ಕರ್ನಾಟಕ

karnataka

ETV Bharat / city

ಕೋವಿಡ್-19: ಮಂಗಳೂರು ಏರ್​ಪೋರ್ಟ್​ಗೆ ಮೇ 18ರಂದು ಸಾರ್ವಜನಿಕ ಪ್ರವೇಶ ನಿರ್ಬಂಧ - ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

ಮೇ 12ರಂದು ಅನಿವಾಸಿ ಕನ್ನಡಿಗರು ದುಬೈನಿಂದ ಬಂದಿದ್ದು, ಅವರಲ್ಲಿ 20 ಮಂದಿಗೆ ಕೋವಿಡ್-19 ಇರುವುದು ದೃಢಪಟ್ಟಿದೆ. ಸೋಂಕು ಹೆಚ್ಚುವ ಭೀತಿಯಿಂದ ನಗರದ ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಳೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

Public access to Mangalore airport tomorrow
ಕೋವಿಡ್-19 ಭೀತಿ, ಮಂಗಳೂರು ವಿಮಾನ ನಿಲ್ದಾಣಕ್ಕೆ ನಾಳೆ ಸಾರ್ವಜನಿಕ ಪ್ರವೇಶ ನಿರ್ಬಂಧ

By

Published : May 17, 2020, 11:48 PM IST

ಮಂಗಳೂರು:ಕೋವಿಡ್-19 ಭೀತಿ ಹಿನ್ನೆಲ್ಲೆಯಲ್ಲಿ ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಳೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ವಿಮಾನ ನಿಲ್ದಾಣದ ಪ್ರಾಧಿಕಾರ ಪ್ರಕಟಣೆಯಲ್ಲಿ ತಿಳಿಸಿದೆ.

ಮೇ 12ರಂದು ಅನಿವಾಸಿ ಕನ್ನಡಿಗರು ದುಬೈನಿಂದ ಬಂದಿದ್ದು, ಅವರಲ್ಲಿ ದಕ್ಷಣಿ ಕನ್ನಡದ 15 ಮಂದಿಗೆ ಹಾಗೂ ಉಡುಪಿಯ ಐವರಿಗೆ ಸೋಂಕು ದೃಢಪಟ್ಟಿದೆ. ಆದ್ದರಿಂದ ಕೋವಿಡ್-19 ಸೋಂಕಿನ ಮುನ್ನೆಚ್ಚರಿಕೆಯ ಹಿನ್ನೆಲೆಯಲ್ಲಿ ನಾಳೆ ಬೆಳಗ್ಗೆ 11 ಗಂಟೆಯಿಂದ ಸಂಪೂರ್ಣ ಸ್ಯಾನಿಟೈಸೇಷನ್ ಪ್ರಕ್ರಿಯೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ನಾಳೆ ವಿಮಾನ ನಿಲ್ದಾಣಕ್ಕೆ ಸಾರ್ವಜನಿಕರ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ ಎಂದಿದೆ.

ABOUT THE AUTHOR

...view details