ಕರ್ನಾಟಕ

karnataka

ETV Bharat / city

ಕೋವಿಡ್ ವಾರಿಯರ್ಸ್​ಗೆ ನಮನ: ವಿದ್ಯಾರ್ಥಿಗಳಿಂದ ಪುಣೆ ಟು ಕನ್ಯಾಕುಮಾರಿ ಸೈಕಲ್ ಜಾಥಾ - mangalure news

ಕೋವಿಡ್ ವಾರಿಯರ್ಸ್​ಗೆ ನಮನ ಸಲ್ಲಿಸುವ ನಿಮಿತ್ತ ಪುಣೆಯಿಂದ ಕನ್ಯಾಕುಮಾರಿಗೆ ಸೈಕಲ್‌ ಮೇಲೆ ಹೊರಟಿರುವ 6 ಮಂದಿ ವಿದ್ಯಾರ್ಥಿಗಳು ಮಂಗಳೂರು ತಲುಪಿದ್ದಾರೆ.

Cycle Jatha
ಸೈಕಲ್ ಜಾಥಾ

By

Published : Nov 5, 2021, 9:49 AM IST

ಮಂಗಳೂರು: ವಿಶ್ವಶಾಂತಿ ಹಾಗೂ ಕೋವಿಡ್ ವಾರಿಯರ್ಸ್​ಗೆ ನಮನ ಸಲ್ಲಿಸುವ ಉದ್ದೇಶದಿಂದ ಪುಣೆಯಿಂದ ಕನ್ಯಾಕುಮಾರಿವರೆಗೆ ಸೈಕಲ್ ಜಾಥಾ ಮಾಡುತ್ತಿರುವ ಆರು ಮಂದಿ ವಿದ್ಯಾರ್ಥಿಗಳು ಇದೀಗ ಮಂಗಳೂರು ತಲುಪಿದ್ದಾರೆ.

ಪುಣೆಯಿಂದ ಪ್ರಯಾಣ ಆರಂಭಿಸಿರುವ ಈ ವಿದ್ಯಾರ್ಥಿಗಳು ಈಗಾಗಲೇ ಐದು ದಿನಗಳ ಪ್ರಯಾಣ ಮುಗಿಸಿದ್ದಾರೆ. ನಿತ್ಯವೂ 160 ಕಿ.ಮೀ. ಪ್ರಯಾಣ ಬೆಳೆಸುತ್ತಿದ್ದು, ಮುಂದಿನ ಐದು ದಿನಗಳಲ್ಲಿ ಕನ್ಯಾಕುಮಾರಿ ತಲುಪಲಿದ್ದಾರೆ.

ಸೈಕಲ್ ಜಾಥಾ ಮಾಡುತ್ತಿರುವ ಆರು ಮಂದಿ ವಿದ್ಯಾರ್ಥಿಗಳು

ಪುಣೆಯ ಎಂಐಟಿ- ಎಡಿಟಿ ಯುನಿವರ್ಸಿಟಿ ಹಾಗೂ ಸಿಯುಪಿ ಕಾಲೇಜಿನ ಆರು ವಿದ್ಯಾರ್ಥಿಗಳು ಈ ಸೈಕಲ್ ಸವಾರಿ ಕೈಗೊಂಡಿದ್ದಾರೆ. ಮುಂದಿನ ಐದು ದಿನಗಳಲ್ಲಿ ಇವರು ಕನ್ಯಾಕುಮಾರಿಯ ವಿವೇಕಾನಂದ ರಾಕ್ ಅನ್ನು ತಲುಪಲಿದ್ದು, ಅಲ್ಲಿ ತಮ್ಮ ಸೈಕಲ್ ಜಾಥಾವನ್ನು ಅಂತ್ಯಗೊಳಿಸಲಿದ್ದಾರೆ.

ಕೋವಿಡ್ ಲಾಕ್​ಡೌನ್ ಸಂದರ್ಭದಲ್ಲಿ ಜಿಮ್​ಗಳು ಬಂದ್​ ಆಗಿದ್ದ ವೇಳೆ ಸೈಕಲ್ ಅಭ್ಯಾಸದಲ್ಲಿ ತೊಡಗಿದ್ದ ಈ ವಿದ್ಯಾರ್ಥಿಗಳು, ಇದೀಗ ಸೈಕಲ್ ಜಾಥಾವನ್ನು ಕೈಗೊಂಡು ತಮ್ಮ ಗುರಿ ತಲುಪುತ್ತಿದ್ದಾರೆ.

ABOUT THE AUTHOR

...view details