ಕರ್ನಾಟಕ

karnataka

ETV Bharat / city

ಮಂಗಳೂರಲ್ಲಿ ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾದ ಬಡ ವಿದ್ಯಾರ್ಥಿ - ಮಂಗಳೂರಿನಲ್ಲಿ ವಿದ್ಯಾರ್ಥಿ ಆತ್ಮಹತ್ಯೆ

Student committed suicide in Mangaluru:ಮಂಗಳೂರಿನ ಎನ್ಐಟಿಕೆಯಲ್ಲಿ ದ್ವಿತೀಯ ವರ್ಷದ ಎಲೆಕ್ಟ್ರಾನಿಕ್ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ಪಾಟ್ನಾ ಮೂಲದ ವಿದ್ಯಾರ್ಥಿ ಸೌರವ್ ಡೆತ್ ನೋಟ್ ಬರೆದಿಟ್ಟು, ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

student committed suicide in Mangalore
ಎನ್ಐಟಿಕೆ ಕಾಲೇಜಿನ ವಿದ್ಯಾರ್ಥಿ ಆತ್ಮಹತ್ಯೆ

By

Published : Dec 26, 2021, 3:33 PM IST

ಮಂಗಳೂರು (ದ.ಕನ್ನಡ): ತನ್ನ ಸಾವಿಗೆ ತಾನೇ ಕಾರಣವೆಂದು ಡೆತ್ ನೋಟ್ ಬರೆದಿಟ್ಟು ನಗರದ ಎನ್ಐಟಿಕೆಯಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯೋರ್ವ ದುಡುಕಿನ ನಿರ್ಧಾರದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಎನ್ಐಟಿಕೆಯಲ್ಲಿ ದ್ವಿತೀಯ ವರ್ಷದ ಎಲೆಕ್ಟ್ರಾನಿಕ್ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ಪಾಟ್ನಾ(ಬಿಹಾರ) ಮೂಲದ ಸೌರವ್(19) ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿ.

ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾದ ವಿದ್ಯಾರ್ಥಿ

ಸೌರವ್ ಹಾಸ್ಟೆಲ್​ನಲ್ಲಿದ್ದುಕೊಂಡು ವ್ಯಾಸಂಗ ಮಾಡುತ್ತಿದ್ದ. ಇಂದು ಬೆಳಗ್ಗೆ ಆತ ಏಳದೇ ಇದ್ದದ್ದನ್ನು ಗಮನಿಸಿದ ಉಳಿದ ವಿದ್ಯಾರ್ಥಿಗಳು ಕಿಟಕಿ ಬಾಗಿಲು ಮೂಲಕ ನೋಡಿದಾಗ ಆತ ಆತ್ಮಹತ್ಯೆಗೆ ಶರಣಾಗಿರುವುದು ಗೊತ್ತಾಗಿದೆ. ಈ ಬಗ್ಗೆ ತಕ್ಷಣ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ‌. ಆಗ ಅಲ್ಲಿ ಡೆತ್ ನೋಟ್ ಲಭ್ಯವಾಗಿದೆ‌. ಆತ‌ ಡೆತ್ ನೋಟ್​​ನಲ್ಲಿ 'ತನ್ನ ತಲೆಯಲ್ಲಿ ಯಾವುದೋ ಕೆಮಿಕಲ್ ಪ್ರತಿಕ್ರಿಯೆ ನೀಡುತ್ತಿದೆ. ತಾನು ಸಾಲ ಮಾಡಿ ಶಿಕ್ಷಣ ಪಡೆಯುತ್ತಿದ್ದೇನೆ. ಆದರೆ ವ್ಯಾಸಂಗ ಮುಗಿದ ಬಳಿಕ ಉದ್ಯೋಗ ಸಿಗುತ್ತೋ ಇಲ್ಲವೋ ತಿಳಿದಿಲ್ಲ, ತನ್ನ ಸಾವಿಗೆ ತಾನೇ ಕಾರಣ' ಎಂದು ತಂದೆಗೆ ಪತ್ರ ಬರೆದಿದ್ದಾನೆ.

ಪೋಷಕರು ಬಡವರಾಗಿದ್ದು, ಮೃತದೇಹವನ್ನು ಪಾಟ್ನಾಗೆ ಕೊಂಡೊಯ್ಯಲಾಗದೇ ಇಲ್ಲಿಯೇ ಅಂತ್ಯಸಂಸ್ಕಾರ ನಡೆಸುವಂತೆ ಅನುಮತಿಸಿದ್ದರು. ಆದರೆ ಎನ್ಐಟಿಕೆ ಶಿಕ್ಷಣ ಸಂಸ್ಥೆ, ಪ್ರಾಧ್ಯಾಪಕರು, ಸಿಬ್ಬಂದಿ, ವಿದ್ಯಾರ್ಥಿಗಳು ಹಣಕಾಸಿನ ವ್ಯವಸ್ಥೆ ಮಾಡಿ ಆತನ ಪೋಷಕರನ್ನು ಕರೆಸಿಕೊಂಡು, ಮೃತದೇಹವನ್ನು ಪಾಟ್ನಾಗೆ ಕೊಂಡೊಯ್ಯುವ ವ್ಯವಸ್ಥೆ ಮಾಡಿದ್ದಾರೆ.

ಇದನ್ನೂ ಓದಿ:ರಾತ್ರೋರಾತ್ರಿ ಈ ವ್ಯಕ್ತಿಯನ್ನ ಕಾರಿನಲ್ಲಿ ಹಾಕ್ಕೊಂಡ್ಹೋದರು.. ಇದು ಕಿಡ್ನ್ಯಾಪ್ ಅಂತೂ ಅಲ್ಲವೇ ಅಲ್ಲ.. ಅದೇನ್ ನೋಡಿ..

ಆತನ ಆತ್ಮಹತ್ಯೆ ಬಗ್ಗೆ ಪೋಷಕರು ಯಾವುದೇ ಅನುಮಾನವನ್ನು ವ್ಯಕ್ತಪಡಿಸಲಿಲ್ಲವೆಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್. ತಿಳಿಸಿದ್ದಾರೆ. ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details