ಕರ್ನಾಟಕ

karnataka

ETV Bharat / city

ದ.ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ: ಕಡಲ ತೀರದಲ್ಲಿ ಅಲೆಗಳ ಅಬ್ಬರ - undefined

ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ ನಾಳೆಯೊಳಗೆ ಮುಂಗಾರು ತೀವ್ರಗೊಳ್ಳಲಿದ್ದು, ಚಂಡಮಾರುತ ಬೀಸುವ ಸಂಭವವಿದೆ. ಮುಂಗಾರು ಪ್ರವೇಶ ಹಾಗೂ ಚಂಡಮಾರುತದ ಹಿನ್ನೆಲೆ ಕರಾವಳಿಯಲ್ಲಿ ಭಾರಿ ಗಾಳಿ ಬೀಸುತ್ತಿದೆ.

Dakshina kannada

By

Published : Jun 12, 2019, 7:03 PM IST

ಮಂಗಳೂರು: ಲಕ್ಷದ್ವೀಪದಲ್ಲಿ ವಾಯುಭಾರ ಕುಸಿತ ಉಂಟಾದ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿದೆ. ಕಡಲು ಕೂಡ ಪ್ರಕ್ಷುದ್ಧಗೊಂಡಿದ್ದು, ಅಲೆಗಳ ಅಬ್ಬರವೂ ಹೆಚ್ಚಾಗಿದೆ.

ದಕ್ಷಿಣ ಕನ್ನಡದಲ್ಲಿ ಭಾರಿ ಮಳೆ

ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ ನಾಳೆಯೊಳಗೆ ಮುಂಗಾರು ತೀವ್ರಗೊಳ್ಳಲಿದ್ದು, ಚಂಡಮಾರುತ ಬೀಸುವ ಸಂಭವವಿದೆ. ಮುಂಗಾರು ಪ್ರವೇಶ ಹಾಗೂ ಚಂಡಮಾರುತದ ಹಿನ್ನೆಲೆ ಕರಾವಳಿಯಲ್ಲಿ ಭಾರಿ ಗಾಳಿ ಬೀಸುತ್ತಿದೆ.

ಪಣಂಬೂರು, ತಣ್ಣೀರುಬಾವಿ, ಉಳ್ಳಾಲ ಹಾಗೂ ಸೋಮೇಶ್ವರ ಸಮುದ್ರ ತೀರಗಳಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿದ್ದು, ಪ್ರವಾಸಿಗರಿಗೆ ಸಮುದ್ರಕ್ಕಿಳಿದು ಆಟವಾಡುವುದನ್ನು ನಿಷೇಧಿಸಲಾಗಿದೆ. ಅಲ್ಲದೆ ಲೈಫ್​​ಗಾರ್ಡ್​ಗಳಿಗೆ ನಿಗಾ ಇಡಲು ಸೂಚಿಸಲಾಗಿದೆ.

For All Latest Updates

TAGGED:

ABOUT THE AUTHOR

...view details