ಮಂಗಳೂರು:ಗುಜರಾತಿನ ಅದಾನಿ ಗ್ರೂಪ್ ನಿರ್ವಹಣೆಯ ಮುಂಡ್ರಾ ಬಂದರಿನಲ್ಲಿ 3 ಸಾವಿರ ಕೆ.ಜಿ ಹೆರಾಯಿನ್ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮಂಗಳೂರಿಗೆ ಆಗಮಿಸಿರುವ ಕೇಂದ್ರ ಬಂದರು, ಹಡಗು ಮತ್ತು ಜಲಸಾರಿಗೆ ಸಚಿವ ಸರ್ಬಾನಂದ ಸೊನೊವಾಲ್ ಅವರಿಗೆ ಮಾಧ್ಯಮಗೋಷ್ಠಿಯಲ್ಲಿ ಪ್ರಶ್ನೆ ಕೇಳಿದಾಗ ಉತ್ತರಿಸಲು ನಿರಾಕರಿಸಿ ಹೊರಟು ಹೋದರು.
ಮುಂಡ್ರಾ ಬಂದರಿನಲ್ಲಿ ಹೆರಾಯಿನ್ ಪತ್ತೆ ಪ್ರಕರಣ: ಪ್ರಶ್ನೆಗೆ ಉತ್ತರಿಸದೆ ಹೋದ ಕೇಂದ್ರ ಬಂದರು ಸಚಿವ
ನವ ಮಂಗಳೂರು ಬಂದರು ಇದೊಂದು ದೇಶದಲ್ಲಿಯೇ ಉತ್ತಮ ಬಂದರಾಗಿದ್ದು, ಮುಂದಿನ ದಿನಗಳಲ್ಲಿ ಈ ಬಂದರನ್ನು ವಿಶ್ವದರ್ಜೆಗೆ ಏರಿಸಲಾಗುತ್ತದೆ. ಅದಕ್ಕಾಗಿ ಯಾವೆಲ್ಲಾ ಅಂಶಗಳಲ್ಲಿ ಸುಧಾರಣೆ ಆಗಬೇಕಿದೆಯೇ ಅವುಗಳನ್ನು ಆದ್ಯತೆ ಮೇರೆಗೆ ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಕೇಂದ್ರ ಬಂದರು ಸಚಿವ ಸರ್ಬಾನಂದ ಸೊನೊವಾಲ್ ಹೇಳಿದರು.
ಮಂಗಳೂರಿನ ಸಮುದ್ರದಲ್ಲಿ ಮುಳುಗಡೆಯಾಗಿರುವ ಟಗ್ ಬೋಟ್ ಅನ್ನು ಸಮುದ್ರದಿಂದ ಮೇಲೆತ್ತುವ ಕಾರ್ಯ ನಡೆಸಲಾಗುತ್ತದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ನಾನು ನೊದಲ ಬಾರಿಗೆ ಮಂಗಳೂರಿಗೆ ಭೇಟಿ ನೀಡಿದ್ದು, ಮತ್ತೆ ನಾನು ಭೇಟಿ ನೀಡಲಿದ್ದೇನೆ. ಆಗ ಈ ಬಗ್ಗೆ ಚಿಂತನೆ ನಡೆಸಲಾಗುತ್ತದೆ. ಆದರೆ ಇದಕ್ಕೆ ಸ್ಥಳೀಯರ ಸಹಕಾರ ಇದ್ದಲ್ಲಿ ಅದರ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ನವ ಮಂಗಳೂರು ಬಂದರು ಇದೊಂದು ದೇಶದಲ್ಲಿಯೇ ಉತ್ತಮ ಬಂದರಾಗಿದ್ದು, ಮುಂದಿನ ದಿನಗಳಲ್ಲಿ ಈ ಬಂದರನ್ನು ವಿಶ್ವದರ್ಜೆಗೆ ಏರಿಸಲಾಗುತ್ತದೆ. ಅದಕ್ಕಾಗಿ ಯಾವೆಲ್ಲಾ ಅಂಶಗಳಲ್ಲಿ ಸುಧಾರಣೆ ಆಗಬೇಕಿದೆಯೇ ಅವುಗಳನ್ನು ಆದ್ಯತೆ ಮೇರೆಗೆ ಕೈಗೆತ್ತಿಕೊಳ್ಳಲಾಗುತ್ತದೆ. ಅದೇ ರೀತಿ ಮೀನುಗಾರರ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಅವರ ಜೀವರಕ್ಷಣೆಯ ಬಗ್ಗೆ ಕಾಳಜಿ ವಹಿಸಲಾಗುತ್ತದೆ ಎಂದು ಸಚಿವ ಸರ್ಬಾನಂದ ಸೊನೊವಾಲ್ ಹೇಳಿದರು.