ಮಂಗಳೂರು:ಮಂಗಳೂರಿನ ಬೈಕಂಪಾಡಿಯ ಮೀನಕಳಿಯಲ್ಲಿ ದುಷ್ಕರ್ಮಿಗಳು ನಡೆಸಿದ ದಾಳಿಯಲ್ಲಿ ಗಂಭೀರ ಗಾಯಗೊಂಡಿದ್ದ ರೌಡಿಶೀಟರ್ ಸಾವನ್ನಪ್ಪಿದ್ದು, ಕೊಲೆ ಪ್ರಕರಣ ದಾಖಲಿಸಲಾಗಿದೆ. ಬೈಕಂಪಾಡಿಯ ರಾಜ ಯಾನೆ ರಾಘವೇಂದ್ರ (28) ಮೃತ ವ್ಯಕ್ತಿ.
ಮಂಗಳೂರಲ್ಲಿ ತಲವಾರಿನಿಂದ ಕೊಚ್ಚಿ ರೌಡಿಶೀಟರ್ ಕೊಲೆ - ಬೈಕಂಪಾಡಿ ರಾಜ ಯಾಕೆ ರಾಘವೇಂದ್ರ
ರೌಡಿಶೀಟರ್ ಬೈಕಂಪಾಡಿಯ ರಾಜ ಯಾನೆ ರಾಘವೇಂದ್ರನಿಗೆ ತಲವಾರು ಮತ್ತು ಚೂರಿಯಿಂದ ಹಲ್ಲೆ ಮಾಡಿ ಕೊಲೆಗೈದ ಘಟನೆ ನಡೆದಿದೆ.
ರಾಜ ಯಾನೆ ರಾಘವೇಂದ್ರ ರೌಡಿಶೀಟರ್ ಆಗಿದ್ದು, ಸೋಮವಾರ ಸಂಜೆ ಈತನ ಕೊಲೆಗೆ ಯತ್ನಿಸಲಾಗಿತ್ತು. ಬೈಕಂಪಾಡಿಯ ಮೀನಕಳಿಯಲ್ಲಿ ಬೈಕ್ನಲ್ಲಿ ಬಂದ ಇಬ್ಬರು ಈತನ ಮೇಲೆ ತಲವಾರು ಮತ್ತು ಚೂರಿಗಳಿಂದ ಹಲ್ಲೆ ನಡೆಸಿದ್ದರು. ಹಲ್ಲೆಯಿಂದ ಈತನ ಮುಖ, ತಲೆ ಮತ್ತು ಕೈಗೆ ಗಂಭೀರ ಗಾಯವಾಗಿತ್ತು. ಈತನನ್ನು ನಗರದ ಎ ಜೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಈತ ಸಾವನ್ನಪ್ಪಿದ್ದಾನೆ. ಪಣಂಬೂರು ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಲಾಗಿದೆ. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ಇದನ್ನೂ ಓದಿ :ಪತ್ನಿಗೆ ಸರ್ಕಾರಿ ಕೆಲಸ ಸಿಕ್ಕಿದ್ದಕ್ಕೆ ಆಕೆಯ ಕೈಯನ್ನೇ ಕತ್ತರಿಸಿದ ಕಿರಾತಕ ಗಂಡ!