ಮಂಗಳೂರು: ಪುತ್ತೂರು ತಾಲೂಕಿನ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಶ್ರೀ ಕನಕದಾಸ ಜಯಂತಿಯನ್ನು ಇಂದು ಆಚರಿಸಲಾಯಿತು.
ಪುತ್ತೂರಿನಲ್ಲಿ ಶ್ರೀಕನಕದಾಸರ ಜಯಂತಿ ಆಚರಣೆ - ಪುತ್ತೂರು ಕನಕದಾಸ ಜಯಂತಿ ಆಚರಣೆ
ಪುತ್ತೂರು ತಾಲೂಕಿನ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಶ್ರೀ ಕನಕದಾಸ ಜಯಂತಿಯನ್ನು ಇಂದು ಆಚರಿಸಲಾಯಿತು.
ಪುತ್ತೂರು ಶ್ರೀ ಕನಕದಾಸ ಜಯಂತಿ ಆಚರಣೆ
ಉದ್ಘಾಟನೆಯನ್ನು ಪುತ್ತೂರು ತಹಶಿಲ್ದಾರ್ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷ ಅನಂತಶಂಕರ್ ನೆರವೇರಿಸಿದರು. ಬಳಿಕ ವಿದ್ಯಾರ್ಥಿಗಳಿಗೆ ಸರ್ಕಾರಿ ಪದವಿಪೂರ್ವ ಕಾಲೇಜು ಉಪ್ಪಿನಂಗಡಿ ಅಧ್ಯಾಪಕರಾದ ಗುಡ್ಡಪ್ಪ ಬಲ್ಯ ಉಪನ್ಯಾಸ ನೀಡಿದರು. ದೇವರಿಗೆ ಜಾತಿ ಇಲ್ಲ, ನೀತಿ ಮಾತ್ರ ಇರುವುದು. ಜಾತಿ, ಕುಲ ಮೀರಿಸಿದ ಮನುಷ್ಯತ್ವ ದೊಡ್ಡದು ಎಂದು ಜಗತ್ತಿಗೆ ಕನಕದಾಸರು ತೋರಿಸಿ ಕೊಟ್ಟಿದ್ದಾರೆ ಎಂದರು.
ಇನ್ನು, ಕಾರ್ಯಕ್ರಮದಲ್ಲಿ ಪುತ್ತೂರು ನಗರಸಭೆ ಪೌರಾಯುಕ್ತೆ ರೂಪ ಶೆಟ್ಟಿ, ಪ್ರಭಾರ ಶಿಕ್ಷಣಾಧಿಕಾರಿ ವಿಷ್ಣುಪ್ರಸಾದ್ ಸೇರಿದಂತೆ ಮತ್ತಿರರು ಉಪಸ್ಥಿತರಿದ್ದರು.