ಮಂಗಳೂರು: ಮುಂಜಾನೆ ಶಾಲೆಗೆ ಹೋಗುವ ಅವಸರದ ನಡುವೆ ವಿದ್ಯಾರ್ಥಿಯೊಬ್ಬ ಹೊಂಡ ಮುಚ್ಚಲು ಪ್ರಯತ್ನಿಸಿದ್ದಾನೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪತ್ರಕರ್ತ ಆರೀಫ್ ಪಡುಬಿದ್ರೆ ಅವರ ಪುತ್ರ ಮುಹಮ್ಮದ್ ಅರ್ ಹಮ್ ರಸ್ತೆ ಹೊಂಡ ಮುಚ್ಚಿದ ವಿದ್ಯಾರ್ಥಿ. ಈತ ಮಂಗಳೂರಿನ ಎಕ್ಕೂರಿನಲ್ಲಿರುವ ಕೇಂದ್ರೀಯ ವಿದ್ಯಾಲಯ 2ರಲ್ಲಿ 7ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾನೆ.
ಶಾಲೆಗೆ ಹೋಗುವ ಅವಸರದ ನಡುವೆ ರಸ್ತೆ ಹೊಂಡ ಮುಚ್ಚಿದ ವಿದ್ಯಾರ್ಥಿ.. ಶ್ಲಾಘನೆ - ರಸ್ತೆ ಹೊಂಡ ಮುಚ್ಚಿದ ಮಂಗಳೂರು ವಿದ್ಯಾರ್ಥಿ
ಮಂಗಳೂರಿನ ಕಂಕನಾಡಿಯ ನಿವಾಸಿಯಾಗಿರುವ ಮುಹಮ್ಮದ್ ಅರ್ ಹಮ್ ಶಾಲೆಗೆ ಹೋಗುವ ದಾರಿಯಲ್ಲಿ ಹೊಂಡಗಳಿರುವುದನ್ನು ಗಮನಿಸಿ ಅದನ್ನು ತಾನೇ ಸರಿಪಡಿಸಲು ನಿರ್ಧರಿಸಿದ್ದಾನೆ. ವಿದ್ಯಾರ್ಥಿಯ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.
ಶಾಲೆಯ ಹೋಗುವ ಅವಸರದ ನಡುವೆ ರಸ್ತೆ ಹೊಂಡ ಮುಚ್ಚಿದ ವಿದ್ಯಾರ್ಥಿ
ಮಂಗಳೂರಿನ ಕಂಕನಾಡಿಯ ನಿವಾಸಿಯಾಗಿರುವ ಮುಹಮ್ಮದ್ ಅರ್ ಹಮ್ ಶಾಲೆಗೆ ಹೋಗುವ ದಾರಿಯಲ್ಲಿ ಹೊಂಡಗಳಿರುವುದನ್ನು ಗಮನಿಸಿ ಅದನ್ನು ತಾನೇ ಸರಿಪಡಿಸಲು ನಿರ್ಧರಿಸಿದ್ದಾನೆ. ಅದರಂತೆ ಇಂದು ಬೆಳಗ್ಗೆ ಅಲ್ಲಿಯೇ ಪಕ್ಕದಲ್ಲಿ ಸಿಕ್ಕ ಕಲ್ಲುಗಳನ್ನು ಹೊಂಡಕ್ಕೆ ಹಾಕಿ ಗುಂಡಿ ಮುಚ್ಚುವ ಪ್ರಯತ್ನ ಮಾಡಿದ್ದಾರೆ. ಈ ಸಂದರ್ಭದಲ್ಲಿ ಶಾಲೆಗೆ ಹೋಗುವ ವಾಹನ ಬಂದಿದ್ದರಿಂದ ಶಾಲೆಗೆ ತೆರಳಿದ್ದಾನೆ. ಶಾಲೆಗೆ ಹೋಗುವ ಅವಸರದ ನಡುವೆ ವಿದ್ಯಾರ್ಥಿಯ ಪ್ರಯತ್ನಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಇದನ್ನೂ ಓದಿ:ಮಂಗಳೂರಿನಲ್ಲಿ ಗೋಡ್ಸೆ, ಸಾವರ್ಕರ್ ಬ್ಯಾನರ್ ತೆರವು