ಕರ್ನಾಟಕ

karnataka

ETV Bharat / city

ನಾವು ಕಾರ್ಯಕರ್ತರಿಗೆ ಬಾಂಬ್, ಗ್ರೆನೇಡ್​ ದೀಕ್ಷೆ ನೀಡಿಲ್ಲ: ತ್ರಿಶೂಲ ದೀಕ್ಷೆ ಕುರಿತು ವಿಹಿಂಪ ಮುಖಂಡರ ಸ್ಪಷ್ಟನೆ - mangalore latest news

ನಾವು ಕಾರ್ಯಕರ್ತರಿಗೆ ಬಾಂಬ್, ಗ್ರೆನೆಡ್ ದೀಕ್ಷೆ ನೀಡಿಲ್ಲ. ನಾವು ಕಾರ್ಯಕರ್ತರ ಆತ್ಮಸ್ಥೈರ್ಯ ಹೆಚ್ಚಿಸಲು ತ್ರಿಶೂಲ ದೀಕ್ಷೆ ನೀಡಿದ್ದು ಎಂದು ವಿಶ್ವ ಹಿಂದೂ ಪರಿಷತ್​ ಮುಖಂಡ ಶರಣ್ ಪಂಪ್ ವೆಲ್ ಸ್ಪಷ್ಟನೆ ನೀಡಿದ್ದಾರೆ.

sharan pampwel
ವಿ.ಹಿಂ.ಪ ಮುಖಂಡ ಶರಣ್ ಪಂಪ್ ವೆಲ್

By

Published : Oct 15, 2021, 7:07 PM IST

ಮಂಗಳೂರು: ವಿಶ್ವ ಹಿಂದೂ ಪರಿಷತ್ ಕಚೇರಿಯಲ್ಲಿ ತ್ರಿಶೂಲ ದೀಕ್ಷೆ ನೀಡಿರುವ ವಿಚಾರಕ್ಕೆ ಸ್ಪಷ್ಟನೆ ನೀಡಿರುವ ವಿಶ್ವ ಹಿಂದೂ ಪರಿಷತ್​ ಮುಖಂಡ ಶರಣ್ ಪಂಪ್ ವೆಲ್ ಅವರು, ನಾವು ಕಾರ್ಯಕರ್ತರಿಗೆ ಬಾಂಬ್, ಗ್ರೆನೇಡ್​ ದೀಕ್ಷೆ ನೀಡಿಲ್ಲ. ನಾವು ಕಾರ್ಯಕರ್ತರ ಆತ್ಮಸ್ಥೈರ್ಯ ಹೆಚ್ಚಿಸಲು ತ್ರಿಶೂಲ ದೀಕ್ಷೆ ನೀಡಿದ್ದು ಎಂದು ಹೇಳಿದ್ದಾರೆ.

ವಿ.ಹಿಂ.ಪ ಮುಖಂಡ ಶರಣ್ ಪಂಪ್ ವೆಲ್ ಪ್ರತಿಕ್ರಿಯೆ

ನಾವು ಶಕ್ತಿಯ ಆರಾಧಕರಾಗಿದ್ದು, ಕಾರ್ಯಕರ್ತರ ಆತ್ಮರಕ್ಷಣೆ ಮತ್ತು ಧರ್ಮರಕ್ಷಣೆಗಾಗಿ ಆಯುಧ ಪೂಜೆಯಂದು ಈ ಕಾರ್ಯಕ್ರಮ ಮಾಡಿದ್ದೇವೆ. ಬಜರಂಗದಳದ ಹೊಸ ಹೊಸ ಕಾರ್ಯಕರ್ತರಿಗೆ ತ್ರಿಶೂಲ ದೀಕ್ಷೆ ಕಾರ್ಯಕ್ರಮ ಪ್ರತಿವರ್ಷ ನಡೆಯುತ್ತದೆ.

ಇದು ಯಾರ ವಿರುದ್ಧವೂ ಅಲ್ಲ. ಯಾರನ್ನಾದರೂ ಕೊಲ್ಲಬೇಕು, ತೊಂದರೆ ಕೊಡಬೇಕೆಂಬ ದುರುದ್ದೇಶದಿಂದ ಇದನ್ನು ಮಾಡಿಲ್ಲ. ಕೇವಲ ಕಾರ್ಯಕರ್ತರಲ್ಲಿ ಆತ್ಮಸ್ಥೈರ್ಯ ತುಂಬಲು ಮಾಡಿದ್ದೇವೆ ಎಂದರು.

ಇದನ್ನೂ ಓದಿ:ತ್ರಿಶೂಲ ವಿತರಣೆ ವಿಚಾರ, ಪರಿಶೀಲನೆ ನಡೆಸಲು ಸೂಚನೆ, ತಪ್ಪಾಗಿದ್ದರೆ ಕ್ರಮ : ಕಮಿಷನರ್​ ಶಶಿಕುಮಾರ್

ಇದು ಕಾನೂನು ವಿರುದ್ಧವಾಗಿ ಇಲ್ಲ. ನಾವು ಮಾಡಿರುವ ತ್ರಿಶೂಲ ಹರಿತವಾಗಿಲ್ಲ. ಕೊಲ್ಲಬೇಕು, ಚುಚ್ಚಬೇಕು ಎಂಬ ಉದ್ದೇಶವೂ ಇಲ್ಲ. ಪ್ರತಿ ವರ್ಷ ಹೊಸ ಹೊಸ ಕಾರ್ಯಕರ್ತರಿಗೆ ಈ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುತ್ತೇವೆ. ಇದೇ ರೀತಿ ಶಸ್ತ್ರ ಪೂಜೆಯನ್ನು ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ABOUT THE AUTHOR

...view details