ಕರ್ನಾಟಕ

karnataka

ETV Bharat / city

ವಿಟ್ಲ ಪಟ್ಟಣಕ್ಕೆ ಬರುವವರಿಗೆ ಕೋವಿಡ್​​​ ನೆಗೆಟಿವ್ ರಿಪೋರ್ಟ್ ಕಡ್ಡಾಯ

ವಿಟ್ಲ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿಲ್ಲ. ಹೀಗಾಗಿ ಶನಿವಾರ, ಭಾನುವಾರ ಸಂಪೂರ್ಣ ಲಾಕ್​ಡೌನ್ ಜೊತೆಗೆ ಪ್ರತಿ ದಿನವೂ ವಿಟ್ಲ ಪೇಟೆ ಪ್ರವೇಶಿಸಬೇಕಾದರೆ ಕೊರೊನಾ ನೆಗೆಟಿವ್ ರಿಪೋರ್ಟ್ ಕಡ್ಡಾಯವಾಗಿದೆ.

By

Published : Jun 17, 2021, 1:35 PM IST

Vitla
ವಿಟ್ಲ ಪಟ್ಟಣಕ್ಕೆ ಬರುವವರಿಗೆ ನೆಗೆಟಿವ್ ರಿಪೋರ್ಟ್ ಕಡ್ಡಾಯ

ಬಂಟ್ವಾಳ (ದಕ್ಷಿಣಕನ್ನಡ):ಲಾಕ್​ಡೌನ್ ಜಾರಿಯಲ್ಲಿದ್ದರೂ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಿಟ್ಲ ಪಟ್ಟಣ ಪಂಚಾಯಿತಿ ಹೊಸ ಆದೇಶ ಹೊರಡಿಸಿದೆ.

ಶನಿವಾರ, ಭಾನುವಾರ ಸಂಪೂರ್ಣ ಲಾಕ್​ಡೌನ್ ಜೊತೆಗೆ ಪ್ರತಿ ದಿನವೂ ವಿಟ್ಲ ಪೇಟೆ ಪ್ರವೇಶಿಸಬೇಕಾದರೆ ಕೊರೊನಾ ನೆಗೆಟಿವ್ ರಿಪೋರ್ಟ್ ಕಡ್ಡಾಯವಾಗಿದೆ. ಇಂದಿನಿಂದಲೇ ಈ ಪ್ರಕ್ರಿಯೆ ಆರಂಭವಾಗಿದೆ.

ವಿಟ್ಲ ಪಟ್ಟಣಕ್ಕೆ ಬರುವವರಿಗೆ ನೆಗೆಟಿವ್ ರಿಪೋರ್ಟ್ ಕಡ್ಡಾಯ

ಇಂದಿನ ಕೋವಿಡ್​ ವರದಿ ಪ್ರಕಾರ, ವಿಟ್ಲದಲ್ಲಿ 62 ಸಕ್ರಿಯ ಪ್ರಕರಣಗಳಿವೆ. ತಿಂಗಳ ಹಿಂದೆ ಕೇವಲ ಒಂದೆರಡು ಪ್ರಕರಣಗಳಿದ್ದವು. ಇದೀಗ ದಿಢೀರ್​ ಜಾಸ್ತಿಯಾದ ಹಿನ್ನೆಲೆಯಲ್ಲಿ ವಿಟ್ಲ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಚಂದ್ರಕಾಂತಿ ಶೆಟ್ಟಿ, ಮುಖ್ಯಾಧಿಕಾರಿ ಮಾಲಿನಿ ನೇತೃತ್ವದಲ್ಲಿ ತುರ್ತು ಟಾಸ್ಕ್ ಫೋರ್ಸ್ ಸಭೆ ಕರೆದು ಶನಿವಾರ ಮತ್ತು ಭಾನುವಾರ ವಿಟ್ಲ ಪೇಟೆಯನ್ನು ಕಂಪ್ಲೀಟ್ ಬಂದ್ ಮಾಡಿಸುವುದು. ಜೊತೆಗೆ ಅನಿವಾರ್ಯವಾಗಿ ವಿಟ್ಲ ಪ್ರವೇಶಿಸುವವರಿಗೆ ಕೊರೊನಾ ನೆಗೆಟಿವ್ ರಿಪೋರ್ಟ್ ಕಡ್ಡಾಯಗೊಳಿಸಲು ತೀರ್ಮಾನಿಸಲಾಗಿದೆ.

