಕಾಮೆಂಟ್ ಮಾಡಿದ್ದರು.