ಮಂಗಳೂರು: ಕೋವಿಡ್ ನಂತರ ದಿನಗಳನ್ನು ಗಮನಿಸಿದಾಗಲೂ ಭಾರತ ವಿಶ್ವಗುರು ಆಗುವಷ್ಟು ಶಕ್ತವಾಗಿದೆ ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟಿದೆ ಎಂದು ಪ್ರಧಾನಿಯವರ ಮಾಜಿ ಮುಖ್ಯಕಾರ್ಯದರ್ಶಿ ಶಕ್ತಿ ಸಿನ್ಹಾ ಹೇಳಿದರು.
ಭಾರತ ವಿಶ್ವಗುರು ಸ್ಥಾನ ಪಡೆಯಲು ಶಕ್ತವಾಗಿದೆ: ಶಕ್ತಿ ಸಿನ್ಹಾ ಓದಿ: ಡಿಕೆಶಿ ವಿರುದ್ಧ ಅವಾಚ್ಯ ಪದ ಬಳಕೆ.. ವಿಷಾದಿಸಿದ ಮಾಜಿ ಸಚಿವ ರಮೇಶ್ ಜಾರಕಿಹೊಳಿ
ನಗರದ ಓಶಿಯನ್ ಪರ್ಲ್ ಸಭಾಂಗಣದಲ್ಲಿ ನಡೆದ ಮಂಗಳೂರು ಲಿಟ್ ಫೆಸ್ಟ್ ನಲ್ಲಿ ಮಾತನಾಡಿದ ಅವರು, ಕೋವಿಡ್ ನಿಯಂತ್ರಣ ಲಸಿಕೆಯನ್ನು ತಯಾರಿಸಿರುವ ಭಾರತ ನೆರೆಯ ರಾಷ್ಟ್ರಗಳಿಗೂ ಪೂರೈಸಿದೆ. ಭಾರತ ತನ್ನ ನೆಲದಲ್ಲಿ ಶಾಂತಿ ಸ್ಥಾಪನೆಯೊಂದಿಗೆ ಇತರ ದೇಶಗಳ ನಡುವೆ ಪ್ರಬಲ ರಾಷ್ಟ್ರವಾಗಿ ಮೂಡಿ ಬರುತ್ತಿದೆ ಎಂದು ಹೇಳಿದರು.
ಭಾರತ ತನ್ನ ನೆಲದಲ್ಲಿ ಶಾಂತಿ ಸ್ಥಾಪನೆಯೊಂದಿಗೆ ಇತರ ದೇಶಗಳ ನಡುವೆ ಪ್ರಬಲ ರಾಷ್ಟ್ರವಾಗಿ ಮೂಡಿ ಬರುತ್ತಿದೆ. ಭಾರತ ಚೀನಾದೊಂದಿಗೆ ಇತ್ತೀಚಿನ ವರ್ಷಗಳಲ್ಲಿ ನಡೆದುಕೊಂಡ ರೀತಿಯನ್ನು ಗಮನಿಸಿದಾಗ ಅದನ್ನು ತಿಳಿದುಕೊಳ್ಳಬಹುದು. ದೇಶದ ಚಾರಿತ್ರಿಕ ಬೆಳವಣಿಗೆಯನ್ನು ಪುನರ್ ವ್ಯಾಖ್ಯಾನ ಮಾಡಬೇಕಾಗಿದೆ. ದೇಶದ ಪ್ರಾಚೀನ ಗ್ರಂಥಗಳಲ್ಲಿ ಸಾಕಷ್ಟು ಸಂಸ್ಕೃತದಲ್ಲಿ ರಚಿಸಲ್ಪಟ್ಟಿದೆ ಎಂದರು.
ಆದರೆ ಇವುಗಳ ಹೆಚ್ಚಿನ ಗ್ರಂಥಗಳನ್ನು ಬಳಸಿಕೊಂಡಿಲ್ಲ. ಪ್ರಾಚೀನ ಭಾರತದ ಜ್ಞಾನ ಸಂಪನ್ಮೂಲವನ್ನು ಬಳಸಿಕೊಂಡಾಗ ಭಾರತ ವಿಶ್ವ ಗುರುವಿನ ಸ್ಥಾನವನ್ನು ಪಡೆದುಕೊಳ್ಳಬಹುದು ಎಂದು ಶಕ್ತಿ ಸಿನ್ಹಾ ಹೇಳಿದರು.