ಮಂಗಳೂರು: ನಂಬಿಸಿ ಪ್ರೀತಿಯ ನಾಟಕವಾಡಿ ಲಾಡ್ಜ್ಗೆ ಕರೆದೊಯ್ದು ಬಾಲಕಿ ಮೇಲೆ ಅತ್ಯಾಚಾರ ಎಸಗಿರುವ ಆರೋಪಿಯನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ. ನಗರದ ಹೊರವಲಯದ ಕಿನ್ನಿಗೋಳಿ ಗಾಳಿಜೋರ ನಿವಾಸಿ ಬಂಧಿತ ಆರೋಪಿ.
ನಂಬಿಸಿ ಅಪ್ರಾಪ್ತೆಯ ಮೇಲೆ ಅತ್ಯಾಚಾರ: ಆರೋಪಿ ಅಂದರ್ - ಮಂಗಳೂರು ರೇಪ್ ಕೇಸ್
ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
rape
ಆರೋಪಿ ನಗರದ ಬೈಕಂಪಾಡಿಯಲ್ಲಿ ಮೊಬೈಲ್ ಅಂಗಡಿ ನಡೆಸುತ್ತಿದ್ದ. ಸಿಮ್ ಪಡೆಯಲು ಬಂದಿದ್ದ ಅಪ್ರಾಪ್ತೆಯ ಮೊಬೈಲ್ ಸಂಖ್ಯೆಯನ್ನು ಪಡೆದುಕೊಂಡು ಆಕೆಯ ಜೊತೆ ಸ್ನೇಹ ಬೆಳೆಸಿದ್ದ. ಬಳಿಕ ಪ್ರೀತಿಯ ನಾಟಕವಾಡಿದ್ದ. ಜೊತೆಗೆ ಅನ್ಯ ಧರ್ಮದವನಾಗಿದ್ದರೂ ಹಿಂದೂ ಎಂದು ನಂಬಿಸಿದ್ದ.
2021ರ ಆಗಸ್ಟ್ನಲ್ಲಿ ಲಾಡ್ಜ್ಗೆ ಕರೆದೊಯ್ದು ಬಲವಂತವಾಗಿ ಲೈಂಗಿಕ ಸಂಪರ್ಕ ಬೆಳೆಸಿ, ಆಕೆಗೆ ಬೆದರಿಕೆಯೊಡ್ಡಿದ್ದನಂತೆ. ಇದೀಗ ಸಂತ್ರಸ್ತ ಬಾಲಕಿ ಆರೋಪಿಯ ಕಿರುಕುಳದಿಂದ ಬೇಸತ್ತು ಸುರತ್ಕಲ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.