ಮಂಗಳೂರು: ದೇಹದ ಸುರಕ್ಷತೆಗೆ ನರನಾಡಿಗಳಲ್ಲಿ ರಕ್ತ ಸಂಚಾರವಾಗಬೇಕು. ಅದೇ ರೀತಿ ಸಮಾಜದ ಬೆಳವಣಿಗೆಗೆ ರಕ್ತದಂತಿರುವ ಧನವನ್ನು ಕ್ರೋಢೀಕರಿಸಿ, ಬೇಕಾದಾಗ ಎಲ್ಲರಿಗೂ ವಿತರಿಸಿ ಸಮಾಜದ ಅಭಿವೃದ್ಧಿಗೆ ಬಹುದೊಡ್ಡ ಕೊಡುಗೆಯನ್ನು ನೀಡಿದ್ದು ಕರಾವಳಿಯ ಬ್ಯಾಂಕಿಂಗ್ ಕ್ಷೇತ್ರ ಎಂದು ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದರು.
ನಗರದ ಕೊಡಿಯಾಲ್ ಬೈಲ್ನ ಸಭಾಂಗಣದಲ್ಲಿ ನಡೆದ ಕರಾವಳಿಯ ಬ್ಯಾಂಕುಗಳನ್ನು ಉಳಿಸಿ ಹೋರಾಟ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಕೊಡುಗೆ ನೀಡಿದ ಬ್ಯಾಂಕ್ ಗಳ ವಿಲೀನ ಬೇರೆಲ್ಲಾ ಕಡೆಗಳಲ್ಲಿ ಸಾಧುವಾಗಬಹುದು. ಆದರೆ ಕರಾವಳಿಗೆ ಒಲ್ಲದ ಪ್ರಕ್ರಿಯೆ. ಕರಾವಳಿಯ ಭೌಗೋಳಿಕ ಹಿನ್ನೆಲೆಗೂ, ಬೇರೆಡೆಗೂ ಬಹಳಷ್ಟು ವ್ಯತ್ಯಾಸವಿದೆ. ಆದ್ದರಿಂದ ಬ್ಯಾಂಕ್ ವಿಲೀನ ಪ್ರಕ್ರಿಯೆ ನಮ್ಮ ಭಾಗಕ್ಕೆ ಸಮಂಜಸವಲ್ಲ.