ಕರ್ನಾಟಕ

karnataka

ETV Bharat / city

ಮಂಗಳೂರಿನಲ್ಲಿ ಧಾರಾಕಾರ ಮಳೆ ನಡುವೆ ಸ್ವಾತಂತ್ರ್ಯೋತ್ಸವ - ಧ್ವಜಾರೋಹಣ

ಧಾರಾಕಾರವಾಗಿ ಸುರಿವ ಮಳೆಯಲ್ಲಿಯೇ ಮಂಗಳೂರಿನಲ್ಲಿ ಸರಳವಾಗಿ ಸ್ವಾತಂತ್ರ್ಯ ದಿನವನ್ನ ಆಚರಿಸಲಾಯ್ತು. ನಗರದ ನೆಹರು ಮೈದಾನದಲ್ಲಿ ಮಳೆಯ ನಡುವೆಯ ಧ್ವಜಾರೋಹಣ ನೆರವೇರಿಸಲಾಯ್ತು.

ಮಂಗಳೂರಿನಲ್ಲಿ ಧಾರಾಕಾರ ಮಳೆಯ ನಡುವೆಯೇ ಸರಳ ಸ್ವಾತಂತ್ರ್ಯೋತ್ಸವ

By

Published : Aug 15, 2019, 3:38 PM IST

ಮಂಗಳೂರು:ದ.ಕ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಉಂಟಾದ ಪ್ರವಾಹದಿಂದ ಹಲವಾರು ಕುಟುಂಬಗಳು ತಮ್ಮ ಎಲ್ಲ ಆಸ್ತಿ - ಪಾಸ್ತಿಗಳನ್ನು ಕಳೆದುಕೊಂಡಿದೆ. ಆದರೆ, ಸಂಯಮದಿಂದ ಸಹಕರಿಸಿರುವ ನೀವು ಯಾರೂ ಹೆದರಬೇಕಾಗಿಲ್ಲ. ನಿಮ್ಮೊಂದಿಗೆ ಜಿಲ್ಲಾಡಳಿತವಿದೆ ಎಂದು ದ.ಕ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಭರವಸೆ ನೀಡಿದರು.

ಧಾರಾಕಾರವಾಗಿ ಸುರಿವ ಮಳೆಯಲ್ಲಿಯೇ ಸ್ವಾತಂತ್ರ್ಯ ದಿನದ ನಿಮಿತ್ತ, ಸರಳವಾಗಿ ನಗರದ ನೆಹರೂ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಮಂಗಳೂರಿನಲ್ಲಿ ಧಾರಾಕಾರ ಮಳೆಯ ನಡುವೆಯೇ ಸರಳ ಸ್ವಾತಂತ್ರ್ಯೋತ್ಸವ

ಕಳೆದ ವಾರ ಎಂದೂ ಕಂಡರಿಯದ ಪ್ರವಾಹ ಉಂಟಾಗಿದೆ. ಸಾರ್ವಜನಿಕರು ಇದರಿಂದ ಸಂಕಷ್ಟಕ್ಕೊಳಗಾಗಿದ್ದಾರೆ. ಅವರಿಗೆ ಮತ್ತೆ ಪುನರ್ವಸತಿ ಕಲ್ಪಿಸಲು ಜಿಲ್ಲೆಯ ಸಹೃದಯ ಸಾರ್ವಜನಿಕರು ಸಹಾಯದ ನೆರವು ಹಸ್ತ ನೀಡಬೇಕಾಗಿದೆ ಎಂದು ಹೇಳಿದರು.

ಇದೇ ವೇಳೆ, ಎಸೆಸೆಲ್ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕ ಗಳಿಸಿದ ಜಿಲ್ಲೆಯ ವಿದ್ಯಾರ್ಥಿಗಳಿಗೆ ಲ್ಯಾಪ್​ಟಾಪ್ ವಿತರಿಸಲಾಯ್ತು. ಕರಾವಳಿ ಕಾವಲು ಪೊಲೀಸ್ ಪಡೆ, ಅಗ್ನಿಶಾಮಕ ದಳ, ಗೃಹರಕ್ಷಕ ದಳ ಸೇರಿದಂತೆ ಒಟ್ಟು 18 ತಂಡಗಳು ಪಥಸಂಚಲದಲ್ಲಿ ಭಾಗವಹಿಸಿದ್ದವು.

ABOUT THE AUTHOR

...view details