ಬಂಟ್ವಾಳ:ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಜೀಪನಡು ಗ್ರಾಮ ಕ್ವಾರಂಟೈನ್ನಲ್ಲಿ ಇರುವ ಕಾರಣ ತಾಲೂಕಾಡಳಿತ, ಆರೋಗ್ಯ ಮತ್ತು ಪೊಲೀಸ್ ಇಲಾಖೆಗಳ ನಿಗಾದಲ್ಲಿ ಗ್ರಾಮದ ಕಾರ್ಯ ಚಟುವಟಿಕೆಗಳು ನಡೆಯುತ್ತಿವೆ.
10 ತಿಂಗಳ ಮಗುವಿಗೆ ಕೊರೊನಾ ಪಾಸಿಟಿವ್: ಸಜೀಪನಡು ಗ್ರಾಮದ ಮೇಲೆ ತೀವ್ರ ನಿಗಾ - ಕೊರೊನಾ ವೈರಸ್
ಬಂಟ್ವಾಳ ತಾಲೂಕಿನ ಸಜೀಪನಡು ಗ್ರಾಮ ಕ್ವಾರಂಟೈನ್ನಲ್ಲಿರುವ ಕಾರಣ ತಾಲೂಕಾಡಳಿತ, ಪೊಲೀಸ್ ಇಲಾಖೆ, ಆರೋಗ್ಯ ಮತ್ತು ಪಂಚಾಯಿತಿ ಜನರ ಸುರಕ್ಷತೆ ಮತ್ತು ಅಗತ್ಯತೆಗಳ ಕುರಿತು ಕ್ರಮ ಕೈಗೊಂಡಿದೆ.
![10 ತಿಂಗಳ ಮಗುವಿಗೆ ಕೊರೊನಾ ಪಾಸಿಟಿವ್: ಸಜೀಪನಡು ಗ್ರಾಮದ ಮೇಲೆ ತೀವ್ರ ನಿಗಾ sajipanadu-village-in-home-quarantine](https://etvbharatimages.akamaized.net/etvbharat/prod-images/768-512-6575328-thumbnail-3x2-sajepadan.jpg)
ಆರೋಗ್ಯ ಇಲಾಖೆ ಮತ್ತು ಪೊಲೀಸ್ ಸಿಬ್ಬಂದಿ ಮನೆ ಮನೆಯ ಮಾಹಿತಿ ಸಂಗ್ರಹಿಸುತ್ತಿದ್ದು, ಆಶಾ ಕಾರ್ಯಕರ್ತೆಯರು ನೆರವಾಗಿದ್ದಾರೆ. ಅಗತ್ಯ ವಸ್ತುಗಳ ಪೂರೈಕೆಯ ವಿಚಾರದಲ್ಲಿ ಪೊಲೀಸರು ಮತ್ತು ಸ್ಥಳೀಯ ಆಡಳಿತ ಗ್ರಾಮದ ಜನರಿಗೆ ನೆರವಾಗಿದೆ. ಇದೇ ವೇಳೆ ವ್ಯಕ್ತಿಯೋರ್ವ ಮುಡಿಪುವಿನ ಮನೆಯಿಂದ ಸಜೀಪನಡು ಗ್ರಾಮಕ್ಕೆ ಬಂದಿದ್ದು, ಆತನನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ತಡೆದು ಇಲಾಖೆ ಸೂಚಿಸಿದ ಹೋಂ ಕ್ವಾರಂಟೈನ್ಗೆ ಕಳುಹಿಸಿದ್ದಾರೆ.
ಇಡೀ ಸಜೀಪನಡು ಗ್ರಾಮವನ್ನು ಲಾಕ್ಡೌನ್ ಮಾಡಿ ನಿಗಾ ಇರಿಸಲಾಗಿದ್ದು, ಯಾರೂ ಕೂಡಾ ಹೊರಗೆ ಮತ್ತು ಒಳಗೆ ಬಾರದಂತೆ ಕಟ್ಟೆಚ್ಚರ ವಹಿಸಲಾಗಿದೆ. ಹೆಚ್ಚುವರಿಯಾಗಿ ಒಂದು ಕೆಎಸ್ಆರ್ಪಿ ಪೊಲೀಸ್ ತುಕಡಿಯನ್ನು ಕೂಡಾ ನಿಯೋಜನೆ ಮಾಡಲಾಗಿದೆ.