ಕರ್ನಾಟಕ

karnataka

ETV Bharat / city

ಎಸ್​​ಎಸ್​​ಎಲ್​​ಸಿ ಪರೀಕ್ಷೆ ಮರು ಮೌಲ್ಯಮಾಪನ: ಶ್ರೇಯಾ ಡೋಂಗ್ರೆ ರಾಜ್ಯಕ್ಕೆ ಪ್ರಥಮ

ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ 622 ಅಂಕ ಪಡೆದಿದ್ದ ಸೈಂಟ್ ಮೆರೀಸ್ ಸ್ಕೂಲ್ ವಿದ್ಯಾರ್ಥಿನಿ ಶ್ರೇಯಾ ಡೋಂಗ್ರೆ ಮರು ಮೌಲ್ಯಮಾಪನಕ್ಕೆ ಹಾಕಿದ ಹಿನ್ನೆಲೆಯಲ್ಲಿ ಇದೀಗ 625 ಅಂಕ ಬಂದಿದೆ. ಈ ಹಿನ್ನೆಲೆಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನಿಯಾಗಿದ್ದ ವಿದ್ಯಾರ್ಥಿನಿ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮಳಾಗಿದ್ದಾಳೆ.

sslc-exam-re-evaluation-shreya-dongre-state-first
ಶ್ರೇಯಾ ಡೋಂಗ್ರೆ

By

Published : Sep 5, 2020, 7:00 PM IST

ಬೆಳ್ತಂಗಡಿ: ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಬೆಳ್ತಂಗಡಿ ಸೈಂಟ್ ಮೆರೀಸ್ ಸ್ಕೂಲ್ ವಿದ್ಯಾರ್ಥಿನಿ ಶ್ರೇಯಾ ಡೋಂಗ್ರೆ 622 ಅಂಕ ಪಡೆದು ತಾಲೂಕಿಗೆ ಪ್ರಥಮ ಸ್ಥಾನಿಯಾಗಿದ್ದಳು. ಅದರೆ 625 ಅಂಕ ಪಡೆಯುತ್ತೇನೆಂಬ ಭರವಸೆಯಲ್ಲಿದ್ದ ವಿದ್ಯಾರ್ಥಿನಿ ಮರುಮೌಲ್ಯಮಾಪನಕ್ಕೆ ಹಾಕಿದಾಗ 625 ಅಂಕ ಪಡೆದು ಇದೀಗ ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿದ್ದಾಳೆ.

ತಾಲೂಕಿನ ಲಾಯ್ಲ ಗ್ರಾಮದ ವೈದ್ಯರಾದ ಶಶಿಕಾಂತ್ ಡೋಂಗ್ರೆ ಹಾಗೂ ದೀಪಾಲಿ ಡೋಂಗ್ರೆಯವರ ಪುತ್ರಿ ಶ್ರೇಯಾ ಡೋಂಗ್ರೆ ಈ ಬಾರಿಯ ಪರೀಕ್ಷೆಯನ್ನು ಸವಾಲಾಗಿ ಸ್ವೀಕರಿಸಿ ತಾಲೂಕಿನ ಜನ ಹೆಮ್ಮೆ ಪಡುವಂತಹ ಸಾಧನೆಯನ್ನು ಮಾಡಿದ್ದಾಳೆ.

ಎಸ್​ಎಸ್​ಎಲ್​ಸಿ ಪರೀಕ್ಷೆ ಮರು ಮೌಲ್ಯಮಾಪನದಲ್ಲಿ ಶ್ರೇಯಾ ಡೋಂಗ್ರೆ ರಾಜ್ಯಕ್ಕೆ ಪ್ರಥಮ ಸ್ಥಾನ

ನನಗೆ 622 ಅಂಕ ಬಂದಾಗ ಸ್ವಲ್ಪ ಸಂಶಯ ಉಂಟಾಯಿತು. ಅದರೂ 625 ಅಂಕ ಬರುವ ನಿರೀಕ್ಷೆಯಲ್ಲಿದ್ದೆ. ಇಂಗ್ಲೀಷ್​ನಲ್ಲಿ 3 ಅಂಕ ಕಡಿಮೆ ಬಂದ ಬಗ್ಗೆ ಯೋಚಿಸಿ ತಂದೆ ತಾಯಿ ಹಾಗೂ ಶಾಲಾ ಶಿಕ್ಷಕರಲ್ಲಿ ಮಾತನಾಡಿ ಮರುಮೌಲ್ಯಮಾಪನಕ್ಕೆ ಹಾಕಿದೆ. ಅದರ ಫಲಿತಾಂಶ 625 ಅಂಕ ಬಂದಿದೆ. ತುಂಬಾ ಖುಷಿಯಾಗಿದೆ ಎಂದು ಶ್ರೇಯಾ ಸಂತೋಷ ಹಂಚಿಕೊಂಡರು.

ಈ ಬಾರಿಯ ಪರೀಕ್ಷೆ ಮಕ್ಕಳಿಗೆ ತುಂಬಾ ಸವಾಲಿನದ್ದಾಗಿತ್ತು. ಅದರೂ ಪ್ರಯತ್ನ ಪಟ್ಟರೆ ಫಲ ಸಿಗುತ್ತದೆ ಎಂಬುವುದಕ್ಕೆ ಇವಳೇ ಸಾಕ್ಷಿ. ನಮ್ಮ ಮಗಳ ಯಶಸ್ಸಿಗೆ ಶ್ರಮ ಪಟ್ಟ ಶಿಕ್ಷಕರಿಗೆ ಹಾಗೂ ಆಶೀರ್ವದಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಪೋಷಕರು ಸಂತಸ ಹಂಚಿಕೊಂಡಿದ್ದಾರೆ.

ABOUT THE AUTHOR

...view details