ಕರ್ನಾಟಕ

karnataka

ETV Bharat / city

ಮಂಗಳೂರಿನ ತೊಕ್ಕೊಟ್ಟು ಫ್ಲೈ ಓವರ್ ಬಳಿ ರಸ್ತೆಯಲ್ಲಿ ತುಂಬಿದ ನೀರು : ವಾಹನ ಸವಾರರಿಗೆ ಕಿರಿಕಿರಿ - ಮಂಗಳೂರಿನ ತೊಕ್ಕೊಟ್ಟು ಫ್ಲೈ ಓವರ್ ಬಳಿ ರಸ್ತೆಯಲ್ಲಿ ತುಂಬಿದ ನೀರು

ಕೇರಳದಿಂದ ಮಂಗಳೂರಿಗೆ ಬರುವ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ತೊಕ್ಕೊಟ್ಟು ಫ್ಲೈಓವರ್ ಬಳಿ ನೀರು ನಿಂತು ವಾಹನ ಸವಾರರು ತೊಂದರೆ ಅನುಭವಿಸುವಂತಾಗಿತ್ತು. ನಿರಂತರ ವಾಹನ ಓಡಾಟ ಇರುವ ಈ ರಸ್ತೆಯಲ್ಲಿ ನೀರು ನಿಂತ ಪರಿಣಾಮ ನೀರಿನಲ್ಲಿಯೇ ವಾಹನವನ್ನು ಸವಾರರು ಕೊಂಡೊಯ್ದಿದ್ದಾರೆ..

Mangalore
ಮಂಗಳೂರಿನ ತೊಕ್ಕೊಟ್ಟು ಫ್ಲೈ ಓವರ್ ಬಳಿ ರಸ್ತೆಯಲ್ಲಿ ತುಂಬಿದ ನೀರು

By

Published : Sep 27, 2021, 9:23 PM IST

ಮಂಗಳೂರು :ಇಂದು ಮುಂಜಾನೆಯಿಂದ ಸುರಿದ ಮಳೆಗೆ ಮಂಗಳೂರಿನ ತೊಕ್ಕೊಟ್ಟು ಫ್ಲೈಓವರ್ ಬಳಿಯ ರಸ್ತೆಯಲ್ಲಿ ನೀರು ತುಂಬಿ, ವಾಹನ ಸವಾರರು ಕಿರಿ ಕಿರಿ ಅನುಭವಿಸಿದರು.

ಮಂಗಳೂರಿನ ತೊಕ್ಕೊಟ್ಟು ಫ್ಲೈಓವರ್ ಬಳಿ ರಸ್ತೆಯಲ್ಲಿ ತುಂಬಿದ ನೀರು..

ಕೇರಳದಿಂದ ಮಂಗಳೂರಿಗೆ ಬರುವ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ತೊಕ್ಕೊಟ್ಟು ಫ್ಲೈಓವರ್ ಬಳಿ ನೀರು ನಿಂತು ವಾಹನ ಸವಾರರು ತೊಂದರೆ ಅನುಭವಿಸುವಂತಾಗಿತ್ತು. ನಿರಂತರ ವಾಹನ ಓಡಾಟ ಇರುವ ಈ ರಸ್ತೆಯಲ್ಲಿ ನೀರು ನಿಂತ ಪರಿಣಾಮ ನೀರಿನಲ್ಲಿಯೇ ವಾಹನವನ್ನು ಸವಾರರು ಕೊಂಡೊಯ್ದಿದ್ದಾರೆ.

ಇದೇ ವೇಳೆ ವ್ಯಕ್ತಿಯೋರ್ವರು ನೀರು ಸರಾಗವಾಗಿ ಹರಿದು ಹೋಗಲು ತನ್ನ ಕೈಯಿಂದಲೇ ಬ್ಲಾಕ್​​ಗಳನ್ನು ತೆರವು ಮಾಡುತ್ತಿರುವ ದೃಶ್ಯ ಕಂಡು ಬಂತು. ರಸ್ತೆಯಿಂದ ನೀರು ಚರಂಡಿಗೆ ಹರಿದು ಹೋಗುವ ಜಾಗ ಮುಚ್ಚಿ ಹೋದ ಪರಿಣಾಮ ರಸ್ತೆಯಲ್ಲಿ ನೀರು ನಿಲ್ಲುವಂತಾಗಿದ್ದು, ಮಳೆ ಕಡಿಮೆಯಾದ ಬಳಿಕ ರಸ್ತೆಯಲ್ಲಿ ನಿಂತ ನೀರು ಕಡಿಮೆಯಾಗಿದೆ.

ABOUT THE AUTHOR

...view details