ಕರ್ನಾಟಕ

karnataka

ETV Bharat / city

ರೌಡಿಶೀಟರ್ ಕಕ್ಕೆ ರಾಹುಲ್ ಹತ್ಯೆ ಪ್ರಕರಣ.. ಆರು ವರ್ಷದ ದ್ವೇಷವಿಟ್ಟುಕೊಂಡು ಹತ್ಯೆ ಮಾಡಿದ ಆರು ಮಂದಿ ಅರೆಸ್ಟ್ - ರೌಡಿ ಶೀಟರ್ ಕಕ್ಕೆ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಗಳ ಬಂಧನ

ರೌಡಿಶೀಟರ್ ಕಕ್ಕೆ ರಾಹುಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನರನ್ನು ಪೊಲೀಸರು ಕೊಲೆ ಮಾಡಿರುವ ಘಟನೆ ನಡೆದಿದೆ..

people arrested over murder case in Mangalore, people arrested over Rowdy Sheeter Kakke murder case, Mangalore crime news, ಮಂಗಳೂರಿನಲ್ಲಿ ಕೊಲೆ ಪ್ರಕರಣದಲ್ಲಿ ಜನರ ಬಂಧನ, ರೌಡಿ ಶೀಟರ್ ಕಕ್ಕೆ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಗಳ ಬಂಧನ, ಮಂಗಳೂರು ಅಪರಾಧ ಸುದ್ದಿ,
ರೌಡಿಶೀಟರ್ ಕಕ್ಕೆ ರಾಹುಲ್ ಹತ್ಯೆ ಪ್ರಕರಣ

By

Published : May 9, 2022, 4:17 PM IST

ಮಂಗಳೂರು :ರೌಡಿಶೀಟರ್ ರಾಹುಲ್‌ ತಿಂಗಳಾಯ ಯಾನೆ ಕಕ್ಕೆ ರಾಹುಲ್ ಎಂಬಾತನ ಕೊಲೆ ಮಾಡಿದ ಆರು ಮಂದಿ ಆರೋಪಿಗಳನ್ನು ಮಂಗಳೂರು ದಕ್ಷಿಣ ಪೊಲೀಸರು ಬಂಧಿಸಿದ್ದಾರೆ. ಬಂಧಿತರು ಮಹೇಂದ್ರ ಶೆಟ್ಟಿ (27), ಅಕ್ಷಯಕುಮಾರ್ (25), ಸುಶಿತ್ (20) ದಿಲ್ಲೆಶ್ ಬಂಗೇರ (21), ಶುಭಂ (26) ಮತ್ತು ವಿಷ್ಣು.ಪಿ (20) ಎಂದು ಗುರುತಿಸಲಾಗಿದೆ.

ಇದರಲ್ಲಿ ಸುಶೀತ್ ಹೋಟೆಲ್ ಮ್ಯಾನೇಜ್​ಮೆಂಟ್ ವಿದ್ಯಾರ್ಥಿಯಾಗಿದ್ದು, ಮಹೇಂದ್ರ ಕುಮಾರ್, ಅಕ್ಷಯ ಕುಮಾರ್ ಗಲ್ಫ್​ನಲ್ಲಿ ಕೆಲಸ ಮಾಡುತ್ತಿದ್ದರು. ಇವರು ಮಾರ್ಚ್​ನಲ್ಲಿ ಗಲ್ಫ್​ನಿಂದ ಭಾರತಕ್ಕೆ ಬಂದಿದ್ದರು.

ಏಪ್ರಿಲ್ 28ರಂದು ಮಂಗಳೂರು ಎಮ್ಮೆಕರ ಮೈದಾನಕ್ಕೆ ಕೋಳಿ ಅಂಕಕ್ಕೆ ಬಂದಿದ್ದ ಹೊಯ್ ಬಜಾರ್ ನಿವಾಸಿ ಕಕ್ಕೆ ರಾಹುಲ್ ತನ್ನ ಸ್ನೇಹಿತನ ಜೊತೆ ವಾಪಾಸ್‌ ಮನೆಗೆ ಹೋಗಲು ಸ್ಕೂಟರ್​ನಲ್ಲಿ ಹೊರಡುವ ಸಮಯದಲ್ಲಿ ಆರೋಪಿಗಳಾದ ಮಹೇಂದ್ರ ಶೆಟ್ಟಿ, ಅಕ್ಷಯ್ ಕುಮಾರ್, ಸುಶೀತ್ ಹಾಗೂ ದಿಲೇಶ್ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಬಂದಾಗ ರಾಹುಲ್ ಕಕ್ಕೆ ಸ್ಕೂಟರ್​​ನಿಂದ ಇಳಿದು ಓಡಿ ಹೋಗಿದ್ದರು.

