ಕರ್ನಾಟಕ

karnataka

ETV Bharat / city

ಚಿನ್ನಿ ಬಾಂಬ್​ ಜೊತೆ ಮಂಜುನಾಥನ ದರ್ಶನ ಪಡೆದ ಶುಭಾ ಪೂಂಜಾ

ಬಿಗ್​​​​​ಬಾಸ್ ಖ್ಯಾತಿಯ ಶುಭಾ ಪೂಂಜಾ ಅವರು ತಮ್ಮ ಗೆಳೆಯ ಸುಮಂತ್ ಬಿಲ್ಲವ ಜೊತೆ ಧರ್ಮಸ್ಥಳಕ್ಕೆ ಭೇಟಿ ನೀಡಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದಿದ್ದಾರೆ.

Shubha Poonja
ಶುಭಾ ಪೂಂಜಾ

By

Published : Sep 4, 2021, 11:24 AM IST

ಮಂಗಳೂರು: ಸ್ಯಾಂಡಲ್​ವುಡ್ ನಟಿ, ಬಿಗ್ ಬಾಸ್ ಖ್ಯಾತಿಯ ಶುಭಾ ಪೂಂಜಾ ಅವರು ತಮ್ಮ ಗೆಳೆಯನ ಜೊತೆ ಧರ್ಮಸ್ಥಳಕ್ಕೆ ಭೇಟಿ ನೀಡಿ, ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದಿದ್ದಾರೆ.

ಗೆಳೆಯ ಸುಮಂತ್ ಬಿಲ್ಲವ ಜೊತೆ ದೇವಸ್ಥಾನದ ಮುಂಭಾಗ ನಿಂತು ತೆಗೆಸಿಕೊಂಡ ಫೋಟೋವನ್ನು ಶುಭಾ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ​ ಪೋಸ್ಟ್ ಮಾಡಿ, 'ಧರ್ಮಸ್ಥಳ ದರ್ಶನ' ಎಂದು ಬರೆದು ಕೊಂಡಿದ್ದಾರೆ.

ಬಿಗ್​ಬಾಸ್ ಶೋ ಮುಗಿದ ಬಳಿಕ ಶುಭಾ ಪೂಂಜಾ ತಮ್ಮ ಕುಟುಂಬದೊಂದಿಗೆ ಸಂತಸದಿಂದ ಸಮಯ ಕಳೆಯುತ್ತಿದ್ದಾರೆ. ಅಷ್ಟೇ ಅಲ್ಲದೇ, ಪವಿತ್ರ ಧಾರ್ಮಿಕ ಕ್ಷೇತ್ರಗಳಿಗೆ ತನ್ನ ಭಾವಿ ಪತಿ ಜತೆ ಭೇಟಿ ನೀಡಿ ದೇವರ ದರ್ಶನ ಪಡೆಯುತ್ತಿದ್ದಾರೆ. ಸುಮಂತ್​ಗೆ ಶುಭಾ ಪ್ರೀತಿಯಿಂದ ಚಿನ್ನಿ ಬಾಂಬ್​ ಎಂದು ಕರೆಯುತ್ತಾರೆ.

ಇನ್ನು ಶುಭಾ ಅವರು ಶೇರ್​ ಮಾಡಿರುವ ಈ ಫೋಟೋಗೆ ಅಭಿಮಾನಿಗಳು ಕಮೆಂಟ್ ಮೂಲಕ ಉತ್ತಮವಾಗಿ ಪ್ರತಿಕ್ರಿಯಿಸುತ್ತಿದ್ದಾರೆ.

ABOUT THE AUTHOR

...view details