ಕರ್ನಾಟಕ

karnataka

ETV Bharat / city

ಮಂಗಳೂರಿನಿಂದ ಚಿಕ್ಕಮಗಳೂರಿಗೆ ಸಿದ್ದಾರ್ಥ್ ಪಾರ್ಥಿವ ಶರೀರ ರವಾನೆ - Siddarth's dead body dispatched

ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಿಂದ ಚಿಕ್ಕಮಗಳೂರಿಗೆ ಆ್ಯಂಬುಲೆನ್ಸ್ ಮೂಲಕ ಸಿದ್ದಾರ್ಥ್ ಮೃತದೇಹ ರವಾನೆ - ಬಿ.ಸಿ.ರೋಡ್ ಮೂಲಕ ಉಜಿರೆ ಮಾರ್ಗವಾಗಿ ಚಿಕ್ಕಮಗಳೂರಿಗೆ ತೆರಳುತ್ತಿರುವ ಸಿದ್ದಾರ್ಥ್ ಪಾರ್ಥಿವ ಶರೀರ - ಹುಟ್ಟೂರು ಚಿಕ್ಕಮಗಳೂರಿನ ಚೇತನಹಳ್ಳಿಯಲ್ಲಿ ನಡೆಯಲಿದೆ ಅಂತ್ಯ ಸಂಸ್ಕಾರ

ಸಿದ್ದಾರ್ಥ್ ಮೃತದೇಹ ರವಾನೆ

By

Published : Jul 31, 2019, 11:52 AM IST

Updated : Jul 31, 2019, 12:40 PM IST

ಮಂಗಳೂರು:ಸಿದ್ದಾರ್ಥ್ ಪಾರ್ಥಿವ ಶರೀರ ನಗರದ ವೆನ್ಲಾಕ್ ಆಸ್ಪತ್ರೆಯಿಂದ 10.45 ಗಂಟೆ ಸುಮಾರಿಗೆ ಹೊರಟಿದ್ದು, ಬಿ.ಸಿ.ರೋಡ್ ಮೂಲಕ ಉಜಿರೆ ಮಾರ್ಗವಾಗಿ ಚಿಕ್ಕಮಗಳೂರಿಗೆ ಆ್ಯಂಬುಲೆನ್ಸ್ ಮೂಲಕ ರವಾನೆಯಾಗಲಿದೆ.

ಸಿದ್ದಾರ್ಥ್ ಮೃತದೇಹ ರವಾನೆ

ಆಂಬ್ಯುಲೆನ್ಸ್‌ನಲ್ಲಿ ಕುಟುಂಬ ಸದಸ್ಯರೂ ಪ್ರಯಾಣ ಬೆಳೆಸಿದ್ದಾರೆ. ಶಾಸಕ ರಾಜೇಗೌಡ, ಯು. ಟಿ. ಖಾದರ್, ಐವನ್ ಡಿಸೋಜಾ ಈ ಸಂದರ್ಭ ಜೊತೆಯಲ್ಲಿದ್ದು, ಸಹಕರಿಸಿದರು.

ಸಿದ್ದಾರ್ಥ್ ಪಾರ್ಥಿವ ಶರೀರವನ್ನು ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಬಳಿಕ ಮಂಗಳೂರಿನ ‌ವೆನ್ಲಾಕ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿತ್ತು.

ಇನ್ನು ಮೃತದೇಹವನ್ನು ಸಿದ್ದಾರ್ಥ್ ಅವರ ಹುಟ್ಟೂರಾದ ಚಿಕ್ಕಮಗಳೂರಿನ ಚೇತನಹಳ್ಳಿಯಲ್ಲಿ ಅಂತ್ಯ ಸಂಸ್ಕಾರ ಮಾಡಲಾಗುವುದು.

Last Updated : Jul 31, 2019, 12:40 PM IST

ABOUT THE AUTHOR

...view details