ಜನರ ಅನಗತ್ಯ ತಿರುಗಾಟ ತಪ್ಪಿಸಲು ನಗರದ ನಾಲ್ಕು ರಸ್ತೆಗಳಲ್ಲಿ ತಪಾಸಣೆ ನಡೆಸಲಾಗುತ್ತಿದೆ. ಬೊಬ್ಬೆಕೇರಿ, ಮೇಗಿನಪೇಟೆ, ಬಾಕಿಮಾರ್, ನಾಡಕಚೇರಿ ಈ ನಾಲ್ಕು ರಸ್ತೆಗಳಲ್ಲಿ ಪೊಲೀಸರು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ತಪಾಸಣೆ ನಡೆಸಲಿದ್ದಾರೆ. ಒಂದು ವೇಳೆ ಕೋವಿಡ್ ವರದಿ ಇಲ್ಲದಿದ್ದರೆ ಸ್ಥಳದಲ್ಲೇ ಪರೀಕ್ಷೆ ಮಾಡಿಸಲಾಗುತ್ತದೆ. ಅದರಂತೆ ಇಂದು 80 ಜನರಿಗೆ ಪರೀಕ್ಷೆ ಮಾಡಲಾಗಿದೆ.

ವಿಟ್ಲ ಪಟ್ಟಣ ಪಂಚಾಯಿತಿ ನಿರ್ಧಾರದ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಡಿವೈಎಫ್​ಐ ಕಾರ್ಯದರ್ಶಿ ತುಳಸೀದಾಸ್ ವಿಟ್ಲ, ಈ ಆದೇಶದಿಂದ ಜನರಿಗೆ ತೊಂದರೆ ಆಗಲಿದೆ. ಆಸ್ಪತ್ರೆ, ಮೆಡಿಕಲ್, ಬ್ಯಾಂಕ್ ಹಾಗೂ ಅಗತ್ಯ ಸಾಮಾಗ್ರಿಗಳ ಖರೀದಿಗಾಗಿ ಬರುವವರಿಗೆ ಇದರಿಂದ ಸಾಕಷ್ಟು ತೊಂದರೆಯಾಗಲಿದೆ ಎಂದಿದ್ದಾರೆ.

ಕೆಲಸಕ್ಕಾಗಿ ವಿಟ್ಲವನ್ನು ಕ್ರಮಿಸಿಕೊಂಡು ಬೇರೆ ಊರುಗಳಿಗೆ ತೆರಳುವವರಿಗೆ ಪರೀಕ್ಷೆ ಮಾಡಿಸುವುದಿಲ್ಲ. ಆದರೆ, ಅನಗತ್ಯವಾಗಿ ಯಾರು ಸಂಚರಿಸುತ್ತಾರೋ ಅವರಿಗೆ ಈ ಕ್ರಮ ಕೈಗೊಳ್ಳುತ್ತಿದ್ದೇವೆ. ಕೊರೊನಾ ನಿಯಂತ್ರಣಕ್ಕೆ ಈ ಕ್ರಮ ಅನಿವಾರ್ಯ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಾಲಿನಿ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.

ಇದನ್ನೂ ಓದಿ:ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ಆರೋಪಿಯನ್ನು 3ನೇ ಬಾರಿ ವಿಚಾರಣೆಗೆ ಕರೆದ ಎಸ್​ಐಟಿ

ABOUT THE AUTHOR

...view details