ಕರ್ನಾಟಕ

karnataka

ETV Bharat / city

ಲೋಕ ಕಲ್ಯಾಣಾರ್ಥ ವೆಂಕಟರಮಣ ದೇಗುಲದಲ್ಲಿ ವಿಶೇಷ ಪ್ರಾರ್ಥನೆ - Mangalore Venkataramana Temple

ಇಡೀ ಪ್ರಪಂಚಕ್ಕೆ ತಗಲಿರುವ ಕೊರೊನಾ ಸೋಂಕು ಶೀಘ್ರ ತೊಲಗಲಿ. ದೇವಸ್ಥಾನಗಳಲ್ಲಿ ನಡೆಯುವ ಎಲ್ಲಾ ಪೂಜಾ-ಕೈಂಕರ್ಯಗಳು ಹಿಂದಿನಂತೆ ಸುಸೂತ್ರವಾಗಿ ನಡೆಯಲಿ. ಜನರ ಕಷ್ಟಗಳು ಬೇಗನೆ ನಿವಾರಣೆಯಾಗಲಿ ಎಂದು ಮಂಗಳೂರಿನ ವೆಂಕಟರಮಣ ದೇಗುಲದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

Special Prayer at Mangalore Venkataramana Temple
ಲೋಕ ಕಲ್ಯಾಣಾರ್ಥ ವೆಂಕಟರಮಣ ದೇಗುಲದಲ್ಲಿ ವಿಶೇಷ ಪ್ರಾರ್ಥನೆ

By

Published : Sep 13, 2020, 7:41 PM IST

ಮಂಗಳೂರು: ಲೋಕ ಕಲ್ಯಾಣಾರ್ಥವಾಗಿ ನಗರದ ರಥಬೀದಿಯಲ್ಲಿರುವ ವೆಂಕಟರಮಣ ದೇಗುಲದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಲೋಕ ಕಲ್ಯಾಣಾರ್ಥ ವೆಂಕಟರಮಣ ದೇಗುಲದಲ್ಲಿ ವಿಶೇಷ ಪ್ರಾರ್ಥನೆ

ಇಡೀ ಪ್ರಪಂಚಕ್ಕೆ ತಗಲಿರುವ ಕೊರೊನಾ ಸೋಂಕು ಶೀಘ್ರ ತೊಲಗಲಿ. ದೇವಸ್ಥಾನಗಳಲ್ಲಿ ನಡೆಯುವ ಎಲ್ಲಾ ಪೂಜಾ-ಕೈಂಕರ್ಯಗಳು ಹಿಂದಿನಂತೆ ಸುಸೂತ್ರವಾಗಿ ನಡೆಯಲಿ. ಜನರ ಕಷ್ಟಗಳು ಬೇಗನೆ ನಿವಾರಣೆಯಾಗಲಿ ಎಂದು ವೆಂಕಟರಮಣ ದೇವಳದ ಆಡಳಿತ ಮಂಡಳಿ ಹಾಗೂ ಸಮಾಜ ಬಾಂಧವರು, ಶ್ರೀ ವೀರ ವೆಂಕಟೇಶ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಸೆಪ್ಟಂಬರ್​ 13ರಂದು ಬೆಳಗ್ಗೆ 6 ಗ್ರಹಗಳು ಸ್ವಕ್ಷೇತ್ರದಲ್ಲಿದ್ದು, ಇದೊಂದು ಉತ್ತಮ‌ ಮುಹೂರ್ತ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಲಾಗಿದೆ.‌ ಈ ದಿನ ಗ್ರಹ ಮಂಡಲದಲ್ಲಿ ಅಪರೂಪದಲ್ಲೇ ಅಪರೂಪದ ವಿದ್ಯಮಾನವನ್ನು ಕಾಣಬಹುದಾಗಿದೆ. ಛಾಯಾಗ್ರಹಗಳಾದ ರಾಹು-ಕೇತುಗಳನ್ನು ಹೊರತುಪಡಿಸಿ, ಆರು ಗ್ರಹಗಳು ತಮ್ಮ-ತಮ್ಮ ಸ್ವಕ್ಷೇತ್ರಗಳಲ್ಲಿ ಇರುವುದು ಅತ್ಯಂತ ವಿಶೇಷ. ಗುರುವು (ಪೂರ್ವಾಷಾಢ) ಧನಸ್ಸು ರಾಶಿಯಲ್ಲಿ, ಶನಿಯು(ಉತ್ತರಾಷಾಢ) ಮಕರದಲ್ಲಿ, ಕುಜನು(ಅಶ್ವಿನಿ) ಮೇಷದಲ್ಲಿ, ಚಂದ್ರನು ಕಟಕದಲ್ಲಿ ಶುಕ್ರನೊಂದಿಗೆ(ಪುನರ್ವಸು ನಕ್ಷತ್ರದಲ್ಲಿ), ರವಿಯು ಸಿಂಹದಲ್ಲಿ(ಉತ್ತರಾ ನಕ್ಷತ್ರ), ಬುಧನು ಉಚ್ಛ ಕ್ಷೇತ್ರವು, ಸ್ವಕ್ಷೇತ್ರವೂ ಆದ ಕನ್ಯಾರಾಶಿಯಲ್ಲಿ(ಹಸ್ತಾ ನಕ್ಷತ್ರ) ಇರುವುದು ಅಪರೂಪವೂ ಆಗಿದೆ.

ಈ ಸಂದರ್ಭದಲ್ಲಿ ಬೆಳಿಗ್ಗೆ 11ರ ಸಮಯಕ್ಕೆ ವೃಶ್ಚಿಕ ಲಗ್ನ(10-45ರಿಂದ12-45ರ ವರೆಗೆ) ಇರುವುದು. ಆ ಲಗ್ನಕ್ಕೆ ಹೊಂದಿಕೊಂಡಂತೆ ಗುರುವು ಧನಸ್ಥಾನವಾದ 2ನೇ ಮನೆಯಲ್ಲಿ, ಶನಿಯು 3ರಲ್ಲಿ, ಕುಜನು 6ರಲ್ಲಿ, ಚಂದ್ರನು (ಶುಕ್ರನೊಂದಿಗೆ)9ರಲ್ಲಿ, ರವಿಯು 10ರಲ್ಲಿ, ಬುಧನು 11ರಲ್ಲಿ ಇರುತ್ತಾರೆ. ಇದು ಅತ್ಯಂತ ಸುಸಮಯ. ಅಂದು ಸುಮಾರು ಬೆಳಿಗ್ಗೆ 10-45ರಿಂದ 12-45ರ ವರೆಗೂ ವೃಶ್ಚಿಕ ಲಗ್ನ ಇರುವುದು. ಈ ಸಮಯದಲ್ಲಿ ಯಾರು ಯಾವುದೇ ಸತ್ಕಾರ್ಯ, ಜಪ, ಹೋಮ, ದಾನ, ಗೋ ಸೇವೆ, ಮಂತ್ರ ಪಾರಾಯಣ, ಸಹಸ್ರನಾಮದಿ ಪಾರಾಯಣಗಳು, ಪ್ರಾಣಿ-ಪಕ್ಷಿಗಳಿಗೆ ಆಹಾರ ಕೊಡವುದು, ಸತ್ಪಾತ್ರರಿಗೆ ದಾನ, ಮಹಾಲಯ ಪಕ್ಷದ ತನ್ನಿಮಿತ್ತ ಕಾರ್ಯ ಇತ್ಯಾದಿ ಸತ್ಕಾರ್ಯ ಮಾಡುವುದು ಶ್ರೇಯಸ್ಕರ.

ABOUT THE AUTHOR

...view details