ಪುತ್ತೂರು(ದಕ್ಷಿಣಕನ್ನಡ):ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಕೊರೊನಾ ರಾಜಕೀಯ ಮಾಡುತ್ತಿವೆ ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಆರೋಪಿಸಿದ್ದಾರೆ.
ಸರ್ಕಾರದ ವಿರುದ್ಧ ವಿಪಕ್ಷದವರಿಂದ ಕೊರೊನಾ ರಾಜಕೀಯ: ಶಾಸಕ ಸಂಜೀವ ಮಠಂದೂರು - Puttur MLA Sanjeeva Matandoor
ವಿಪಕ್ಷದವರಿಗೆ ಆರೋಪ ಮಾಡಲು ಬೇರೆ ಏನೂ ಇಲ್ಲದ ಕಾರಣ ರಾಜ್ಯ ಸರ್ಕಾರದ ವಿರುದ್ಧ ಕೊರೊನಾ ರಾಜಕೀಯ ಮಾಡುತ್ತಿದ್ದಾರೆ. ನಾನು ಕಂಡುಕೊಂಡಂತೆ ಎಲ್ಲವೂ ಪಾರದರ್ಶಕವಾಗಿದೆ ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದ್ದಾರೆ.
ನಗರದ ಮಿನಿ ವಿಧಾನಸೌಧದ ಶಾಸಕರ ಕಚೇರಿಯಲ್ಲಿ ಮಾತಾಡಿದ ಅವರು, ಕೋವಿಡ್ ಕುರಿತು ಮುಖ್ಯಮಂತ್ರಿ ಅವರು ಕೂಡಾ ಏನೇನಾಗಿದೆ ಎಂಬುದನ್ನು ತಿಳಿಸಿದ್ದಾರೆ. ಆದರೆ, ವಿಪಕ್ಷ ನಾಯಕ ಸಿದ್ಧರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ಮುಖಂಡರು ರಾಜ್ಯ ಸರ್ಕಾರಕ್ಕೆ ಕೊರೊನಾ ಲೆಕ್ಕ ಕೊಡಿ ಎನ್ನುತ್ತಿದ್ದಾರೆ. ಅವರಿಗೆ ಅಧಿಕೃತ ಲೆಕ್ಕ ಬೇಕಾದರೆ ಸಂಬಂಧಪಟ್ಟ ಇಲಾಖೆಯ ಮುಖ್ಯಸ್ಥರು ಲೆಕ್ಕ ಕೊಡುತ್ತಾರೆ. ಸಾರ್ವಜನಿಕವಾಗಿ ಪತ್ರಿಕೆಗಳ ಮೂಲಕ ಲೆಕ್ಕ ಕೊಡಿ ಎಂದು ಹೇಳುವುದು ರಾಜಕೀಯ ಪ್ರೇರಿತವಾದ ಕೆಲಸ.
ವಿಪಕ್ಷದವರಿಗೆ ಆರೋಪ ಮಾಡಲು ಬೇರೆ ಏನೂ ಇಲ್ಲದ ಕಾರಣ ಕೊರೊನಾ ರಾಜಕೀಯ ಮಾಡುತ್ತಿದ್ದಾರೆ. ನಾನು ಕಂಡುಕೊಂಡಂತೆ ಎಲ್ಲವೂ ಪಾರದರ್ಶಕವಾಗಿದೆ. ಕೋವಿಡ್ ನಿಯಮದ ಪ್ರಕಾರವೇ ಎಲ್ಲಾ ಕೆಲಸ ಆಗುತ್ತಿದೆ ಎಂದರು.