ಪುತ್ತೂರು: ಕೊರೊನಾ ಲಾಕ್ಡೌನ್ ಜಾರಿಗೆ ಬಂದು ಇಂದಿಗೆ 21 ದಿನ ಕಳೆದಿದೆ. ನಾಳೆಯಿಂದ ಮೇ.3ರ ತನಕ ಲಾಕ್ಡೌನ್ ಮತ್ತೆ ಮುಂದುವರೆಯಲಿದೆ. ಈ ಕುರಿತು ಪ್ರಧಾನಿ ಮೋದಿ ಬೆಳಗ್ಗೆ ಘೋಷಿಸಿದ್ದರು.
ಲಾಕ್ಡೌನ್ 2.0 ಜಾರಿ: ದಕ್ಷಿಣ ಕನ್ನಡ ಜಿಲ್ಲಾದ್ಯಂತ ಪೊಲೀಸರಿಂದ ಕಟ್ಟುನಿಟ್ಟಿನ ಕ್ರಮ
ಮತ್ತೆ ಲಾಕ್ಡೌನ್ ಮುಂದುವರಿದ ಪರಿಣಾಮ ದಕ್ಷಿಣ ಕನ್ನಡ ಜಿಲ್ಲಾದ್ಯಂತ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ.
ಬಿಗಿ ಬಂದೋಬಸ್ತ್
ಈ ಹಿನ್ನೆಲೆ ಜಿಲ್ಲಾದ್ಯಂತ ಪೊಲೀಸರು ಲಾಕ್ಡೌನ್ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ತರುತ್ತಿದ್ದಾರೆ. ಪುತ್ತೂರು ನಗರದಲ್ಲಿ ಅನವಶ್ಯಕವಾಗಿ ತಿರುಗಾಡುತ್ತಿರುವ ವಾಹನಗಳ ಜಪ್ತಿ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಈಗಾಗಲೇ 500ಕ್ಕೂ ಮಿಕ್ಕಿದ ವಾಹನಗಳನ್ನು ಪೋಲೀಸರು ಸೀಜ್ ಮಾಡಿದ್ದಾರೆ.
ಇನ್ನು, ಜನಧನ್ ಖಾತೆಯ ಹಣ ಪಡೆಯಲು ಬ್ಯಾಂಕುಗಳೆದುರು ಜನರು ಮುಗಿಬೀಳುತ್ತಿದ್ದಾರೆ. ಈ ವೇಳೆ ಅವರ ನಿಯಂತ್ರಣಕ್ಕೂ ಪೋಲೀಸರು ಕ್ರಮ ಕೈಗೊಂಡಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಂಡೇ ಸರತಿ ಸಾಲಿನಲ್ಲಿ ನಿಲ್ಲುವಂತೆ ಜನರಿಗೆ ಸೂಚನೆ ನೀಡುತ್ತಿದ್ದಾರೆ.