ಮಂಗಳೂರು (ದಕ್ಷಿಣ ಕನ್ನಡ):ದ.ಕ. ಜಿಲ್ಲೆಯ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿಯ ಅಗತ್ಯವಿದೆ. ಅಲ್ಲದೇ ಹಾಲಿ ನ್ಯಾಯಾಧೀಶರ ಮೂಲಕ ಸಮಗ್ರ ತನಿಖೆಯ ಅಗತ್ಯವಿದೆ. ಇಲಾಖೆಯಲ್ಲಿರುವ ಶೇ.60ರಷ್ಟು ಸಂಘ ಪರಿವಾರದ ಮಾನಸಿಕತೆಯುಳ್ಳ, ಮುಸ್ಲಿಂ ದ್ವೇಷಿಯುಳ್ಳ ಪೊಲೀಸರನ್ನು ಇಲಾಖೆಯಿಂದ ತೆಗೆದು ಹಾಕಿ ಸ್ವಚ್ಛಗೊಳಿಸಬೇಕು ಎಂದು ಎಸ್ಡಿಪಿಐ ಮುಖಂಡ ಶಾಫಿ ಬೆಳ್ಳಾರೆ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಕ್ಲಾಕ್ ಟವರ್ ಬಳಿ ನಡೆದ ಧರಣಿಯಲ್ಲಿ ಮಾತನಾಡಿದ ಅವರು, ಮುಸ್ಲಿಂ ದ್ವೇಷಿಯುಳ್ಳ ಪೊಲೀಸರನ್ನು ಇಲಾಖೆಯಿಂದ ತೆಗೆದು ಹಾಕುವ ಮೂಲಕ ದ.ಕ. ಜಿಲ್ಲೆಯಲ್ಲಿ ಶಾಂತಿ, ಸಾಮರಸ್ಯ, ನೆಮ್ಮದಿ ಕಂಡುಕೊಳ್ಳಲು ಸಾಧ್ಯ ಎಂದು ಹೇಳಿದರು.
ಪೊಲೀಸ್ ಇಲಾಖೆಯಲ್ಲಿ ಶೇ.6ಂರಷ್ಟು ಸಂಘ ಪರಿವಾರದ ಮಾನಸಿಕತೆ ಉಳ್ಳವರು ಇದ್ದಾರೆ. ಸಿದ್ದರಾಮಯ್ಯ ಸರ್ಕಾರ ಇದ್ದಾಗ ಇಂತಹ ಪೊಲೀಸರ ಬಗ್ಗೆ ಇಲ್ಲಿನ ಮುಸ್ಲಿಂ ನಾಯಕರು ಮನವಿಯ ಮೇಲೆ ಮನವಿ ಸಲ್ಲಿಸಿದ್ದರು. ತಾರತಮ್ಯ ಎಸಗುವ ಪೊಲೀಸರ ಪಟ್ಟಿಯನ್ನು ಕೊಟ್ಟರು. ಆದರೆ ಅಂತಹವರ ಮೇಲೆ ಕ್ರಮ ಜರುಗಿಸಲು ಆ ಪಕ್ಷಕ್ಕೆ ಸಾಧ್ಯವಾಗಿಲ್ಲ. ಸಂಘ ಪರಿವಾರಕ್ಕೆ ಗೊಬ್ಬರವನ್ನು ಹಾಕಿ ಬೆಳೆಸಿದ್ದು ಅದೇ ಪಕ್ಷದವರು. ಅಂತಹವರು ಈಗ ನಮಗೆ ಪ್ರತಿಭಟನೆ ಮಾಡುವುದಕ್ಕೆ ಪುಕ್ಕಟ್ಟೆ ಸಲಹೆ ಕೊಡುತ್ತಿದ್ದಾರೆ. ಅವರ ಸಲಹೆಯ ಅಗತ್ಯ ನಮಗಿಲ್ಲ. ನಮ್ಮ ಕಾರ್ಯಕರ್ತರ ರಕ್ತಕ್ಕೆ ಅವರ ಅನುಕಂಪದ ಅಗತ್ಯವಿಲ್ಲ ಎಂದು ಶಾಫಿ ವಾಗ್ದಾಳಿ ನಡೆಸಿದರು.