ಓದಿ:ವೈರ್​ನಿಂದ ಕತ್ತು ಬಿಗಿದು ಪ್ರಿಯತಮೆ ತಾಯಿಯ ಕೊಲೆ.. ಕೆಲ ಗಂಟೆಗಳಲ್ಲೇ ಆರೋಪಿ ಅರೆಸ್ಟ್​

ಆರೋಪಿಗಳು ರಾಹುಲ್​ನನ್ನು ಬೆನ್ನತ್ತಿದ್ದಾರೆ. ಈ ಸಮಯದಲ್ಲಿ ದೈವಸ್ನಾನವೊಂದರ ಕಂಪೌಂಡ್ ಗೋಡೆ ಹಾರಿಹೋಗಲು ಪ್ರಯತ್ನಿಸಿದ ಸಮಯ ಆರೋಪಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ. ಆತನನ್ನು ಹಿಡಿದು ಎಮ್ಮೆಕರ ಮೈದಾನಕ್ಕೆ ಎಳೆದುಕೊಂಡು ಬಂದು ಮಾರಕಾಸ್ತ್ರದಿಂದ ಕೊಚ್ಚಿ, ಚೂರಿಯಿಂದ ಇರಿದು, ಮಾರಣಾಂತಿಕವಾಗಿ ಗಾಯಗೊಳಿಸಿದ್ದರು. ಗಾಯಗೊಂಡ ರಾಹುಲ್​ನನ್ನು ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋದಾಗ ಮೃತ ಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದರು. ಈ ಬಗ್ಗೆ ಆರೋಪಿಗಳ ವಿರುದ್ಧ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಕೊಲೆ ಪುಕರಣ ದಾಖಲಾಗಿತ್ತು.

ಈ ಪ್ರಕರಣದ ಕೃತ್ಯದಲ್ಲಿ ನೇರ ಭಾಗಿಯಾದ ಆರೋಪಿಗಳಾದ ಮಹೇಂದ್ರ ಶೆಟ್ಟಿ, ಅಕ್ಷಯ್ ಕುಮಾರ್, ಸುಶಿತ್, ದಿಲ್ಲೇಶ್ ಬಂಗೇರನನ್ನು ಮೇ 8 ರ ರಾತ್ರಿ ಸುರತ್ಕಲ್ ರೈಲ್ವೆ ಸ್ಟೇಶನ್ ಬಳಿಯಿಂದ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿರುತ್ತಾರೆ . ಈ ಪ್ರಕರಣದಲ್ಲಿ ಒಳ ಸಂಚು ನಡೆಸಿ, ಪ್ರಕರಣದ ಕೃತ್ಯಕ್ಕೆ ಸಹಕರಿಸಿದ ಆರೋಪಿಗಳಾದ ಶುಭಂ ಮತ್ತು ವಿಷ್ಣು.ಪಿಯನ್ನು ಮೇ 9ರಂದು ಬೆಳಗಿನ ಜಾವ ಸುಲ್ತಾನ್ ಬತ್ತೇರಿ ಹಾಗೂ ಸೋಮೇಶ್ವರ ಬೀಚ್ ಬಳಿಯಿಂದ ಬಂಧಿಸಿದ್ದಾರೆ.

ಬಂಧಿತರಿಂದ 3 ತಲವಾರು , 4 ಕತ್ತಿ , 3 ಚೂರಿ , ಎರಡು ಸ್ಕೂಟರ್ , ರಾಯಲ್ ಎನ್​ಫೀಲ್ಡ್​ ಬುಲೆಟ್ ಹಾಗೂ 5 ಮೊಬೈಲ್ ಹ್ಯಾಂಡ್ ಸೆಟ್ ವಶಪಡಿಸಿಕೊಳ್ಳಲಾಗಿದೆ . ಬಂಧಿತರ ಪೈಕಿ ಆರೋಪಿ ಸುಶಿತ್​ನ ಮೇಲೆ ಒಂದು ಕೊಲೆ ಯತ್ನ ಪ್ರಕರಣ ಹಾಗೂ ಅಕ್ಷಯ್ ಕುಮಾರ್​ನ ಮೇಲೆ ಒಂದು ಹಲ್ಲೆ ಪ್ರಕರಣ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ .

ಆರು ವರ್ಷದ ದ್ವೇಷ:ರೌಡಿಶೀಟರ್ ಕಕ್ಕೆ ರಾಹುಲ್ ಕೊಲೆಗೆ ಆರು ವರ್ಷದ ಹಗೆತನ ಕಾರಣವಾಗಿದೆ. 2016 ರಲ್ಲಿ ಎಮ್ಮೆಕೆರೆ ಗ್ರೌಂಡ್​ನಲ್ಲಿ ಎರಡು ತಂಡಗಳ ನಡುವೆ ಹಗೆತನ ಆರಂಭವಾಗಿತ್ತು. ಆ ಬಳಿಕ ರಾಹುಲ್ 2019 ರಲ್ಲಿ ಮಹೇಂದ್ರ ಕುಮಾರ್ ಮತ್ತು 2020 ರಲ್ಲಿ ‌ಕಾರ್ತಿಕ್ ಮೇಲೆ ದಾಳಿ ನಡೆಸಿದ್ದನು. ಈ ಎರಡು ತಂಡದವರು ಒಟ್ಟಾಗಿ ಸೇರಿ ಕಕ್ಕೆ ರಾಹುಲ್ ಕೊಲೆ ಮಾಡಲು ಸ್ಕೆಚ್ ಹಾಕಿದ್ದರು.

ABOUT THE AUTHOR

...view details