ಮಂಗಳೂರು: ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ, ರಹಮತ್ ತರೀಕೆರೆ ಸೇರಿದಂತೆ 16 ಮಂದಿಗೆ ಸಂದೇಶ ಪ್ರಶಸ್ತಿಯನ್ನು ಇಂದು ಪ್ರಕಟಿಸಲಾಗಿದೆ. ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂದೇಶ ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನದ ವಿಶ್ವಸ್ಥರಾದ ರೋಯ್ ಕ್ಯಾಸ್ಟಲಿನೊ ಅವರು ಕೊರೊನಾ ಕಾರಣದಿಂದ 2021 ನೇ ಸಾಲಿನ ಪ್ರಶಸ್ತಿ ಘೋಷಿಸಲಾಗಿರಲಿಲ್ಲ.
ಈ ಬಾರಿ 2021 ಮತ್ತು 2022ರ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ಫೆಬ್ರವರಿ 22 ರಂದು ಸಂಜೆ 5.30ಕ್ಕೆ ಮಂಗಳೂರಿನ ಸಂದೇಶ ಪ್ರತಿಷ್ಠಾನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.
2020-2021ನೇ ಸಾಲಿನ ಪ್ರಶಸ್ತಿ ಪಡೆದವರ ಹೆಸರು:
- ಸಂದೇಶ ಸಾಹಿತ್ಯ ಪ್ರಶಸ್ತಿ ( ಕನ್ನಡ) - ಬರಗೂರು ರಾಮಚಂದ್ರಪ್ಪ
- ಸಂದೇಶ ಸಾಹಿತ್ಯ ಪ್ರಶಸ್ತಿ ( ಕೊಂಕಣಿ)- ಅಮರ್ ಕೊಂಕಣಿ ( ಅರ್ಧ ವಾರ್ಷಿಕ ಪ್ರಶಸ್ತಿ)
- ಸಂದೇಶ ಸಾಹಿತ್ಯ ಪ್ರಶಸ್ತಿ (ತುಳು)- ಡಾ.ಸುನಿತಾ ಎಂ ಶೆಟ್ಟಿ
- ಸಂದೇಶ ಮಾಧ್ಯಮ ಪ್ರಶಸ್ತಿ ( ಪತ್ರಿಕೋದ್ಯಮ) - ನಾಗೇಶ್ ಹೆಗಡೆ
- ಸಂದೇಶ ಕೊಂಕಣಿ ಸಂಗೀತ ಪ್ರಶಸ್ತಿ- ಮೀನ ರೆಬಿಂಬಸ್
- ಸಂದೇಶ ಕಲಾ ಪ್ರಶಸ್ತಿ- ಅವಿತಾಸ್ ಎಡೊಲ್ಫಸ್ ಕುಟಿನ್ಹಾ
- ಸಂದೇಶ ಶಿಕ್ಷಣ ಪ್ರಶಸ್ತಿ- ಡಾ ಲಕ್ಷ್ಮಣ್ ಸಾಬ್ ಚೌರಿ
- ಸಂದೇಶ ವಿಶೇಷ ಪ್ರಶಸ್ತಿ- ಸಮರ್ಥನಂ ಟ್ರಸ್ಟ್
2021-22ನೇ ಸಾಲಿನ ಪ್ರಶಸ್ತಿ ವಿಜೇತರ ಪಟ್ಟಿ: - ಸಂದೇಶ ಸಾಹಿತ್ಯ ಪ್ರಶಸ್ತಿ ( ಕನ್ನಡ) - ರಹಮತ್ ತರೀಕೆರೆ
- ಸಂದೇಶ ಸಾಹಿತ್ಯ ಪ್ರಶಸ್ತಿ (ಕೊಂಕಣಿ)- ಮೆಲ್ವಿನ್ ರೊಡ್ರೀಗಸ್
- ಸಂದೇಶ ಸಾಹಿತ್ಯ ಪ್ರಶಸ್ತಿ (ತುಳು) - ಬಿ ಕೆ ಗಂಗಾಧರ್ ಕಿರೋಡಿಯನ್
- ಸಂದೇಶ ಮಾಧ್ಯಮ ಪ್ರಶಸ್ತಿ ( ಪತ್ರಿಕೋದ್ಯಮ)- ಡಾ ಟಿ ಸಿ ಪೂರ್ಣಿಮ
- ಸಂದೇಶ ಕೊಂಕಣಿ ಸಂಗೀತ ಪ್ರಶಸ್ತಿ- ಆಲ್ವಿನ್ ನೊರೊನ್ಹ
- ಸಂದೇಶ ಕಲಾ ಪ್ರಶಸ್ತಿ- ಕಾಸರಗೋಡ್ ಚಿನ್ನ
- ಸಂದೇಶ ಶಿಕ್ಷಣ ಪ್ರಶಯ- ಡಾ.ಪಿ.ಕೆ. ರಾಜಶೇಖರ
- ಸಂದೇಶ ವಿಶೇಷ ಪ್ರಶಸ್ತಿ- ಸ. ರಘುನಾಥ್
ಇದನ್ನೂ ಓದಿ: ಲತಾ ಮಂಗೇಶ್ಕರ್ ದೇವಸ್ಥಾನ ಕಟ್ಟಲು ಮುಂದಾದ ಗಾಯಕ : 6 ತಿಂಗಳೊಳಗೆ ದೇವಾಲಯ ನಿರ್ಮಾಣ