ಅಂತಾರಾಷ್ಟ್ರೀಯ ಸ್ಯಾಕ್ಸೊಫೋನ್ ಕಲಾವಿದ ಮಚ್ಚೇಂದ್ರನಾಥ ಕೋವಿಡ್ಗೆ ಬಲಿ - ಸ್ಯಾಕ್ಸೊಫೋನ್ ಕಲಾವಿದ ಮಚೇಂದ್ರನಾಥ ಕೊರೊನಾಗೆ ಬಲಿ
ಕೊರೊನಾದಿಂದ ಅಂತಾರಾಷ್ಟ್ರೀಯ ಖ್ಯಾತಿಯ ಸ್ಯಾಕ್ಸೊಫೋನ್ ಕಲಾವಿದ ಮಚ್ಚೇಂದ್ರನಾಥ ಮೃತಪಟ್ಟಿದ್ದಾರೆ. ಮೂರು ದಿನಗಳ ಹಿಂದೆ ಇವರ ಪತ್ನಿ ಕೂಡ ಕೋವಿಡ್ಗೆ ಬಲಿಯಾಗಿದ್ದರು.
ಮಚೇಂದ್ರನಾಥ
ಮಂಗಳೂರು: ಅಂತಾರಾಷ್ಟ್ರೀಯ ಖ್ಯಾತಿಯ ಸ್ಯಾಕ್ಸೊಫೋನ್ ಕಲಾವಿದ ಮಚ್ಚೇಂದ್ರನಾಥ ಇಂದು ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ.
ಇತ್ತೀಚೆಗೆ ಮಚ್ಚೇಂದ್ರನಾಥ ಅವರಿಗೆ ಕೋವಿಡ್ ಸೋಂಕು ತಗುಲಿತ್ತು. ಎರಡು ದಿನಗಳ ಹಿಂದೆ ನಗರದ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೇ ಇಂದು ಮೃತಪಟ್ಟಿದ್ದಾರೆ.
ದೇಶ, ವಿದೇಶಗಳಲ್ಲಿ ಹಲವಾರು ಸ್ಯಾಕ್ಸೊಫೋನ್ ಕಾರ್ಯಕ್ರಮಗಳನ್ನು ಮಾಡಿರುವ ಮಚ್ಚೇಂದ್ರನಾಥ ಅವರು, ಮಂಗಳಾದೇವಿ ದೇವಳದ ಸ್ಯಾಕ್ಸೊಫೋನ್ ಕಲಾವಿದರಾಗಿದ್ದರು. ಮೂರು ದಿನಗಳ ಹಿಂದೆ ಅವರ ಪತ್ನಿ ಕೂಡ ಕೋವಿಡ್ಗೆ ಬಲಿಯಾಗಿದ್ದರು.