ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂದಿನಿಂದ ಕೊರೊನಾ ಕರ್ಫ್ಯೂ ಕಟ್ಟುನಿಟ್ಟಿನಿಂದ ಜಾರಿಗೊಳಿಸಲಾಗಿದೆ. ಕರ್ಫ್ಯೂ ತಪಾಸಣೆಗಾಗಿ ಸ್ವತಃ ಮಂಗಳೂರು ಪೊಲೀಸ್ ಆಯುಕ್ತರೇ ರಸ್ತೆಗಿಳಿದಿದ್ದಾರೆ.
ಫೀಲ್ಡಿಗಿಳಿದ ಪೊಲೀಸ್ ಕಮಿಷನರ್: ಅನಗತ್ಯವಾಗಿ ಸಂಚರಿಸುತ್ತಿದ್ದ ವಾಹನಗಳು ಸೀಜ್ ನಗರದ ಕೂಳೂರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ತಪಾಸಣೆ ನಡೆಸಿದ ಪೊಲೀಸ್ ಆಯುಕ್ತ ಶಶಿಕುಮಾರ್, ಅನಗತ್ಯ ಸಂಚಾರ ಮಾಡುತ್ತಿರುವವರ ವಾಹನಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದರು.
ಕೊರೊನಾ ಕರ್ಫ್ಯೂ ಬಿಗಿಗೊಳಿಸಿರುವ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ 9 ಗಂಟೆಯ ಬಳಿಕ ಅನಗತ್ಯ ಸಂಚಾರ ನಡೆಸಬಾರದೆಂದು ಸೂಚನೆ ನೀಡಿದ್ದರೂ ಖಾಸಗಿ ವಾಹನಗಳಿಗೆ ಅಗತ್ಯ ಸೇವೆ ಎಂಬ ಸ್ಟಿಕ್ಕರ್ ಬಳಸಿ ತಿರುಗಾಡುತ್ತಿರುವುದು ಕಂಡುಬಂದಿದೆ. ಅಂತಹ ವಾಹನಗಳ ಸ್ಟಿಕ್ಕರ್ಗಳನ್ನು ಕಿತ್ತು ಹಾಕಿ ಕಳುಹಿಸಲಾಯಿತು. ಜೊತೆಗೆ ಕೆಲವರಿಗೆ ದಂಡ ಹಾಕಿ ಕಳುಹಿಸಲಾಯಿತು.
ಓದಿ:ಕೊರೊನಾದಿಂದ ಮೃತಪಟ್ಟ ವ್ಯಕ್ತಿಯ ಅಂತ್ಯಕ್ರಿಯೆ ನೆರವೇರಿಸಿದ ರಾಜಕೇಸರಿ ಸಂಘಟನೆ