ಕರ್ನಾಟಕ

karnataka

ETV Bharat / city

ಪೈಶಾಚಿಕ ಕೃತ್ಯ! ದಕ್ಷಿಣ ಕನ್ನಡ: ಪುತ್ತೂರಿನಲ್ಲಿ ಹೆತ್ತ ತಾಯಿಯ ಮೇಲೆ ಪಾಪಿ ಮಗನಿಂದ ಅತ್ಯಾಚಾರ - ಮಗನಿಂದಲೇ ತಾಯಿಯ ಮೇಲೆ ಅತ್ಯಾಚಾರ

ತಾಯಿ ಮತ್ತು ಮಗ ಒಂದೇ ಮನೆಯಲ್ಲಿ ವಾಸಿಸುತ್ತಿದ್ದಾರೆ. ಈ ಕೃತ್ಯ ನಡೆದ ರಾತ್ರಿ ಜನವರಿ 12ರಂದು ಎಂದಿನಂತೆ ರಾತ್ರಿ ಊಟ ಮಾಡಿ ಆರೋಪಿಯು ತನ್ನ ಕೋಣೆಯಲ್ಲಿ ಮಲಗಿದ್ದ. 3 ಗಂಟೆ ನಸುಕಿನ ವೇಳೆ ತಾಯಿ ಮಲಗಿದ್ದ ಕೋಣೆಗೆ ತೆರಳಿ ಆರೋಪಿ ಅತ್ಯಾಚಾರ ಎಸಗಿದ್ದಾನೆ..

son raped mother in dakshina kannada
ಮಂಗಳೂರು: ತಾಯಿಯ ಮೇಲೆಯೇ ಮಗನಿಂದ ಅತ್ಯಾಚಾರ, ದೂರು ದಾಖಲು

By

Published : Jan 14, 2022, 1:31 PM IST

Updated : Jan 14, 2022, 1:53 PM IST

ಪುತ್ತೂರು, ದಕ್ಷಿಣ ಕನ್ನಡ :ತಾಯಿಯ ಮೇಲೆಯೇ ಮಗ ಅತ್ಯಾಚಾರ ಎಸಗಿದ ಪೈಶಾಚಿಕ ಘಟನೆಯೊಂದು ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮದ ಕುರಿಕ್ಕಾರದಲ್ಲಿ ಜನವರಿ 12ರ ತಡರಾತ್ರಿ ನಡೆದಿದೆ.

ತಡರಾತ್ರಿ ಹಾಗೂ ಮರುದಿನ ಬೆಳಗ್ಗೆ ಎರಡು ಬಾರಿ ತಾಯಿಯ ತೀವ್ರ ವಿರೋಧದ ನಡುವೆಯೂ ಅಮಾನುಷವಾಗಿ ಪ್ರಾಣಿಯಂತೆ ಎರಗಿ ಅತ್ಯಾಚಾರ ಎಸಗಿದ್ದಾನೆ. ಇದರಿಂದ ಸಂತ್ರಸ್ತೆ ತೀವ್ರವಾಗಿ ಅಸ್ವಸ್ಥಗೊಂಡಿದ್ದು, ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

58 ವರ್ಷದ ಸಂತ್ರಸ್ತೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಈ ಬಗ್ಗೆ ದೂರು ನೀಡಿದ್ದಾರೆ. ಮಗನ ವಿರುದ್ಧ ಐಪಿಸಿ ಸೆಕ್ಷನ್ 376(2)(ಎನ್​​) ಮತ್ತು 506 ಸೆಕ್ಷನ್​ಗಳ ಅಡಿಯಲ್ಲಿ ದೂರು ದಾಖಲಾಗಿದೆ. ಸದ್ಯ ಆರೋಪಿಯನ್ನು ಸಂಪ್ಯ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆಂದು ತಿಳಿದು ಬಂದಿದೆ.

ತಾಯಿ ಮತ್ತು ಮಗ ಒಂದೇ ಮನೆಯಲ್ಲಿ ವಾಸಿಸುತ್ತಿದ್ದಾರೆ. ಈ ಕೃತ್ಯ ನಡೆದ ರಾತ್ರಿ ಜನವರಿ 12ರಂದು ಎಂದಿನಂತೆ ರಾತ್ರಿ ಊಟ ಮಾಡಿ ಆರೋಪಿಯು ತನ್ನ ಕೋಣೆಯಲ್ಲಿ ಮಲಗಿದ್ದ. 3 ಗಂಟೆ ನಸುಕಿನ ವೇಳೆ ತಾಯಿ ಮಲಗಿದ್ದ ಕೋಣೆಗೆ ತೆರಳಿ ಆರೋಪಿ ಅತ್ಯಾಚಾರ ಎಸಗಿದ್ದಾನೆ.

ಈ ಸಂದರ್ಭ ತಾಯಿ ಕಿರುಚಿ, ತೀವ್ರ ವಿರೋಧ ವ್ಯಕ್ತಪಡಿಸಿದ್ದಾಳೆ. ಈ ವೇಳೆ ಆರೋಪಿಯು ತಾಯಿಯ ಬಾಯಿಗೆ ಬಟ್ಟೆ ಒತ್ತಿ, ಬೊಬ್ಬೆ ಹಾಕದಂತೆ ಬೆದರಿಕೆ ಹಾಕಿದ್ದಾನೆ. ಅತ್ಯಾಚಾರದ ಬಳಿಕ ವಿಚಾರವನ್ನು ಯಾರಲ್ಲಾದರೂ ತಿಳಿಸಿದರೆ ಕೊಂದು ಬಿಡುವುದಾಗಿ ಬೆದರಿಸಿದ್ದಾನೆ.

ಇದಾದ ಬಳಿಕ ಜನವರಿ 13ರಂದು ಬೆಳಗ್ಗೆ ತಾಯಿ ಅಡುಗೆ ಕೋಣೆಯಲ್ಲಿದ್ದ ಸಂದರ್ಭದಲ್ಲಿ ಅಲ್ಲಿಗೆ ಬಂದ ಆರೋಪಿಯು ಬಲವಂತದಿಂದ ಆಕೆಯನ್ನು ಮನೆಯ ಹಾಲ್‌ಗೆ ಎಳೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎಂದು ದೂರು ದಾಖಲಾಗಿದೆ.

ಮಗನ ಕೃತ್ಯದಿಂದ ಅಸ್ವಸ್ಥಗೊಂಡಿರುವ ಮಹಿಳೆ ಮಧ್ಯಾಹ್ನ 1 ಗಂಟೆಗೆ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಬಂದಾಗ ವೈದ್ಯರು ಪರೀಕ್ಷಿಸಿ, ಒಳರೋಗಿಯಾಗಿ ದಾಖಲಿಸಿಕೊಂಡಿದ್ದಾರೆ. ಬಳಿಕ ಆಕೆ ಸಂಪ್ಯ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಅಂದಾಜು 35 ವರ್ಷದ ಆರೋಪಿ ವಿವಾಹಿತನಾಗಿದ್ದಾನೆ. ಆತನ ಪತ್ನಿಯು ತವರು ಮನೆಯಲ್ಲಿ ವಾಸ ಮಾಡುತ್ತಿದ್ದಾಳೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ:ಸಂಕ್ರಾಂತಿ ಹಬ್ಬಕ್ಕೆ ತೆರಳುವ ವಿಚಾರದಲ್ಲಿ ಜಗಳ: ಪತ್ನಿ ಕೊಂದ ಪತಿ

Last Updated : Jan 14, 2022, 1:53 PM IST

ABOUT THE AUTHOR

...view details