ಕರ್ನಾಟಕ

karnataka

By

Published : Dec 17, 2021, 11:30 AM IST

Updated : Dec 17, 2021, 2:04 PM IST

ETV Bharat / city

ಮಂಗಳೂರಿನಲ್ಲಿ 'ಎಸ್​ಪಿ ಆಫೀಸ್ ಚಲೋ’ ಪ್ರತಿಭಟನೆ : ಬಿಗಿ ಪೊಲೀಸ್​ ಬಂದೋಬಸ್ತ್

ಎಸ್‌ಪಿ ಕಚೇರಿ ಚಲೋಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಬಂದೋಬಸ್ತ್ ಕೈಗೊಂಡಿದೆ. ಪ್ರತಿಭಟನೆ ನಡೆಯುವ ಸ್ಥಳದಲ್ಲಿ ನೂರಾರು ಬ್ಯಾರಿಕೇಡ್​ಗಳನ್ನು ತಂದು ಹಾಕಲಾಗಿದ್ದು, ಮಧ್ಯಾಹ್ನದ ಬಳಿಕ ರಸ್ತೆಗೆ ಅಡ್ಡಲಾಗಿ ಹಾಕಲಾಗುತ್ತದೆ..

ಬಿಗಿ ಪೊಲೀಸ್​ ಬಂದೋಬಸ್ತ್
ಬಿಗಿ ಪೊಲೀಸ್​ ಬಂದೋಬಸ್ತ್

ಮಂಗಳೂರು: ಪಿಎಫ್ಐ ಕಾರ್ಯಕರ್ತರ ಮೇಲೆ ಲಾಠಿಚಾರ್ಜ್ ಮಾಡಿರುವುದನ್ನು ಖಂಡಿಸಿ ಇಂದು 'ಎಸ್​ಪಿ ಆಫೀಸ್ ಚಲೋ'ಗೆ ಕರೆ‌ ನೀಡಲಾಗಿದೆ. ಈ ಹಿನ್ನೆಲೆ ಮಂಗಳೂರಿನಲ್ಲಿ ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿದೆ.

ಕಾರ್ಯಕರ್ತರ ಮೇಲೆ ಲಾಠಿಚಾರ್ಜ್ ಮಾಡಿರುವುದರ ವಿರುದ್ಧ ಪಿಎಫ್ಐ, ಇಂದು ಮಧ್ಯಾಹ್ನ 3 ಗಂಟೆಗೆ ಎಸ್​ಪಿ ಕಚೇರಿ ಚಲೋ ಪ್ರತಿಭಟನಾ ಕಾರ್ಯಕ್ರಮವನ್ನು ಆಯೋಜಿಸಿದೆ. ಆದರೆ, ಎಸ್‌ಪಿ ಕಚೇರಿ ಚಲೋ ಹೆಸರಿನಲ್ಲಿ ರ‍್ಯಾಲಿಗೆ ಅವಕಾಶ ನೀಡದೆ ಕೇವಲ ತಾಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲು ಮಾತ್ರ ಅವಕಾಶ ನೀಡುವುದಾಗಿ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಹೇಳಿದ್ದಾರೆ.

ಬಿಗಿ ಪೊಲೀಸ್​ ಭದ್ರತೆಗೆ ಸಿದ್ಧತೆ

ಎಸ್‌ಪಿ ಕಚೇರಿ ಚಲೋಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಬಂದೋಬಸ್ತ್ ಕೈಗೊಂಡಿದೆ. ಪ್ರತಿಭಟನೆ ನಡೆಯುವ ಸ್ಥಳದಲ್ಲಿ ನೂರಾರು ಬ್ಯಾರಿಕೇಡ್​ಗಳನ್ನು ತಂದು ಹಾಕಲಾಗಿದ್ದು, ಮಧ್ಯಾಹ್ನದ ಬಳಿಕ ರಸ್ತೆಗೆ ಅಡ್ಡಲಾಗಿ ಹಾಕಲಾಗುತ್ತದೆ.

ಸಾವಿರಾರು ಸಂಖ್ಯೆಯಲ್ಲಿ ಪ್ರತಿಭಟನಕಾರರು ಆಗಮಿಸುವ ಸಾಧ್ಯತೆ ಇರುವುದರಿಂದ ಅಹಿತಕರ ಘಟನೆ ನಡೆಯದಂತೆ ತಡೆಯಲು ಪೊಲೀಸ್ ಬಿಗಿಭದ್ರತೆ ಏರ್ಪಡಿಸಲಾಗಿದೆ. 4 ಕೆಎಸ್ಆರ್​​ಪಿ, 5 ಸಿಎಆರ್ ತುಕಡಿ ಮತ್ತು ಮಂಗಳೂರು ನಗರ ಪೊಲೀಸ್ ವ್ಯಾಪ್ತಿಯ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಎಸ್‌ಪಿ ಕಚೇರಿಗೆ ಹೋಗುವ ರಸ್ತೆಯಲ್ಲಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ ಎಂದು ಕಮಿಷನರ್ ತಿಳಿಸಿದ್ದಾರೆ.

ಇದನ್ನೂ ಓದಿ:ಪ್ರೀತಿಯಲ್ಲಿ ಗೆದ್ದು, ಸಾವಿನಲ್ಲಿ ಒಂದಾದ ಜೋಡಿ : ಹನುಮಂತ-ಶೃತಿ ದುರಂತ ಪ್ರೇಮಕಥೆ

Last Updated : Dec 17, 2021, 2:04 PM IST

ABOUT THE AUTHOR

...view details