ಕರ್ನಾಟಕ

karnataka

ETV Bharat / city

ಹಾಡಹಗಲೇ ಕೊಕೇನ್​ ಮಾರುತ್ತಿದ್ದ ಮೂವರು ಅಂದರ್​.. - ಪೊಲೀಸರು ಜಂಟಿ ಕಾರ್ಯಾಚರಣೆ

ಮಂಗಳೂರಿನಲ್ಲಿ ಕೊಕೇನ್​ ಮಾರುತ್ತಿದ್ದ ಮೂವರು ಆರೋಪಿಗಳನ್ನು ಮಂಗಳೂರು ಕೇಂದ್ರ ಅಪರಾಧ ವಿಭಾಗದ ಪೊಲೀಸರು ಬಂಧಿಸಿ, ಅವರಿಂದ ₹ 2.40 ಮೌಲ್ಯದ ಮಾಲನ್ನು ವಶಕ್ಕೆ ಪಡೆದಿದ್ದಾರೆ.

sell-large-quantities-of-cocaine-in-mangalore-three-arrest

By

Published : Oct 14, 2019, 4:49 PM IST

ಮಂಗಳೂರು:ನಗರದಲ್ಲಿ ಹಾಡಹಗಲೇ ಮಾದಕ ವಸ್ತು ಕೊಕೇನ್‌ನ ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ಮಂಗಳೂರು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ)ಪೊಲೀಸರು ಹಾಗೂ ಇಕಾನಾಮಿಕ್ ಅಂಡ್ ನಾರ್ಕೋಟಿಕ್ ಠಾಣೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಮಂಗಳೂರು ಫಳ್ನೀರ್​ನ ಫಾಸೀಮ್ ನೌಶಿಬ್ (25), ಕೇರಳ ಮಂಜೇಶ್ವರದ ಅಪ್ಜಲ್ ಹುಸೈನ್ (28), ಫಳ್ನೀರ್​​​ನ ಮಹಮ್ಮದ್ ಝಾಹಿದ್ (26) ಬಂಧಿತರು. ಮಂಗಳೂರು ನಗರದ ಪಡೀಲ್ ಕಂಕನಾಡಿ ಜಂಕ್ಷನ್ ರೈಲ್ವೆ ಸಿಬ್ಬಂದಿ ಸ್ಟಾಪ್ ಕ್ವಾಟ್ರಸ್ ಬಳಿ ಕೊಕೇನ್ ಮಾರುತ್ತಿರುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿತ್ತು. ಆರೋಪಿಗಳಿಂದ ₹2.40 ಲಕ್ಷ ಮೌಲ್ಯದ 30 ಗ್ರಾಂ. ತೂಕದ ಕೊಕೇನ್, ಕೃತ್ಯಕ್ಕೆ ಬಳಸಿದ್ದ ಕಾರು ಮತ್ತು 4 ಮೊಬೈಲ್‌ನ ವಶಕ್ಕೆ ಪಡೆಯಲಾಗಿದೆ.

ABOUT THE AUTHOR

...view details