ಕರ್ನಾಟಕ

karnataka

ETV Bharat / city

ಎಸ್​ಡಿಪಿಐ ಆಕ್ಷೇಪದ ಬಳಿಕ ಸುರತ್ಕಲ್ ಜಂಕ್ಷನ್‌ನಲ್ಲಿದ್ದ ಸಾವರ್ಕರ್ ಫೋಟೋ ತೆರವು

ಸುರತ್ಕಲ್ ಜಂಕ್ಷನ್‌ ಫ್ಲೈಓವರ್‌ನಡಿ ವಿ ಡಿ ಸಾವರ್ಕರ್ ಫೋಟೋ ಹಾಕಿ ವೀರ ಸಾವರ್ಕರ್ ವೃತ್ತ ಎಂದು ತಿಳಿಸಿದ್ದ ಬ್ಯಾನರ್​ ತೆರವುಗೊಳಿಸಲಾಗಿದೆ.

ಎಸ್​ಡಿಪಿಐ ಆಕ್ಷೇಪದ ಬಳಿಕ ಸುರತ್ಕಲ್ ಜಂಕ್ಷನ್ ನಲ್ಲಿ ಹಾಕಲಾದ ಸಾವರ್ಕರ್ ಪೊಟೋ ತೆರವು
suratkal-junction

By

Published : Aug 15, 2022, 6:13 PM IST

ಮಂಗಳೂರು(ದಕ್ಷಿಣ ಕನ್ನಡ):ಸುರತ್ಕಲ್ ಜಂಕ್ಷನ್‌ನಲ್ಲಿ ಫ್ಲೈ ಓವರ್‌ನಡಿ ವಿ ಡಿ ಸಾವರ್ಕರ್ ಫೋಟೋದೊಂದಿಗೆ ಸಾವರ್ಕರ್ ವೃತ್ತ ಎಂದು ಬ್ಯಾನರ್ ಹಾಕಿರುವುದಕ್ಕೆ ಎಸ್‌ಡಿಪಿಐ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದು, ಬಳಿಕ ಅದನ್ನು ತೆಗೆದುಹಾಕಲಾಗಿದೆ.

ಭಾನುವಾರ ಸಂಜೆ ಈ ಬ್ಯಾನರ್ ಹಾಕಲಾಗಿತ್ತು. ನಂತರ ಎಸ್‌ಡಿಪಿಐ ಸುರತ್ಕಲ್ ಘಟಕ ಆಕ್ಷೇಪ ವ್ಯಕ್ತಪಡಿಸಿ ಪೊಲೀಸರ ಗಮನಕ್ಕೆ ತಂದಿದೆ. ಈ ಹಿನ್ನೆಲೆಯಲ್ಲಿ ಭಾನುವಾರ ಸಂಜೆ ಪಾಲಿಕೆಯು ಬ್ಯಾನರ್ ತೆಗೆಸಿದೆ.

ಸುರತ್ಕಲ್ ಜಂಕ್ಷನ್‌ಗೆ ವೀರ ಸಾವರ್ಕರ್ ಹೆಸರಿಡಲು ಈಗಾಗಲೇ ಬಿಜೆಪಿ ಶಾಸಕ ಭರತ್ ಶೆಟ್ಟಿ ಪ್ರಯತ್ನಿಸಿದ್ದರು. ಭರತ್ ಶೆಟ್ಟಿ ಅವರ ಪ್ರಸ್ತಾವನೆಗೆ ಮಹಾನಗರ ಪಾಲಿಕೆ ಅನುಮೋದನೆ ನೀಡಿತ್ತು. ಈ ವೃತ್ತಕ್ಕೆ ಹೆಸರಿಡಲು ಸರಕಾರದ ಅನುಮತಿಗಾಗಿ ಕಾಯಲಾಗುತ್ತಿದೆ. ಇದರ ಮಧ್ಯೆ ಅಪರಿಚಿತ ವ್ಯಕ್ತಿಗಳು ‌ಬ್ಯಾನರ್ ಹಾಕಿದ್ದು, ಗೊಂದಲಕ್ಕೆ ಕಾರಣವಾಗಿದೆ.

ಇದನ್ನೂ ಓದಿ:ನಾವು ಹೋರಾಟಗಾರರ ಗುರುತಿಸುವ ಕೆಲಸ ಮಾಡಿದರೆ ಇವರಿಗೆ ನೆಹರು ಫೋಟೋ ಇಲ್ಲ ಎನ್ನುವ ಚಿಂತೆ : ಸಿಎಂ ವ್ಯಂಗ್ಯ

ABOUT THE AUTHOR

...view details