ಕರ್ನಾಟಕ

karnataka

ETV Bharat / city

Road accident : ಬಂಟ್ವಾಳದಲ್ಲಿ ಕ್ಯಾಟರಿಂಗ್ ವಾಹನ ಮರಕ್ಕೆ ಡಿಕ್ಕಿ, ಇಬ್ಬರ ದುರ್ಮರಣ - ಬಂಟ್ವಾಳದಲ್ಲಿ ಕ್ಯಾಟರಿಂಗ್ ವಾಹನ ಮರಕ್ಕೆ ಡಿಕ್ಕಿ ಹೊಡೆದು ಇಬ್ಬರು ಸಾವು

ತಕ್ಷಣ ಗಾಯಾಳುಗಳನ್ನು ಸಮೀಪದ ತುಂಬೆ ಆಸ್ಪತ್ರೆಗೆ ದಾಖಲಾಯಿಸಲಾಯಿತಾದರೂ ಇಬ್ಬರು ಅಸುನೀಗಿದ್ದಾರೆ. ಈ ಕುರಿತು ಬಂಟ್ವಾಳ ಸಂಚಾರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

ಬಂಟ್ವಾಳದಲ್ಲಿ ಕ್ಯಾಟರಿಂಗ್ ವಾಹನ ಮರಕ್ಕೆ ಡಿಕ್ಕಿ
ಬಂಟ್ವಾಳದಲ್ಲಿ ಕ್ಯಾಟರಿಂಗ್ ವಾಹನ ಮರಕ್ಕೆ ಡಿಕ್ಕಿ

By

Published : Nov 14, 2021, 6:56 PM IST

ಬಂಟ್ವಾಳ :ತಾಲೂಕಿನ ಮಂಗಳೂರು ಬಿ.ಸಿ.ರೋಡ್ ಮಧ್ಯೆ ಬ್ರಹ್ಮರಕೂಟ್ಲು ಸಮೀಪ ರಾಮಲ್ ಕಟ್ಟೆ ಎಂಬಲ್ಲಿ ಕ್ಯಾಟರಿಂಗ್ ವಾಹನವೊಂದು ಮರಕ್ಕೆ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಇಬ್ಬರು ಯುವಕರು ಸಾವನ್ನಪ್ಪಿದ್ದು, ಮತ್ತಿಬ್ಬರು ಗಾಯಗೊಂಡಿದ್ದಾರೆ.

ಉಪ್ಪಿನಂಗಡಿ ನಿವಾಸಿಗಳಾದ ಚೇತನ್ (25) ಮತ್ತು ಆಶಿತ್ (21) ಎಂಬುವರು ಮೃತ ದಪರ್ದೈವಿಗಳು. ಸಿಂಚನ್ ಮತ್ತು ಸುದೀಪ್ ಎಂಬ ಇಬ್ಬರು ಯುವಕರು ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕ್ಯಾಟರಿಂಗ್ ಕೆಲಸವನ್ನು ಮುಗಿಸಿ ಮರಳುತ್ತಿದ್ದ ವೇಳೆ ರಾಷ್ಟ್ರೀಯ ಹೆದ್ದಾರಿ-75ರ(NH 75) ತುಂಬೆ ರಾಮಲಕಟ್ಟೆಯ ಬಳಿ ವಾಹನ ಮರಕ್ಕೆ ಡಿಕ್ಕಿ ಹೊಡೆದಿದೆ (Road accident in Bantwal).

ತಕ್ಷಣ ಗಾಯಾಳುಗಳನ್ನು ಸಮೀಪದ ತುಂಬೆ ಆಸ್ಪತ್ರೆಗೆ ದಾಖಲಾಯಿಸಲಾಯಿತಾದರೂ ಇಬ್ಬರು ಅಸುನೀಗಿದ್ದಾರೆ. ಈ ಕುರಿತು ಬಂಟ್ವಾಳ ಸಂಚಾರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಓದಿ:ಮಹಿಳೆ ಮೇಲೆ ಮೂರು ನಾಯಿಗಳ ಅಟ್ಟಹಾಸ : ಜನರು ಹೊಡೆದು ಬಡಿದರೂ ರಕ್ಕಸ ರೂಪ ತಾಳಿದ ಶ್ವಾನಗಳು!

ABOUT THE AUTHOR

...view details