ಕರ್ನಾಟಕ

karnataka

By

Published : Sep 16, 2021, 12:56 PM IST

ETV Bharat / city

ಉಗ್ರರ ನೆಲೆಯಾಗ್ತಿದೆ ರಾಜ್ಯದ ಕರಾವಳಿ.. ಗುಪ್ತಚರ ಮೂಲಗಳ ಆತಂಕಕಾರಿ ಮಾಹಿತಿ

ಶಂಕಿತ ಭಯೋತ್ಪಾದಕರು 2012ರಿಂದ ಭಾರತದಲ್ಲಿ ನಿಷೇಧಿಸಲಾದ ತುರಾಯ (Thuraya) ಉಪಗ್ರಹ ಫೋನ್‌ಗಳನ್ನು ಬಳಸುತ್ತಿದ್ದಾರೆ ಎಂದು ಗುಪ್ತಚರ ಸಂಸ್ಥೆಗಳು ಅಂದಾಜು ಮಾಡಿವೆ.

Satellite phone calls tracked to foreign locations, high alert in K'taka coastal belt
ಉಗ್ರರ ನೆಲೆಯಾಗ್ತಿದೆ ರಾಜ್ಯದ ಕರಾವಳಿ.. ಗುಪ್ತಚರ ಮೂಲಗಳ ಆತಂಕಕಾರಿ ಮಾಹಿತಿ

ಮಂಗಳೂರು: ರಾಜ್ಯದ ಕರಾವಳಿಯಲ್ಲಿ ಭಯೋತ್ಪಾದಕ ಚಟುವಟಿಕೆಗಳು ನಡೆಯುತ್ತಿರುವ ಅನುಮಾನ ವ್ಯಕ್ತವಾಗಿದೆ. ಕರಾವಳಿಗೆ ಸಮೀಪದ ದಟ್ಟಾರಣ್ಯ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ಭಯೋತ್ಪಾದಕ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಕೇಂದ್ರೀಯ ಗುಪ್ತಚರ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ. ಈ ಹಿನ್ನೆಲೆಯಲ್ಲಿ 225 ಕಿಲೋಮೀಟರ್ ಕರಾವಳಿಯಲ್ಲಿ ಮತ್ತು ಕರಾವಳಿ ಜಿಲ್ಲೆಗಳಲ್ಲಿ ತೀವ್ರ ಕಟ್ಟೆಚ್ಚರ ಘೋಷಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಕಾರವಾರ, ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ನಕ್ಸಲ್ ವಿರೋಧಿ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಗುಪ್ತಚರ ಇಲಾಖೆಗಳು ಮಾಹಿತಿ ನೀಡಿವೆ. ಜಿಲ್ಲೆಗಳ ಗುಡ್ಡಗಾಡು ಮತ್ತು ದಟ್ಟ ಅರಣ್ಯ ಪ್ರದೇಶಗಳನ್ನು ನಕ್ಸಲರು ಮತ್ತು ಶಂಕಿತ ಭಯೋತ್ಪಾದಕರು ರಾಷ್ಟ್ರವಿರೋಧಿ ಚಟುವಟಿಕೆಗಳನ್ನು ನಡೆಸಲು ಆಶ್ರಯವಾಗಿ ಬಳಸುತ್ತಿದ್ದಾರೆ. ಈ ಜಿಲ್ಲೆಗಳ ಕೆಲವು ಸ್ಥಳಗಳಿಂದ ಕಳೆದ ವಾರ ವಿದೇಶಗಳಿಗೆ ಕರೆ ಮಾಡಲಾಗಿದೆ.

ಕರೆ ಮಾಡಿದ ಸ್ಥಳಗಳನ್ನು ಟ್ರ್ಯಾಕ್ ಮಾಡಲಾಗಿದ್ದು, ಕರೆಗಳಲ್ಲಿ ಉಗ್ರಗಾಮಿ ಕೃತ್ಯಗಳನ್ನು ಜರುಗಿಸುವ ಸಂಬಂಧ ಕರೆಗಳಲ್ಲಿ ಚರ್ಚೆ ಮಾಡಲಾಗಿದೆ. ವಿದೇಶಗಳು ರಾಜ್ಯದ ಈ ಸ್ಥಳಗಳನ್ನು ನಿಯಂತ್ರಿಸುತ್ತಿವೆಯೇ ಎಂಬ ಆಯಾಮದ ಬಗ್ಗೆ ಗುಪ್ತಚರ ಇಲಾಖೆಗಳು ತನಿಖೆ ನಡೆಸುತ್ತಿವೆ.

ಶ್ರೀಲಂಕಾದ ಶಂಕಿತ ಉಗ್ರರು

ಶ್ರೀಲಂಕಾದ 12 ಶಂಕಿತ ಐಎಸ್ ಭಯೋತ್ಪಾದಕರು ಮೀನುಗಾರರ ಸೋಗಿನಲ್ಲಿ ರಾಜ್ಯದ ಕರಾವಳಿ ಜಿಲ್ಲೆಗಳಿಗೆ ನುಸುಳಿದ್ದಾರೆ ಎಂದು ಕೇಂದ್ರ ಗುಪ್ತಚರ ಸಂಸ್ಥೆಗಳು ಇತ್ತೀಚೆಗೆ ಎಚ್ಚರಿಕೆ ನೀಡಿವೆ. ಈ ಹಿನ್ನೆಲೆಯಲ್ಲಿ ಕರಾವಳಿ ಪ್ರದೇಶಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.

ಶಂಕಿತ ಭಯೋತ್ಪಾದಕರಿಂದ ಈ ಕರೆಗಳನ್ನು ಮಾಡಲಾಗಿದೆ ಎಂದು ಮೂಲಗಳು ಹೇಳುತ್ತವೆ. ಶಂಕಿತ ಭಯೋತ್ಪಾದಕರು 2012ರಿಂದ ಭಾರತದಲ್ಲಿ ನಿಷೇಧಿಸಲಾದ ತುರಾಯ (Thuraya) ಉಪಗ್ರಹ ಫೋನ್‌ಗಳನ್ನು ಬಳಸುತ್ತಿದ್ದಾರೆ ಎಂದು ಗುಪ್ತಚರ ಸಂಸ್ಥೆಗಳು ಅಂದಾಜು ಮಾಡಿವೆ.

ಗುಪ್ತಚರ ಸಂಸ್ಥೆಗಳು ಕಳೆದ ತಿಂಗಳು ಕರ್ನಾಟಕ ಮತ್ತು ಕೇರಳದ ಅನೇಕ ಸ್ಥಳಗಳ ಮೇಲೆ ದಾಳಿ ನಡೆಸಿದ್ದವು. ಭಯೋತ್ಪಾದಕರೊಂದಿಗೆ ಸಂಪರ್ಕ ಹೊಂದಿದ್ದಕ್ಕಾಗಿ ಮತ್ತು ಭಾರತ ವಿರೋಧಿ ಪ್ರಚಾರಕ್ಕಾಗಿ ಇಬ್ಬರನ್ನು ಅವರು ಬಂಧಿಸಿದ್ದವು.

ಇದನ್ನೂ ಓದಿ:Telangana Rape case: ಆರೋಪಿ ರೈಲು ಹಳಿಗೆ ಬಿದ್ದು ಆತ್ಮಹತ್ಯೆ

ABOUT THE AUTHOR

...view details