ಕರ್ನಾಟಕ

karnataka

ETV Bharat / city

ವೃದ್ಧೆ ತಾಯಿಯ ಮೇಲೆ ರಾಕ್ಷಸಿ ಕೃತ್ಯ... ಹಾಸಿಗೆಯಿಂದ ಎತ್ತಿ ಬಿಸಾಡಿದ್ರು ಮಗ, ಮೊಮ್ಮಗ...! - ತಾಯಿಯ ಮೇಲೆ ಹಲ್ಲೆ

ಹೆತ್ತ ತಾಯಿ, ಹೊತ್ತ ಭೂಮಿ ಸ್ವರ್ಗಕ್ಕಿಂತಲೂ ಮಿಗಿಲು ಎಂಬ ಮಾತಿದೆ. ಆದ್ರೆ ಒಂಭತ್ತು ತಿಂಗಳು ಹೊತ್ತು ಹೆತ್ತ ತಾಯಿಯನ್ನು ಮಗ ಮತ್ತು ಮೊಮ್ಮಗ ಕುಡಿದು ಹಿಗ್ಗಾಮುಗ್ಗಾ ಥಳಿಸಿ ಎತ್ತಿ ಬಿಸಾಡಿದ ಪೈಶಾಚಿಕ ಕೃತ್ಯ ಬೆಳ್ತಂಗಡಿ ತಾಲೂಕಿನ ಸವಣಾಲು ಎಂಬಲ್ಲಿ ಬೆಳಕಿಗೆ ಬಂದಿದೆ.

son-grandson-beaten-aged-mother
ವೃದ್ಧೆ ತಾಯಿಯ ಮೇಲೆ ಹಲ್ಲೆ

By

Published : Jul 17, 2020, 6:33 PM IST

Updated : Jul 17, 2020, 6:43 PM IST

ಬೆಳ್ತಂಗಡಿ(ದಕ್ಷಿಣ ಕನ್ನಡ): ಹೆತ್ತ ಮಗ ಮತ್ತು ಮೊಮ್ಮಗ ಸೇರಿ ವೃದ್ಧೆ ತಾಯಿಯನ್ನು ಹಿಗ್ಗಾಮುಗ್ಗಾ ಥಳಿಸಿ ಎತ್ತಿ ಬಿಸಾಡಿದ ರಾಕ್ಷಸಿ ಕೃತ್ಯ ಬೆಳ್ತಂಗಡಿ ತಾಲೂಕಿನ ಸವಣಾಲು ಎಂಬಲ್ಲಿ ನಡೆದಿದೆ.

ಸವಣಾಲು ಹಲಸಿನಕಟ್ಟೆ ಎಂಬಲ್ಲಿನ ನಿವಾಸಿ ವೃದ್ಧೆ ಅಪ್ಪಿ ಶೆಟ್ಟಿ ಎಂಬರಿಗೆ ಅವರ ಮಗ ಶ್ರೀನಿವಾಸ್​ ಶೆಟ್ಟಿ ಹಾಗೂ ಮೊಮ್ಮಗ ಪ್ರದೀಪ್ ಶೆಟ್ಟಿ ಕಂಠಪೂರ್ತಿ ಕುಡಿದು ನಿಸ್ಸಾಹಯಕ ಸ್ಥಿತಿಯಲ್ಲಿರುವ ಅಪ್ಪಿಯ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿ ಎತ್ತಿ ಬಿಸಾಡಿದ್ದಾರೆ. ಈ ದೃಶ್ಯವನ್ನು ಅಲ್ಲೇ ಇದ್ದ ಇನ್ನೋರ್ವ‌ ಮೊಮ್ಮಗ ಮೊಬೈಲ್​ನಲ್ಲಿ ಚಿತ್ರೀಕರಿಸಿದ್ದಾರೆ.

ವೃದ್ಧೆ ತಾಯಿಯ ಮೇಲೆ ಪೈಶಾಚಿಕ ಕೃತ್ಯ

ಅನಾರೋಗ್ಯದಿಂದ ಬಳಲುತ್ತಿರುವ ಅಪ್ಪಿ ಶೆಟ್ಟಿ ಕಳೆದ ಕೆಲ ವರ್ಷಗಳಿಂದ ಮಲಗಿದ್ದಲ್ಲೇ ಇದ್ದಾರೆ. ಹೀಗಾಗಿ ಪ್ರತಿದಿನ ಈ ಇಬ್ಬರು ಇದೇ ರೀತಿ ಕುಡಿದು ಬಂದು ಹಲ್ಲೆ ನಡೆಸುತ್ತಿದ್ದಾರೆ. ಇದರಿಂದ ನೊಂದ ಇನ್ನೋರ್ವ ಮೊಮ್ಮಗ ಏನು ಮಾಡಲಾಗದೇ ಘಟನೆಯನ್ನು ಮೊಬೈಲ್​ನಲ್ಲಿ ಸೆರೆಹಿಡಿದಿದ್ದಾರೆ.

ಈ ವಿಡಿಯೋ ನೋಡಿ ತಕ್ಷಣ ಕಾರ್ಯಪ್ರವೃತ್ತರಾದ ಬೆಳ್ತಂಗಡಿ ಸರ್ಕಲ್ ಇನ್ಸ್​ಪೆಕ್ಟರ್ ಸಂದೇಶ್ ಪಿ ಜಿ ಮಾರ್ಗದರ್ಶನದಲ್ಲಿ ಸಬ್ ಇನ್ಸ್ ಪೆಕ್ಟರ್ ನಂದಕುಮಾರ್ ನೇತೃತ್ವದ ಪೊಲೀಸರ ತಂಡ, ಹಲ್ಲೆ ನಡೆಸಿದ ಈ ಇಬ್ಬರನ್ನೂ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಬಂಧಿಸಿದ್ದಾರೆ.

ಗಾಯಗೊಂಡಿರುವ ವೃದ್ಧೆಯನ್ನು ಬೆಳ್ತಂಗಡಿ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಈ ದೃಶ್ಯ ಕಲ್ಲು ಹೃದಯವರಿಗೂ ಕಣ್ಣೀರು ತರಿಸುವಂತಿದೆ.

Last Updated : Jul 17, 2020, 6:43 PM IST

ABOUT THE AUTHOR

...view details